Advertisement
ಮಾ. 1ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಮಹಿಳಾ ವಿಭಾಗವು ಸಂಘದ ಅಧ್ಯಕ್ಷ ಎಲ್. ವಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಮಹಿಳೆಯರಿಗೆ ಶುಭ ಹಾರೈಸಿದರು.
Related Articles
Advertisement
ಇದೇ ಸಂದರ್ಭದಲ್ಲಿ ನಡೆದ ಭಾವಗೀತೆ ಸ್ಪರ್ಧೆಯಲ್ಲಿ ವಿನಯಾ ಅನಂತಕೃಷ್ಣ ಗೋರೆಗಾಂವ್ ಪ್ರಥಮ, ವಿಮಲಾ ದೇವಾಡಿಗ ಪೊವಾಯಿ ದ್ವಿತೀಯ, ತನುಜಾ ಭಟ್ ಬೊರಿವಿಲಿ ತೃತೀಯ, ಸಮೂಹ ಗಾಯನ ಸ್ಪರ್ಧೆಯಲ್ಲಿ ಕನ್ನಡ ಸಂಘ ಧಾಣುರRರ್‌ವಾಡಿ ಪ್ರಥಮ, ಪೊವಾಯಿ ಕನ್ನಡ ಸಂಘ ದ್ವಿತೀಯ ಹಾಗೂ ಪನ್ವೇಲ್ ಕನ್ನಡ ಸಂಘ ತೃತೀಯ ಬಹುಮಾನಕ್ಕೆ ಪಾತ್ರವಾಯಿತು.
ಸದಸ್ಯೆಯರಾದ ಯಶೋದಾ ಆರ್. ಪೂಂಜಾ, ಪ್ರಮೋದಾ ಎಸ್. ಶೆಟ್ಟಿ, ಲತಾ ಪ್ರಭಾಕರ್ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ಹರಿಣಾಕ್ಷಿ ಜೆ. ಶೆಟ್ಟಿ, ರತ್ನಾ ಪಿ. ಶೆಟ್ಟಿ ಮತ್ತಿತರ ಗಣ್ಯರು, ಸಂಘದ ಸಲಹೆಗಾರರಾದ ಎನ್. ಎಂ. ಸನಿಲ್, ಬಿ. ಆರ್. ಪೂಂಜಾ, ಸದಸ್ಯರಾದ ಶಿವರಾಮ ಕೋಟ್ಯಾನ್, ಜಿ. ಆರ್. ಬಂಗೇರ, ವಿಜಯಕುಮಾರ್ ಕೆ. ಕೋಟ್ಯಾನ್, ಲಿಂಗಪ್ಪ ಬಿ. ಅಮೀನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಉಪಸ್ಥಿತರಿದ್ದರು. ಆದಿಯಲ್ಲಿ ಪುಲ್ವಾಮ ವಿಧ್ವಂಸಕ ದಾಳಿಗೆ ಬಲಿಯಾದ ರಾಷ್ಟ್ರದ ವೀರ ಯೋಧರಿಗೆ ಸಂತಾಪ ಸೂಚಿಸಲಾಯಿತು. ಪೊವಾಯಿ ಕನ್ನಡ ಸಂಘದ ಮಹಿಳಾ ವಿಭಾಗವು ಅಗಲಿದ ವೀರ ಯೋಧರಿಗೆ ದೇಶಭಕ್ತಿ ಗೀತೆಯನ್ನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ವೈ. ನೋಂದಾ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜಾತಾ ಆರ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆಯರಾದ ಶಾಲಿನಿ ಜಿ. ಶೆಟ್ಟಿ, ಉಷಾ ವಿ. ಶೆಟ್ಟಿ, ಸುಜಾತಾ ಸುಧಾಕರ್ ಉಚ್ಚಿಲ್ ಅತಿಥಿಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷಿ ¾à ಎನ್. ಕೋಟ್ಯಾನ್ ಪ್ರಾರ್ಥನೆಗೈದು ವಂದಿಸಿದರು.
ಒಂದು ಕಾಲದಲ್ಲಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆಯರು ಇಂದು ಇಂತಹ ಕಾರ್ಯಕ್ರಮಗಳಿಂದ ವೇದಿಕೆಗಳನ್ನು ಅಲಂಕರಿಸಿ ಮಾತೃ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುತ್ತಿರುವುದು ಅಭಿನಂದನೀಯ. ಮಹಿಳೆಯರು ಸಮಾಜಕ್ಕೆ ಮಾರ್ಗದರ್ಶಕರಾಗಲು ಸಶಕ್ತರಾಗಿರುವುದು ಸ್ತುತ್ಯರ್ಹ. ಶಿಸ್ತುಬದ್ಧ ಕಾರ್ಯ ಚಟುವಟಿಕೆಗಳಿಗೆ ಮಹಿಳೆಯರು ಪ್ರಧಾನರಾಗಿದ್ದು ಮಹಿಳಾ ಪ್ರಾಧಾನ್ಯತೆಗೆ ಪೂರಕವಾದ ಈ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ – ಎಲ್. ವಿ. ಅಮೀನ್ (ಅಧ್ಯಕ್ಷರು : ಸಾಂತಾಕ್ರೂಜ್ ಕನ್ನಡ ಸಂಘ). ಚಿತ್ರ-ವರದಿ: ರೋನ್ಸ್ ಬಂಟ್ವಾಳ್