Advertisement
ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿರುವ ಅವರು ಜನಪ್ರತಿನಿಧಿಗಳಿಗೆ ಸಮ್ಮೇಳನದ ಆಹ್ವಾನ ಪತ್ರಿಕೆ ತಲುಪಿಲ್ಲ ಎಂಬುದರ ಬಗ್ಗೆ, ಸಾಹಿತ್ಯ ಸಮ್ಮೇಳನದ ಪ್ರತಿನಿಧಿ ಶುಲ್ಕ ಏರಿಕೆ, ಜನಪ್ರತಿನಿಧಿಗಳಿಗೆ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ನೀಡಿಲ್ಲ ಎಂಬ ಆರೋಪಗಳ ಸಹಿತ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಹೌದು, ತವರು ಮನೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನನಗಾಗುತ್ತಿರುವ ಆ ಆನಂದವನ್ನು ಅಳೆಯಲು ಸಾಧ್ಯವೇ ಇಲ್ಲ. ಸಂತೋಷ ಆಗಿದೆ ಜತೆಗೆ ಅಭಿಮಾನ ಮೂಡಿದೆ ಹಾಗೆಯೇ ನನ್ನ ಅಧ್ಯಕ್ಷತೆಯ ಅವಧಿಯಲ್ಲಿಯೇ ನನ್ನೂರಿ ನಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆ ಯು ತ್ತಿರುವುದು ಮನಸಿಗೆ ಹೇಳಿಕೊಳ್ಳಲಾಗದಂಥ ಅತೀವ ಆನಂದವನ್ನು ತಂದಿದೆ. ಅಕ್ಷರ ಜಾತ್ರೆಗಾಗಿ ಏಲಕ್ಕಿ ನಗರಿ ಮದುವಣಗಿತ್ತಿ¤ಯಂತೆ ಸಿಂಗಾರ ಗೊಂಡಿದೆ. ಇಡೀ ಹಾವೇರಿ ಕನ್ನಡಮಯವಾಗಿದೆ. ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ವೈಶಿಷ್ಟ್ಯ ಏನು?
ಅತೀ ಹೆಚ್ಚು ಗೋಷ್ಠಿಗಳ ಜತೆಗೆ ಹೊಸಬರಿಗೂ ಅವಕಾಶ ನೀಡಲಾಗಿದೆ. ಅದರಲ್ಲೂ ಯುವ ಸಮುದಾಯಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆ. ಅನೇಕ ಕ್ಷೇತ್ರಗಳ ಬಗ್ಗೆ ಚಿಂತನಾಗೋಷ್ಠಿಗಳು ನಡೆಯಲಿವೆ. ಈ ಬಾರಿಯ ಅಕ್ಷರ ಜಾತ್ರೆಗಾಗಿಯೇ ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ , ಕೆನಡಾ, ಸ್ವೀಡನ್, ನ್ಯೂಜಿಲೆಂಡ್, ದುಬಾೖ ಸಹಿತ ಮತ್ತಿತರ ರಾಷ್ಟ್ರಗಳಲ್ಲಿ ನಲೆಸಿರುವ ಕನ್ನಡಿಗರು ಅಭಿಮಾನದಿಂದ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಈ ಬಾರಿ ಸಮ್ಮೇಳನದಲ್ಲಿ 86 ಜನ ಸಾಧಕರನ್ನು ಸಮ್ಮಾನಿಸಲಾಗುತ್ತದೆ. ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
Related Articles
ಬರೀ ಕನ್ನಡ ಸಾಹಿತ್ಯ ಪರಿಷತ್ತು ಅಲ್ಲ, ಆಳ್ವಾಸ್ ನುಡಿಸಿರಿಗೂ ಪರ್ಯಾಯ ಮಾಡುವುದಕ್ಕೂ ಹೋಗಿದ್ದರು. ಹೀಗಾಗಿ ಎಲ್ಲರನ್ನೂ ಸಮಾಧಾನ ಮಾಡಲು ಆಗುವುದಿಲ್ಲ. ಹಾವೇರಿ ಸಾಹಿತ್ಯ ಸಮ್ಮೇಳನ ಧರ್ಮದ ಸಮ್ಮೇಳನ ಅಲ್ಲ, ಜಾತಿ ಸಮ್ಮೇಳನ ಅಲ್ಲ, ಸಿದ್ಧಾಂತದ ಸಮ್ಮೇಳನ ಅಲ್ಲ. ಹೀಗಾಗಿ ಅವರು ಬರೀ ಜಾತಿಯಿಂದ ನೋಡಿದರೆ ನಾನೇನು ಮಾಡಲಾಗದು. ಇಲ್ಲಿ ಮುಸಲ್ಮಾನ ಕನ್ನಡಿಗ, ಹಿಂದೂ ಕನ್ನಡಿಗ, ಬ್ರಾಹ್ಮಣ ಕನ್ನಡಿಗ, ಕುರುಬ ಕನ್ನಡಿಗ, ಲಿಂಗಾಯಿತ ಕನ್ನಡಿಗ ಎಂದು ನೋಡಲಾಗದು. ನಾವು ನೋಡುವುದು ಎಲ್ಲರೂ ಕೂಡ ಕನ್ನಡಿಗರು ಎಂದಷ್ಟೇ.
