ಪುಣೆ: ಪುಣೆ ಕನ್ನಡ ಸಂಘದ ಆರಂಭದ ವಿಶ್ವಸ್ತ ಸಮಾಜ ಸೇವಕ ಮತ್ತು ವಾಸ್ತು ಶಿಲ್ಪಿ ದಿ| ವಜ್ರಂ ಅವರ 93 ನೆಯ ಜನ್ಮದಿನದ ನಿಮಿತ್ತ ಹಾಗೂ ಅವರ ಮಾವ ಶ್ರೇಷ್ಠ ಮರಾಠಿ ಕವಿವರ್ಯ ಪದ್ಮಶ್ರೀ ಬಿ. ಬಿ. ಬೋರ್ಕರ್ ಅವರ ಸ್ಮರಣಾರ್ಥ ಅವರಿಬ್ಬರ ಬಂಧುಗಳು ಮತ್ತು ಸ್ನೇಹಿತರು ಜೊತೆಗೂಡಿ ಕನ್ನಡ ಸಂಘ ಪುಣೆಯ ಸಹಯೋಗದೊಂದಿಗೆ ಒಂದು ಅಭೂತ ಪೂರ್ವ ಮರಾಠಿ ಕಾವ್ಯ ಸಂಜೆಯನ್ನು ಇತ್ತೀಚೆಗೆ ಆಯೋಜಿಸಿದ್ದರು.
ಈ ಸಮಾರಂಭದಲ್ಲಿ ಕವಿ ಬೋರ್ಕರ್ ಅವರ ಜೀವನ ಗಾಥೆಯನ್ನು ವಿವರಿಸುವ ಕೃತಿಯನ್ನು ಅವರ ಮಿತ್ರ ಪುಣೆಯ ಶ್ರೇಷ್ಠ ಅರ್ಥಶಾಸ್ತ್ರಜ್ಞ ವಸಂತ್ ಪಟವರ್ಧನ್ ಅವರು ಬಿಡುಗಡೆ ಮಾಡಿದರು. ಈ ಸಂದರ್ಭ ಬೋರ್ಕರ್ ಅವರ ಪುತ್ರಿ ಮುಕ್ತಾ ಅಕ್ಷಿಕರ್ ಅವರು ತನ್ನ ತಂದೆಯವರ ಕಾವ್ಯ ಮತ್ತು ಪ್ರಕೃತಿಯ ಬಗೆಗಿನ ಪ್ರೀತಿಯನ್ನು ಉÇÉೇಖೀಸಿದರು.
ಲೇಖಕಿ ವೈಜಯಂತಿ ಚಿಪುÉಣRರ್ ಅವರು ಮಹಾನ್ ಕವಿಯವರ ಕಾವ್ಯ ವೈವಿಧ್ಯದ ಬಗ್ಗೆ ವಿವರಿಸಿದರು. ಪುಣೆ ವಿಶ್ವ ವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮತ್ತು ವಜ್ರಂ ಅವರ ಪರಮ ಮಿತ್ರ ಪ್ರೊ| ಅಶೋಕ್ ಕಾಮತ್ ಅವರು ಮೂಲತ: ತಮಿಳುನಾಡಿನ ಕನ್ನಡಿಗ ಮತ್ತು ಪುಣೆಯಲ್ಲಿ ಸ್ಥಾಯಿಕರಾಗಿ ನಿರಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪುಣೆಯಲ್ಲಿ ವಿದ್ಯೆ ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಪಾಲ್ಗೊಂಡಿರುವ ಅಪೂರ್ವ ವ್ಯಕ್ತಿ ಎಂದು ಪರಿಚಯಿಸಿದರು.
ಆನಂತರ ಬೋರ್ಕರ್ ಅವರ ವಂಶಜ ಮುಂಬೈಯ ಪ್ರಸಿದ್ಧ ವೈದ್ಯ ಹಾಗೂ ಪ್ರಸಿದ್ಧ ಗಾಯಕ ಡಾ| ಘನಶ್ಯಾಮ್ ಬೋರ್ಕರ್ ತನ್ನ ಸಹಯೋಗಿ ತೇಜಶ್ರೀ ದೀಕ್ಷಿತ್ ಜೊತೆಗೂಡಿ ಘನ ಬರಸೆರೆ ಎಂಬ ಶೀರ್ಷಿಕೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ತಮ್ಮ ಅದ್ಭುತ ಶೈಲಿಯಲ್ಲಿ ಕವಿತೆಗಳ ವರ್ಷಾಧಾರೆಗೈದು ಕಲಾರಸಿಕರನ್ನು ರಂಜಿಸಿದರು.
ಈ ಕಾರ್ಯಕ್ರಮದ ಸಹಯೋಗಕ್ಕೆ ಆಯೋಜಕರು ಕನ್ನಡ ಸಂಘಕ್ಕೆ ಧನ್ಯವಾದ ಸಮರ್ಪಿಸಿದರು. ಕನ್ನಡ ಸಂಘದ ಸದಸ್ಯರು ಮತ್ತು ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ ಉಪಸ್ಥಿತರಿದ್ದರು.