ಹಾವೇರಿ: ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ವರ್ಷ ಖಂಡಿತಾ ಹಾವೇರಿಯಲ್ಲಿ ನಡೆಯುತ್ತದೆ. ಅದರ ಬಗ್ಗೆ ಅನುಮಾನ ಬೇಡ. ಕೊರೊನಾ ಇನ್ನಷ್ಟು ಕಡಿಮೆಯಾದ ಬಳಿಕ ದಿನಾಂಕ ನಿಗದಿ ಪಡಿಸಲಾಗುವುದು. ಎರಡು ಮೂರು ತಿಂಗಳಲ್ಲಿ ಸಮ್ಮೇಳನ ಆಯೋಜಿಸುವ ಕುರಿತು ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಸಮ್ಮೇಳನ ಯಾವಾಗ ಮಾಡಬೇಕೆಂದು ಪರಿಷತ್ ಅಧ್ಯಕ್ಷರಿಗೆ ಕೇಳಿದ್ದೇನೆ. ಈ ಸಂಬಂಧ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು. ಸಿಎಂ ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ ಎದುರಿಸಿ ಸರ್ಕಾರ ರಚಿಸಲಾಗಿದೆ. ಹೈಕಮಾಂಡ್ ಮತ್ತು ರಾಜ್ಯಾಧ್ಯಕ್ಷರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ
ಮಾಡಿದ್ದಾರೆ. ಈ ಅವ ಧಿಯಲ್ಲಿ ಅವರು ಸಂಪೂರ್ಣ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ಮುಂದಿನ ಚುನಾವಣೆ ಸಹ ಯಡಿಯೂರಪ್ಪ ನೇತೃತ್ವದಲ್ಲೇ ನಡೆಯಲಿದ್ದು, ಈಗಾಗಲೇ ತೀರ್ಮಾನವಾಗಿದೆ ಎಂದರು.
ಕರಾಳ ದಿನಾಚರಣೆಗೆ ಅವಕಾಶವಿಲ್ಲ: ಬೆಳಗಾವಿ ಗಡಿ ಭಾಗದಲ್ಲಿ ಮತ್ತೆ ಎಂಇಎಸ್ ಕರಾಳ ದಿನಾಚರಣೆ ಮಾಡುವುದಕ್ಕೆ ಅವಕಾಶ ಕೊಡಬಾರದು, ಕಡಿವಾಣ ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇನೆ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನೇ ಸರಳವಾಗಿ ಮಾಡು ತ್ತಿರುವಾಗ ಇಂತಹ ಚಟುವಟಿಕೆಗಳು ಆಗದಂತೆ ನೋಡಿಕೊಳ್ಳಲು ಆದೇಶ ನೀಡಲಾಗಿದೆ ಎಂದರು.