Advertisement
ಪ್ರತಿನಿಧಿ ಶುಲ್ಕ ಏರಿಕೆ ಬಗ್ಗೆ ಸಾಹಿತ್ಯವಲಯದಲ್ಲಿ ಅಸಮಾಧಾನವಿದೆ?ಯಾರೋ ಒಬ್ಬರು ಹೇಳಿದರೆ ಒಪ್ಪುವುದಿಲ್ಲ. ಸಾಹಿತ್ಯ ಸಮ್ಮೇಳನದ ಪ್ರತಿನಿಧಿ ಶುಲ್ಕ ಏರಿಕೆ ಕೇವಲ ನನ್ನ ಒಬ್ಬನ ತೀರ್ಮಾನ ಅಲ್ಲ. ಇದು ಸಮಿತಿಯ ತೀರ್ಮಾನ. ಪರಿಷತ್ತಿನ ಕಾರ್ಯಕಾರಿಣಿಯಲ್ಲಿ ಸಮ್ಮತಿ ದೊರೆತಿದೆ. ಕಿಟಲ್ ಕುಟುಂಬಸ್ಥರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿರುವ ಬಗ್ಗೆ?
ಕನ್ನಡದ ಮೊದಲ ನಿಘಂಟು ರಚಿಸಿದ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರ ಕುಟುಂಬಸ್ಥರಿಗೆ ಹಾವೇರಿ ಸಾಹಿತ್ಯ ಸಮ್ಮೇಳನಕ್ಕಾಗಿ ಆಹ್ವಾನ ನೀಡಲಾಗಿತ್ತು. ಸಮ್ಮೇಳನಕ್ಕಾಗಿಯೇ ಈಗಾಗಲೇ 12 ಮಂದಿ ಕಿಟಲ್ ಕುಟುಂಬಸ್ಥರು ದುಬಾೖಗೆ ಬಂದು ತಲುಪಿದ್ದಾರೆ. ಜ್ವರದ ಹಿನ್ನೆಲೆಯಲ್ಲಿ ಅವರು ಕೋವಿಡ್ ಪರೀಕ್ಷೆ ಮಾಡಿಸಿದ್ದಾರಂತೆ. ಕೋವಿಡ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದು ವೈದ್ಯರ ಸಲಹೆ ಪಡೆದು ಸಮ್ಮೇಳನಕ್ಕೆ ಬರುವ ನಿರೀಕ್ಷೆಯಿದೆ. ವಿಧಾನ ಪರಿಷತ್ ಸದಸ್ಯರಿಗೆ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿಲ್ಲ ಎಂಬ ಆರೋಪವಿದೆ?
ಆಹ್ವಾನ ಪತ್ರಿಕೆ 8ಕೋಟಿ ಕನ್ನಡಿಗರಿಗೂ ಕೊಡಬೇಕು ಎಂಬುವುದು ನಮ್ಮ ಅಪೇಕ್ಷೆ.ಆದರೆ ವಾಸ್ತವಿಕವಾಗಿ ಎಲ್ಲರಿಗೂ ಕೊಡುವುದಕ್ಕೆ ಆಗುತ್ತಾ? ಸಾಮಾಜಿಕ ಜಾಲ ತಾಣದ ಮೂಲಕ ಈಗಾಗಲೇ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ ಎಂದು ಆಹ್ವಾನಿಸಲಾಗಿದೆ. ವಿಧಾನಪರಿಷತ್ ಸದಸ್ಯರಿಗೆ ವಾಟ್ಸ್ ಆ್ಯಪ್ ಮುಖಾಂತರ, ಆ್ಯಪ್ ಮೂಲಕ ಆಹ್ವಾನ ನೀಡಲಾಗಿದೆ.ಜತೆಗೆ ಎಲ್ಲ, ಶಾಸಕರಿಗೆ ಸಂಸದರುಗಳಿಗೆ, ಸಾಹಿತಿಗಳಿಗೆ ಸ್ಪೀಡ್ ಪೋಸ್ಟ್ ಮುಖಾಂತರ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ.ಯಾರ್ಯಾರಿಗೆ ಕಳಿಸಿದ್ದೇವೆ ಎಂಬ ಸಂಪೂರ್ಣ ಮಾಹಿತಿ ನಮಗಿದೆ.