Advertisement
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲಾವಿದ ಜಬ್ಬರ್ ಸಮೋ ಅವರು ಓರ್ವ ಜಾತಿ, ಧರ್ಮವನ್ನು ಮೀರಿದ ಕಲಾವಿದರಾಗಿದ್ದಾರೆ. ಕಲೆಗೆ ಜಾತಿ-ಧರ್ಮ ಇಲ್ಲ ಎಂಬುದನ್ನು ಅವರು ನಿರೂಪಿಸಿದ್ದಾರೆ ಎಂದು ನುಡಿದರು.
Related Articles
Advertisement
ಮತ್ತೋರ್ವ ಗೌರವ ಅತಿಥಿ ಉದ್ಯಮಿ ಜಯಲಕ್ಷ್ಮೀ ಜಗನ್ನಾಥ ಶೆಟ್ಟಿ ಮಾತನಾಡಿ, ಯಕ್ಷಗಾನವನ್ನು ನಾನು ಹತ್ತಿರದಿಂದ ಬಲ್ಲವಳು.ನನ್ನ ತಂದೆ ಅಡ್ವೆ ವಾಸು ಶೆಟ್ಟಿ ಅವರು ಯಕ್ಷಗಾನ ಅರ್ಥದಾರಿಗಳಾಗಿದ್ದರು. ನಾನು ಯಕ್ಷಗಾನವನ್ನು ಪ್ರೀತಿಸುತ್ತೇನೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸೇವಾ ಸಂಘ ಪೊವಾಯಿ ಅಧ್ಯಕ್ಷ ಪಾಂಗಾಳ ನಾನಾಯರ ಗರಡಿ ಪ್ರಭಾಕರ ಎಸ್. ಶೆಟ್ಟಿ ಅವರು ಮಾತನಾಡಿ, ಕನ್ನಡ ಸೇವಾ ಸಂಘವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸ್ಥಾಪನೆಗೊಂಡ ಸಂಸ್ಥೆಯಾಗಿದೆ. ನಾವು ಶಿಕ್ಷಣಕ್ಕೆ ಮುಂದೆಯೂ ಆಧ್ಯತೆಯನ್ನು ನೀಡುತ್ತೇವೆ. ಸಂಘವು ಪ್ರತೀ ವರ್ಷ ಯಕ್ಷಗಾನ, ನಾಟಕ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ತುಳು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸಾಂತೂರು ಅಶೋಕ್ ಎಸ್. ಶೆಟ್ಟಿ ಮತ್ತು ಅವರ ತಂಡದ ಸದಸ್ಯರು, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಸಂಘದ ಮಾಜಿ ಅಧ್ಯಕ್ಷರುಗಳಾದ ಸುಧಾಕರ ಪೂಜಾರಿ, ನ್ಯಾಯವಾದಿ ಆರ್. ಜಿ. ಶೆಟ್ಟಿ, ಡಿ. ಕೆ. ಶೆಟ್ಟಿ, ರಮೇಶ್ ಡಿ. ರೈ, ಮಹೇಶ್ ಎಸ್. ಶೆಟ್ಟಿ ಅವರ ಸಹಾಯ, ಪ್ರೋತ್ಸಾಹ ಅಪಾರವಾಗಿದೆ. ಸಂಘದ ಮಹಿಳಾ ವಿಭಾಗವು ಸಂಸ್ಥೆಯ ಪ್ರಗತಿಯಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಕಲಾವಿದ, ಅರ್ಥದಾರಿ ಜಬ್ಟಾರ್ ಸಮೋ ಅವರನ್ನು ಗೌರವಿಸಲು ನಮಗೆ ಹೆಮ್ಮೆಯಾಗುತ್ತಿದೆ ಎಂದು ನುಡಿದು ಶುಭಹಾರೈಸಿದರು. ಸಮಾರಂಭದಲ್ಲಿ ಯಕ್ಷಗಾನ ಅರ್ಥದಾರಿ ಜಬ್ಬರ್ ಸಮೋ ಅವರನ್ನು ಗಣ್ಯರ ಸಮ್ಮುಖದಲ್ಲಿ ಬಿರುದು ಪ್ರದಾನಿಸಿ ಸಮ್ಮಾನಿಸಿ ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಜಬ್ಬರ್ ಸಮೋ ಅವರು, ಮುಂಬಯಿ ಮಹಾನಗರದಲ್ಲಿ ನಾನು ನಿಮ್ಮೆಲ್ಲರ ಪ್ರೀತಿಗೆ ಅಭಾರಿಯಾಗಿದ್ದೇನೆ. ಇದು ಅರ್ಥಪೂರ್ಣ ಸಮ್ಮಾನವಾಗಿದೆ. ಇದು ನನ್ನ ಶರೀರದಲ್ಲಿರುವ, ಹೃದಯದಲ್ಲಿರುವ ಕಲೆಗೆ ಧಕ್ಕಿದ ಸಮ್ಮಾನವಾಗಿದೆ. ಕಲಾಸೇವೆಯು ನನ್ನ ಉಸಿರಿರುವರೆಗೆ ಮಾಡುತ್ತೇನೆ. ಈ ಸಮ್ಮಾನವನ್ನು ಕಲೆಗೆ ಅರ್ಪಿಸುತ್ತಿದ್ದೇನೆ ಎಂದರು. ವೇದಿಕೆಯಲ್ಲಿ ತುಳು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸಾಂತೂರು ಅಶೋಕ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಎಸ್. ಶೆಟ್ಟಿ, ಕಲಾಪ್ರಕಾಶ ಪ್ರತಿಷ್ಠಾನದ ಸಂಚಾಲಕ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್, ಸಂಘದ ಕೋಶಾಧಿಕಾರಿ ಸಂದೇಶ್ ಆರ್. ಶೆಟ್ಟಿ ಮೂಡುಬೆಳ್ಳೆ, ಗೌರವ ಕಾರ್ಯದರ್ಶಿ ನಾಗರಾಜ ಗುರುಪುರ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ನಾಗರಾಜ ಗುರುಪುರ ಸ್ವಾಗತಿಸಿದರು. ಬಾಲಕೃಷ್ಣ ಜೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದರುಗಳಾದ ಮೋಹನ್ ಮಾರ್ನಾಡ್, ಕವಿ, ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ, ಹಿರಿಯರಾದ ಜಯ ಶೆಟ್ಟಿ, ಭವಾನಿ ಶೆಟ್ಟಿ, ಸಂಘಟಕ ಕರುಣಾಕರ ಶೆಟ್ಟಿ ಕುಕ್ಕುಂದೂರು, ತಾಳಮದ್ದಳೆಯ ಕಲಾವಿದರನ್ನು ಗೌರವಿಸಲಾಯಿತು. ಸಮ್ಮಾನ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ನ್ಯಾಯವಾದಿ ಆರ್. ಜಿ. ಶೆಟ್ಟಿ, ಡಿ. ಕೆ. ಶೆಟ್ಟಿ, ರಮೇಶ್ ಡಿ. ರೈ, ಸದಸ್ಯ ಪ್ರವೀಣ್ ಶೆಟ್ಟಿ ಐಐಟಿ, ಮಾಜಿ ಅಧ್ಯಕ್ಷ ದಯಾನಂದ ಸಿ. ಬಂಗೇರ, ಪ್ರಭಾಕರ ಪಣಿಯೂರು, ಅಮಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.