Advertisement
ಇಂತಹ ಒಂದು ತಿದ್ದುಪಡಿ ಕಸಾಪ ಬೈಲಾದಲ್ಲಿ ಅಳವಡಿಸುವಂತೆ ಪರಿಷತ್ತಿನ ನಿಬಂಧನೆ ತಿದ್ದುಪಡಿ ಸಲಹಾ ಸಮಿತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಶಿಫಾರಸು ಮಾಡಿದೆ.
Related Articles
Advertisement
ಪರಿಷತ್ತಿನ ಅಂಗರಚನೆಯಲ್ಲಿ ಈ ಹಿಂದೆ 18 ವರ್ಷ ಮೇಲ್ಪಟ್ಟ ಕನ್ನಡ ಓದು ಬರಹ ಬಲ್ಲ ವ್ಯಕ್ತಿಗಳು ಕನ್ನಡ ಸದಸ್ಯತ್ವ ಪಡೆಯಲು ಅರ್ಹರು ಎಂದಿತ್ತು. ಆದರೆ ಈಗಾಗಲೇ ಕನ್ನಡ ಓದುಬರಹ ಬಾರದವರೂ ಕೂಡ ಪರಿಷತ್ತಿನ ಸದಸ್ಯ ಹೊಂದಿದ್ದಾರೆ.ಆ ಹಿನ್ನೆಲೆಯಲ್ಲಿ ಪರಿಷತ್ತಿನ ನಿಬಂಧನೆ ತಿದ್ದುಪಡಿ ಸಲಹಾ ಸಮಿತಿ ಈಗ ಕನಿಷ್ಠ 7ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಥವಾ ಸದಸ್ಯತ್ವ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪರಿಷತ್ತು ನಡೆಸುವ ಸರಳ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರಿಗೆ ಸದಸ್ಯತ್ವ ನೀಡಿ ಎಂದು ಸಲಹೆ ನೀಡಿದೆ ಎಂದು ತಿಳಿಸಿದ್ದಾರೆ.
ಜತೆಗೆ ಸದಸ್ಯತ್ವ ಬಯಸುವ ವ್ಯಕ್ತಿ, ತನ್ನ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಅಪರಾಧಿಕ ಪ್ರಕರಣ ವಿಚಾರಣೆಗೆ ಬಾಕಿಯಿರುವುದಿಲ್ಲ ಎಂಬುವುದಾಗಿ ಸ್ವ-ಘೋಷಿತ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು, ಒಂದು ವೇಳೆ ಕನ್ನಡ ನೆಲ,ಜಲ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವುದಾರರೆ ಈ ನಿಯಮ ಅನ್ವಯಿಸುವುದಿಲ್ಲ.ಇದಕ್ಕೆ ಸೂಕ್ತ ದಾಖಲಾತಿ ಕೂಡ ನೀಡಬೇಕಾಗುತ್ತದೆ ಎಂದು ಹೇಳಿದರು.
ಇದು ಸಲಹೆ ಅಷ್ಟೇ ಅಂತಿಮವಲ್ಲ: ತಿದ್ದುಪಡಿ ಸಲಹಾ ಸಮಿತಿ ಪರಿಷತ್ತಿನ ಸುಧಾರಣೆ ಬಗ್ಗೆ ಹಲವು ಕಾನೂನು ಸಲಹೆಗಳನ್ನು ನೀಡಿದೆ.ಆದರೆ ಕಾನೂನು ತಜ್ಞರ ಸಲಹೆ ಅಂತಿಮವಲ್ಲ. ಈ ಬಗ್ಗೆ ಸಮಾಲೋಚನೆ ಸಭೆ ನಡೆಯಲಿದೆ. ಬಳಿಕ ಪರಿಷತ್ತಿನ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯಲಿದೆ. ಇದಾದ ನಂತರ ಕಾಗಿಲೆಯಲ್ಲಿ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅಂತಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹೇಶ್ ಜೋಶಿ ಸ್ಪಷ್ಟಪಡಿಸಿದರು. ಶೀಘ್ರದಲ್ಲೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿ ಸಂಬಂಧ ಪಟ್ಟ ಕೇಂದ್ರ ಸಚವರನ್ನು ಭೇಟಿ ಮಾಡಿ ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅನುದಾನದ ವಿಚಾರ, ಕೇರಳ ಕನ್ನಡ ವಿವಿಯ ಉಳಿಕೆ ಸೇರಿದಂತೆ ಕನ್ನಡ ಭಾಷೆ ಕುರಿತ ಹಲವು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಪಟೇಲ್ ಪಾಂಡು, ಗೌವರ ಸಂಚಾಲಕ (ಸಂಶೋಧನೆ,ಪ್ರಕಟಣೆ ವಿಭಾಗ) ಕೆ.ರಾಜಕುಮಾರ್, ನೇ.ಭ.ರಾಮಲಿಂಗಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬರಗೂರು ಹೆಸರು ಕೈಬಿಟ್ಟ ಕಸಾಪ
ಪರಿಷತ್ತಿನ ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಮಠಾಧೀಶರಿಗೆ,ಕನ್ನಡಪರ ಚಿಂತಕರಿಗೆ ಹಾಗೂ ಹೋರಾಟಗಾರರಿಗೆ ಫೆ.17ರಂದು ನಡೆಯಲಿರುವ ಸಮಾಲೋಚನಾ ಸಭೆಗೆ ಆಹ್ವಾನ ನೀಡಿತ್ತು.ಆದರೆ ಕಸಾಪ ಮಾಧ್ಯಗಳಿಗೆ ನೀಡಿರುವ ಆಹ್ವಾನಿತ ಗಣ್ಯರ ಹೆಸರಿನ ಪಟ್ಟಿಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ಹೆಸರು ಇಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಜೋಶಿ, ಬರಗೂರು ರಾಮಚಂದ್ರಪ್ಪ ಅವರು ಸಮಾಲೋಚನೆ ಸಭೆಗೆ ನಾನು ಬರುವುದಿಲ್ಲ ಎಂದು ಹೇಳಿದ್ದಾರೆ.ಆ ಹಿನ್ನೆಲೆಯಲ್ಲಿ ಗಣ್ಯರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.