Advertisement
“ಆತ್ಮ ನಿರ್ಭರ ಭಾರತಃ ಪರಂಪರೆ ಮತ್ತು ಆಧುನಿಕತೆ-ಅನುಸಂಧಾನ’ ಎಂಬ ಆಶಯದೊಂದಿಗೆ ಈ ಬಾರಿಯ ಸಮ್ಮೇಳನವು ನಡೆಯಲಿದ್ದು, ಜಿಲ್ಲೆ- ಹೊರಜಿಲ್ಲೆಗಳ ಹಲವು ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಯಿದೆ. ಈ ಮೂಲಕ ಕನ್ನಡ ನಾಡು ನುಡಿ ಯ ಸಂಭ್ರಮಕ್ಕೆ ಕಡಲನಗರಿ ಸಜ್ಜಾಗಿದೆ.
Related Articles
ಅಪರಾಹ್ನ 3ರಿಂದ ಶಾರದಾ ವಿದ್ಯಾ ಲಯದ ಮಹಾದ್ವಾರ (ಎಸ್.ಕೆ.ಡಿ.ಬಿ. ಆವರಣ)ದಿಂದ ಕನ್ನಡ ಭುವನೇಶ್ವರಿ ದಿಬ್ಬಣ ಹೊರಡಲಿದೆ. ಮೆರ ವಣಿಗೆಯನ್ನು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿ ಸಲಿದ್ದಾರೆ. ಸಂಜೆ 4.15ರಿಂದ ಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ಸರಕಾರ ರೂಪಿಸಿದ ಕೊರೊನಾ ನಿಯಮಗಳಿಗೆ ಅನುಸಾರವಾಗಿ ಸಾಹಿತ್ಯ ಸಮ್ಮೇಳನ ಆಯೋಜನೆಗೆ ತೀರ್ಮಾನಿಸಲಾಗಿದೆ. ಹೆಚ್ಚಿನ ಜನರು ಸಮ್ಮೇಳನ ಸ್ಥಳಕ್ಕೆ ಬರಲು ಕಷ್ಟವಾದರೆ ಅಂತಹವರಿಗಾಗಿ ಎಲ್ಲ ಕಾರ್ಯಕ್ರಮಗಳನ್ನು ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
Advertisement
ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನಸಮ್ಮೇಳನದ ಅಂಗಣದಲ್ಲಿರುವ ಜಾರ್ಜ್ ಫೆರ್ನಾಂಡಿಸ್ ಪ್ರದರ್ಶನಾಂಗಣದಲ್ಲಿ ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಇವರಿಂದ ಚಿತ್ರಕಲಾ ಪ್ರದರ್ಶನ ಹಾಗೂ ಮಾರಾಟ ಮಳಿಗೆ, ಶಾರದಾ ಆಯುರ್ವೇದ ಕಾಲೇಜು, ನ್ಯಾಚುರೋಪತಿ ಕಾಲೇಜಿನ ಆಶ್ರಯದಲ್ಲಿ “ವೈದ್ಯಕೀಯ ಮಾಹಿತಿ ಮಳಿಗೆ’ ಹಾಗೂ ಕೋವಿಡ್ ಅನಂತರದ ಸ್ವಾಸ್ಥÂದ ಕುರಿತು ಅರಿವು ಮೂಡಿಸುವ ಪ್ರಾತ್ಯಕ್ಷಿಕೆ, ಪುಸ್ತಕ ಮಳಿಗೆಗಳ ಸಹಿತ ವಿವಿಧ ಗೃಹೋಪಯೋಗಿ, ಗುಡಿ ಕೈಗಾರಿಕ ವಸ್ತುಗಳ ಮಳಿಗೆ ಇರಲಿವೆ. ಸಾಂಸ್ಕೃತಿಕ ವೈವಿಧ್ಯಗಳ ಪ್ರದರ್ಶನ
ಮೂರು ದಿನಗಳಲ್ಲೂ ವಿವಿಧ ತಂಡಗಳಿಂದ ಸಾಂಸ್ಕೃತಿಕ ವೈವಿಧ್ಯಗಳು ಪ್ರದರ್ಶನಗೊಳ್ಳಲಿವೆ. ಫೆ. 12ರಂದು ಸಂಜೆ 7.15ರಿಂದ ಯಕ್ಷ ಮಂಜುಳಾ ಕದ್ರಿ ಇವರಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಫೆ. 13ರಂದು ಬೆಳಗ್ಗೆ 11.15ರಿಂದ ನವರಸ ಗಾಯನ ಆಯೋಜಿಸಲಾಗಿದೆ. ಸಂಜೆ 5.30ರಿಂದ ಡಾ| ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ “ಚೋಮನ ದುಡಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಮಣಿಕೃಷ್ಣ ಸ್ವಾಮಿ ಅಕಾಡೆಮಿ ಇವರಿಂದ ಫೆ. 12, 13ರಂದು ಸಂಜೆ 4ರಿಂದ ರಾಷ್ಟ್ರೀಯ ಸಂಗೀತೋತ್ಸವ ಧ್ಯಾನ ಮಂದಿರದಲ್ಲಿ ನಡೆಯಲಿದೆ ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.