Advertisement

ಕನ್ನಡ ಸಂಘ ಪುಣೆ: ವೈಶಿಷ್ಟ್ಯ ಪೂರ್ಣ ಸಂಗೀತ ಕಾರ್ಯಕ್ರಮ

04:17 PM Sep 23, 2019 | Team Udayavani |

ಪುಣೆ, ಸೆ. 22: ಕನ್ನಡ ಸಂಘ ಪುಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸೆ. 13ರಂದು ಎರಡು ವಿಶೇಷ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.

Advertisement

ಮೊದಲಿನ ಎರಡು ದಿನ ಮೃದಂಗಾಚಾರ್ಯ ಶಂಕರ್‌ ವಸಂತ್‌ ಸ್ಮತಿ ಮಹೋತ್ಸವದಲ್ಲಿ ಪ್ರಸಿದ್ಧ ತಬಲಾ ವಾದಕ ಪ್ರಮೋದ್‌ ಗೊಪರ್‌ದ್ಕರ್‌ ಅವರ ಶಿಷ್ಯವೃಂದದ ಅಭೂತಪೂರ್ವ ಮೃದಂಗ ವಾದನದ ಜತೆಗೆ ಕಥಕ್‌ ನೃತ್ಯ ಶಿಕ್ಷಕಿ ಮನೀಷಾ ಅಭಯ ಮತ್ತು ಶಿಷ್ಯಯರಿಂದ ಶಿವೋಹಂ ನೃತ್ಯದ ಮೂಲಕ ಒಂದು ಅಭೂತಪೂರ್ವ ಅನುಭವ ಪ್ರಥಮ ಬಾರಿಗೆ ಪುಣೆಯ ರಸಿಕರಿಗೆ ನೃತ್ಯ ಮೃದಂಗದ ಜುಗಲಬಂದಿಯನ್ನು ನೋಡುವ ಅವಕಾಶ ಸಿಕ್ಕಿತು. ಎರಡನೆಯ ದಿನ ಜಗತøಸಿದ್ಧ ಮೋಹನ ವೀಣಾ ವಾದಕ ಪದ್ಮ ಭೂಷಣ ಪಂಡಿತ್‌ ವಿಶ್ವಮೋಹನ್‌ ಭಟ್‌ ಅವರಿಗೆ ಮೃದಂಗಾಚಾರ್ಯ ಶಟಕರ ಭೈಯ್ಯ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ಸಮ್ಮಾನಕ್ಕೆ ಉತ್ತರಿಸಿದ ಪಂಡಿತ್‌ ವಿಶ್ವಮೋಹನ್‌ ಭಟ್‌ ಅವರು ಸಂಗೀತ ನೃತ್ಯ ಮತ್ತು ವಿದ್ಯೆಯತವರುಮನೆ ಪುಣೆಯಲ್ಲಿ ಕಲಾರಸಿಕರ ಉತ್ಸಾಹ ಮತ್ತು ಕಲಾಭಿರುಚಿಯನ್ನು ಪ್ರಶಂಸಿಸಿ ಈ ಗೌರವ ನನಗೆ ಮತ್ತು ನನ್ನ ವಿಚಿತ್ರ ವೀಣೆಗೆ ದೊರೆತ ಅವಿಸ್ಮರಣೀಯ ಪುರಸ್ಕಾರವೆಂದು ಪುಣೆಯ ನಾಗರಿಕರಿಗೆ ಧನ್ಯವಾದ ಸಮರ್ಪಿಸಿದರು.

ಅನಂತರ ಅವರ ಅಮೋಘ ವಿನೂತನ ಮೋಹನ ವೀಣಾ ವಾದನ ರಸಿಕರನ್ನು ಮಂತ್ರಮುಗ್ಧಗೊಳಿಸಿತು. ಮೂರನೆಯ ದಿನ ಇತ್ತೀಚೆಗೆ ಮಹಾರಾಷ್ಟ್ರದ ಕೊಲ್ಹಾಪುರ ಸಾಂಗ್ಲಿ ಪ್ರದೇಶಗಳಲ್ಲಿ ಬಂದ ಪ್ರಾಕೃತಿಕ ಆಪತ್ತಿನಿಂದ ತಮ್ಮ ಮನೆ ಮತ್ತು ವಾದಕ ಸಾಮಗ್ರಿಗಳನ್ನು ಕಳೆದುಕೊಂಡ ಕಲಾಕಾರರ ಸಹಾಯಕ್ಕಾಗಿ ಕಲಾಕಾರರಿಗಾಗಿ ಕಲಾಕಾರರು ಎಂಬ ಅತ್ಯಂತ ವೈಶಿಷ್ ಪೂರ್ಣ ಸಂಗೀತ ನೃತ್ಯ ಮತ್ತು ವಾದ್ಯ ವಾದನದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾಕಾರರು ತಬಲ, ಜಲತರಂಗ, ಜೆಬೆ ಮುಂತಾದ ವಿಶೇಷ ವಾದನಗಳ ಜತೆಗೆ ಪ್ರಸಿದ್ಧ ನೃತ್ಯ ಕಲಾವಿದೆ ಅಮೀರಾ ಪಾಟಂಕರ್‌ ಮತ್ತು ಬಳಗದ ನಾದರೂಪ ಸಂಸ್ಥೆಯ  ಶಮಾ ಬಾಟೆ ಅವರ ನೇತೃತ್ವದಲ್ಲಿ ಮನಮೋಹಕ ನೃತ್ಯ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಗಳಿಸಿದ ಎಲ್ಲ ಹಣದ ಮೊತ್ತವನ್ನು ಸಂತ್ರಸ್ತ ಕಲಾಕಾರರಿಗೆ ಕಳುಹಿಸಲಾಯಿತು. ಒಟ್ಟಿನಲ್ಲಿ ಮೂರು ದಿನಗಳ ಈ ಸಂಗೀತ ನೃತ್ಯ ಮಹೋತ್ಸವ ಕನ್ನಡ ಸಂಘದ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರಿಗೆ ರಸದೌತಣವನ್ನಿತ್ತು ಪ್ರಶಂಸೆ ಗಳಿಸಿತು.

ಇಂತಹ ಸಮಾಜೋಪಯೋಗಿ ಮತ್ತು ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನ್ನಡ ಸಂಘ ನಿರಂತರ ಪೋ›ತ್ಸಾಹ ನೀಡುತ್ತಿರುವ ಬಗ್ಗೆ ಆಯೋಜಕರು ಧನ್ಯವಾದ ವ್ಯಕ್ತಪಡಿಸುತ್ತಾ ಮುಖ್ಯ ಅತಿಥಿ ಪಂಡಿತ್‌ ಪದ್ಮ ಭೂಷಣ ವಿಶ್ವಮೋಹನ ಭಟ್‌ ಅವರ ಶುಭ ಹಸ್ತದಿಂದ ಪುಷ್ಪಗುತ್ಛವನ್ನು ನೀಡಿ ಜನಸಂಪರ್ಕಾಧಿಕಾರಿ ರಾಮದಾಸ್‌ ಆಚಾರ್ಯರನ್ನು ಕನ್ನಡ ಸಂಘದ ಪರವಾಗಿ ಸತ್ಕರಿಸಿದರು. ವರ್ಷವಿಡೀ ಹತ್ತು ಹಲವು ಕಾರ್ಯಕ್ರಮಗಳಿಗೆ ಕನ್ನಡ ಸಂಘ ವೇದಿಕೆಯನ್ನು ಒದಗಿಸುತ್ತಾ ಬಂದಿದೆ.

Advertisement

 

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next