ಉಡುಪಿ: ಸಂಸ್ಕೃತ ಮತ್ತು ಕನ್ನಡ ಎರಡು ಕಣ್ಣುಗಳಿದ್ದಂತೆ. ಇವೆರಡಕ್ಕೂ ಅನ್ಯಾಯ ವಾಗಬಾರದು ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಸುವರ್ಣ ಗೋಪುರ ಸಮರ್ಪಣೋತ್ಸವ ಪ್ರಯುಕ್ತ ಮಂಗಳವಾರ ರಾಜಾಂಗಣದಲ್ಲಿ ಜರಗಿದ ‘ಶ್ರೀಕೃಷ್ಣ ಕಾವ್ಯ ಗೋಪುರಮ್’ನಲ್ಲಿ ಅವರು ಆಶೀರ್ವಚನ ನೀಡಿದರು.
ಸಂಸ್ಕೃತ ಪರಂಪರೆಯ ಭಾಷೆ. ಕನ್ನಡ ನಮ್ಮ ನಾಡಿನ ಪ್ರಬುದ್ಧ ಭಾಷೆ. ಕನ್ನಡದಲ್ಲಿ ಸಂಸ್ಕೃತವೂ ಸೇರಿದೆ. ಆದರೆ ಕನ್ನಡ ಸ್ವತಂತ್ರವಾದ ಭಾಷೆ ಎಂದು ಶ್ರೀಗಳು ಹೇಳಿದರು.
ಸಂಸ್ಕೃತ ಕವಿ ಪಂ| ವಸಂತ ಅನಂತ ಗಾಡ್ಗೀಳ್‌ಪುಣೆ ಅವರು ಕಾವ್ಯಗೋಷ್ಠಿ ಉದ್ಘಾಟಿಸಿದರು. ಸಂಸ್ಕೃತ ಕವಿಗಳಾದ ಎಚ್.ವಿ. ನಾಗರಾಜ ರಾವ್ ಮೈಸೂರು, ಉಮಾಕಾಂತ ಭಟ್ಟ ಶಿರಸಿ,ವಿ| ಅರೈಯರ್ ಶ್ರೀರಾಮ ಶರ್ಮಾ ಮೇಲುಕೋಟೆ, ಪ್ರೊ| ಕೆ.ಕೆ. ಸುಧಾ ಬೆಂಗಳೂರು ಕಾವ್ಯ ವಾಚನ ಮಾಡಿದರು.
ಬಿ.ಆರ್. ಲಕ್ಷ್ಮಣ ರಾವ್, ಡಾ| ನಾ. ಮೊಗಸಾಲೆ ಕಾಂತಾವರ, ಡಾ| ಕೆ.ಈ. ರಾಧಾಕೃಷ್ಣ ಬೆಂಗಳೂರು, ಡಾ| ಚಿಂತಾಮಣಿ ಕೊಡ್ಲಕೆರೆ ಗೋಕರ್ಣ, ಸುಬ್ರಾಯ ಚೊಕ್ಕಾಡಿ ಉಡುಪಿ, ಡಾ| ವೀಣಾಬನ್ನಂಜೆ ಅವರು ಕಾವ್ಯಗೋಷ್ಠಿಯಲ್ಲಿ ಪಾಲ್ಗೊಂಡಿ ದ್ದರು. ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಮಲ್ಲೇಪುರಂ ಜಿ. ವೆಂಕಟೇಶ ಗೋಷ್ಠಿ ನಿರ್ವಹಿಸಿದರು.ಜಗದೀಶ ಶರ್ಮಾ ಸಂಪ ಸ್ವಾಗತಿಸಿದರು. ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಕವಿತೆ ಮಾತನಾಡಬೇಕು
ಕಾವ್ಯಾರ್ಪಣೆ ಮಾಡಿದ ಸುಬ್ರಾಯ ಚೊಕ್ಕಾಡಿ ಅವರು, ‘ಕವಿ ಮಾತನಾಡ ಬಾರದು, ಕವಿತೆ ಮಾತನಾಡಬೇಕು. ಹಾಗೆಯೇ ಕವಿತೆ ನೋಯಿಸಬಾರದು, ಅದು ಅನುಭವವಾಗಿ ದಕ್ಕಬೇಕು ಎನ್ನುವ ಪಂಥದವನು ನಾನು’ ಎಂದು ಹೇಳಿದರು.