Advertisement

ಕನ್ನಡಿಗರಿಂದಲೇ ಕನ್ನಡ ಉಳಿವು ಸಾಧ್ಯ

06:27 AM Feb 20, 2019 | Team Udayavani |

ಕೆಂಗೇರಿ: ಕನ್ನಡವನ್ನು ಕನ್ನಡಿಗರಿಂದಲೆ ಉಳಿಸಿ ಕಾಪಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹಿರಿಯ ಸಾಹಿತಿ ಬಿ.ಆರ್‌.ಲಕ್ಷ್ಮಣರಾವ್‌ ಹೇಳಿದರು. ಉಲ್ಲಾಳ ವಾರ್ಡಿನ ಉಪಕಾರ್‌ ಬಡಾವಣೆಯ ಊರ್ವಾ ಸಭಾಂಗಣದಲ್ಲಿ ಸವಿ ಗಾನಲಹರಿ ಸುಗಮ ಸಂಗೀತ ಶಾಲೆಯ 18ನೇ ವಾರ್ಷಿಕೋತ್ಸವ ಮತ್ತು ಸವಿಗಾನರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ನಗರದಲ್ಲಿ ನಮ್ಮವರಿಂದಲೇ ನಮ್ಮ ಭಾಷೆ ಅಸಡ್ಡೆಗೆ ಒಳಗಾಗಿದೆ ಎಂದು ವಿಷಾದಿಸಿದರು.

Advertisement

ಕನ್ನಡವೇನಾದರೂ ಇಂದು ಉಳಿದಿದೆ ಎಂದರೆ ಅದು ನಮ್ಮ ಜನಪದ ಮತ್ತು ಸುಗಮ ಸಂಗೀತದಿಂದ ಮಾತ್ರ. ಅಮ್ಮಂದಿರು ಮಮ್ಮಿಗಳಾಗದೆ ಅಮ್ಮಂದಿರಾಗಿ ಮಕ್ಕಳಿಗೆ ಸಂಗೀತವನ್ನು ಅಕ್ಕರೆಯಿಂದ ಕಲಿಸುವ ಮೂಲಕ ಕನ್ನಡ ಉಳಿಸಿ ಬೆಳೆಸಿ ಎಂದು ಸಲಹೆ ನೀಡಿದರು.

ಶಿಕ್ಷಣತಜ್ಞೆ  ಡಾ.ಗೀತಾ ಮಾತನಾಡಿ, ಶಾಸ್ತ್ರಿಯತೆ ಎಲ್ಲಾ ಸಂಗೀತಕ್ಕೂ ತಳಪಾಯವಾಗಿದೆ. ನಾನು ಕನ್ನಡವನ್ನು ಕಲಿತದ್ದು ಜಾತ್ರೆ ಮತ್ತು ಸಂತೆಯಲ್ಲಿ. ಕನ್ನಡದಲ್ಲಿ ನಮ್ಮ ಅಂತರಂಗವನ್ನು ನಾವು ಅರಿಯಬಹುದು ಆ ಶಕ್ತಿ ಮಾತೃ ಭಾಷೆಗಿದೆ ಎಂದು ಹೇಳಿದರು.

ಬಿ.ಆರ್‌.ಲಕ್ಷ್ಮಣರಾವ್‌, ಚಂದ್ರಿಕಗುರುರಾಜ್‌, ಎಂ.ಕೆ.ಜಯಶ್ರೀ, ವೆಂಕಟೇಶಮೂರ್ತಿ ಶಿರೂರ, ಟಿ.ರಾಜರಾಮ್‌ ವಿವಿಧ ಜನಪ್ರಿಯ ಗೀತೆಗಳನ್ನು ಹಾಡಿದರು. ಕಲಾದೇಗುಲ ಶ್ರೀನಿವಾಸ, ರಜನಿ ರಾಜಾರಾಮ್‌, ಸೃಷ್ಟಿ, ಗಂಗಾಧರ್‌, ಶರವಣ, ರವಿಕಿರಣ್‌, ರಾಜ್‌ಕಿರಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next