ದೇವದುರ್ಗ: ಮಸ್ಕಿ ತಾಲೂಕು ಉಪಚುನಾವಣೆ ಮಧ್ಯಯೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜಿಲ್ಲಾದ್ಯಂತ ನೀತಿ ಸ0ಹಿತೆ ಜಾರಿ, ಎರಡನೇ ಹಂತದ ಕೊರೊನಾ ಅಲೆ ಭೀತಿ ಮಧ್ಯೆಯೂ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರ ಜೋರಾಗಿದೆ.
ಮಾ.29ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮೇ 9ಕ್ಕೆ ಚುನಾವಣೆ, ಮೇ 12ಕ್ಕೆ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಮೂರು ಜನ ಜಿಲ್ಲಾ ಸ್ಥಾನಕ್ಕೆ ಸೇವಾಕಾಂಕ್ಷಿಗಳು ಸ್ಪರ್ಧೆಯ ಕಣದಲ್ಲಿದ್ದಾರೆ. ರಂಗಣ್ಣ ಪಾಟೀಲ್ ಅಳ್ಳುಂಡಿ, ಭೀಮನಗೌಡ ಇಟಗಿ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ. ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಸೇವಾಕಾಂಕ್ಷಿ ಇದ್ದು, ತಾಲೂಕಿಗೆ ಒಂದು ಬಾರಿಯೂ ಪ್ರಚಾರಕ್ಕೆ ಬಾರದೇ ಇರುವುದು ಅಚ್ಚರಿ ಮೂಡಿಸಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ 106 ವರ್ಷ ಇತಿಹಾಸ ಹೊಂದಿದೆ.
ಆದರೆ ಇಲ್ಲಿವರೆಗೆ ದೇವದುರ್ಗ ತಾಲೂಕಿನ ಒಬ್ಬರಿಗೂ ಜಿಲ್ಲಾಧ್ಯಕ್ಷ ಸ್ಥಾನ ದೊರೆಯದೇ ಇರುವುದು ವಿಷಾದನೀಯ. ಈ ಬಾರಿ ತಾಲೂಕಿನವರೇ ರಂಗಣ್ಣ ಪಾಟೀಲ್ ಅಳ್ಳುಂಡಿ ಮತ್ತು ಭೀಮನಗೌಡ ಇಟಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಸೇವಾಕಾಂಕ್ಷಿಗಳು. ಜಿಲ್ಲಾದ್ಯಂತ 6 ಸಾವಿರಕ್ಕೂ ಹೆಚ್ಚು ಅಜೀವ ಸದಸ್ಯರು ಇದ್ದಾರೆ. ಕಳೆದ ತಿಂಗಳಿಂದ ರಂಗಣ್ಣ ಪಾಟೀಲ್ ಅಳ್ಳುಂಡಿ ಜಿಲ್ಲಾದ್ಯಂತ ಪ್ರಚಾರ ಕೈಗೊಂಡಿದ್ದು, ನಮಗೆ ಅವಕಾಶ ನೀಡುವಂತೆ ಅಜೀವ ಸದಸ್ಯರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಜಿಲ್ಲೆಯ ಸಾಹಿತ್ಯಾಸಕ್ತರು ಈ ಬಾರಿ ದೇವದುರ್ಗ ತಾಲೂಕಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸ್ಥಾನ ನೀಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಸ್ಕಿ ತಾಲೂಕು ಉಪಚುನಾವಣೆ ಘೋಷಣೆ ಮಧ್ಯಯೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಒಳ-ಒಳಗೆ ಬಿರುಸುಗೊಂಡಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮತದಾನ ಹತ್ತಿರವಾಗುತ್ತಿದ್ದಂತೆ ಚುನಾವಣೆ ಕಾವು ರಂಗೇರಲಿದೆ. ಜಿಲ್ಲಾ ಮತ್ತು ತಾಲೂಕು ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಜಾರಿಗೆ ಬಾರದೇ ಇರುವುದು ಬಹುತೇಕ ಅಜೀವ ಸದಸ್ಯರಲ್ಲಿ ಬೇಸರಕ್ಕೆ ಕಾರಣವಾಗಿದೆ. ಚುನಾವಣೆ ಬಂದಾಗ ಭಾಷಣ ಬೀಗಿದು ಅ ಧಿಕಾರ ಅನುಭವಿಸಿದ ಜಿಲ್ಲಾಧ್ಯಕ್ಷ ಮತ್ತು ತಾಲೂಕು ಅಧ್ಯಕ್ಷರು ಆಳುವ ಸರಕಾರದ ವಿರುದ್ಧ ಧ್ವನಿ ಎತ್ತುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮತದಾನಕ್ಕೆ ಒಂದೂವರೆ ತಿಂಗಳು ಬಾಕಿ ಇರುವಾಗಲೇ ಪ್ರಚಾರದ ಭರಾಟೆ ಜೋರಾಗಿದೆ. ಮತದಾರರ ಪಟ್ಟಿಯಲ್ಲಿರುವ ಅಜೀವ ಸದಸ್ಯರು ಬೇರೆ-ಬೇರೆ ಜಿಲ್ಲೆಯಲ್ಲಿದ್ದಾರೆ. ಅಂಥವರ ಮತಗಳು ಸೆಳೆಯಲು ತಂತ್ರ ಹಣೆಯುತ್ತಿದ್ದಾರೆ. ದೂರವಾಣಿ ಮೂಲಕ ಸಂರ್ಪಕ ನಡೆಸಿದ್ದಾರೆ. ಸಾಹಿತ್ಯ ಪರಿಷತ್ತಿನಲ್ಲಿ ಅಸಮಾಧಾನ ಹೊಗೆ ಶುರುವಾಗಿದ್ದು, ಮತದಾನ ವೇಳೆ ಯಾರು? ಯಾರ ಪರ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವುದು ಗುಟ್ಟಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅಜೀವ ಸದಸ್ಯರಾಗಲು ಎರಡೂ¾ರು ಬಾರಿ ಅರ್ಜಿ ಸಲ್ಲಿಸಿದ್ದು, ಇಲ್ಲಿವರೆಗೆ ಬಾರದೇ ಇರುವುದು ಜಿಲ್ಲಾದ್ಯಂತ ಬಹುತೇಕರಲ್ಲಿ ಬೇಸರ ಮೂಡಿಸಿದೆ.