Advertisement
ನಂದೀಶ್ವರ ಶಾಲೆ ನಂದಿ ನಗರದಲ್ಲಿ ನಡೆದ ಕಸಾಪ ಜಿಲ್ಲಾ, ತಾಲೂಕು ಸಾಹಿತ್ಯ ಪರಿಷತ್‌ನಿಂದ ಕಸಾಪ ದತ್ತಿ ಉಪನ್ಯಾಸ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ದಿ. ಮರಿಗೌಡ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿ ಹಾಗೂ ದಿ. ಅಂದಮ್ಮ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿಗಳನ್ನು ಈ ವೇಳೆ ಜಿಲ್ಲಾ ಕಸಾಪ ಘಟಕ ಪ್ರಕಟಿಸಿತು. ಮರಿಗೌಡ ಮಲ್ಲನಗೌಡರ ಅವರ ಸ್ಮಾರಕ ಪ್ರಶಸ್ತಿಗೆ 7 ಜನ ಲೇಖಕರು, 9 ಪುಸ್ತಕಗಳನ್ನು ನೋಂದಾಯಿಸಿಕೊಂಡಿದ್ದರು. ಈಶ್ವರ ಹತ್ತಿ ಅವರ ಅನಿಮಲ್ ಫಾರ್ಮ್ ಕೃತಿ ಆಯ್ಕೆಗೊಂಡಿದೆ. ದಿ. ಅಂದಮ್ಮ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿಗೆ 6 ಜನ ಮಹಿಳಾ ಲೇಖಕಿಯರು 7 ಪುಸ್ತಕಗಳನ್ನು ನೋಂದಾಯಿಸಿಕೊಂಡಿದ್ದರು. ಮುಮ್ತಾಜ್ ಬೇಗಂ ಅವರ “ಕೊಂದ ಕನಸುಗಳ ಕೇಸು’ ಪುಸ್ತಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.
ಜೊತೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ ಪಾಟೀಲ ಮಾತನಾಡಿ, ಕಸಾಪ ವಿಭಿನ್ನವಾಗಿ ದತ್ತಿ ಉಪನ್ಯಾಸ ಆಯೋಜಿಸಲು ಪ್ರಯತ್ನಿಸುತ್ತಾ ಬಂದಿದೆ. ಆಸಕ್ತರು ಹೆಚ್ಚಿನ ದತ್ತಿಗಳನ್ನು ಸ್ಥಾಪಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಹಕಾರ ನೀಡಬೇಕು. ಕಾರ್ಯಕ್ರಮದಲ್ಲಿ ನಾಡಗೀತೆಗೆ ಅವಮಾನಿಸಿದವರನ್ನು ಬಂಧಿಸಲು ಆಗ್ರಹಿಸಿದರು.
ಸಮಾರಂಭದಲ್ಲಿ ಚನ್ನಬಸಪ್ಪ ಕಡ್ಡಿಪುಡಿ, ರಮೇಶ ಕುಲಕರ್ಣಿ, ಸಾವಿತ್ರಿ ಮುಜುಂದಾರ, ವೀರಣ್ಣ ಹುರಕಡ್ಲಿ, ಈರಪ್ಪ ಬಿಜಲಿ, ಶಿವಕುಮಾರ ಕುಕನೂರು, ನಂದೀಶ್ವರ ಪ್ರಾಥಮಿಕ ಶಾಲೆಯ ಸುರೇಶ ಉಪಸ್ಥಿತರಿದ್ದರು.
ಈ ವೇಳೆ ಶಂಕ್ರಪ್ಪ ಬಂಗಾರಿ ಅವರು ತಮ್ಮ ಭಾಗದಲ್ಲಿ 880 ಮಹಾಮನೆ ಕಾರ್ಯಕ್ರಮ ಆಯೋಜಿಸಿ ಪ್ರತಿವಾರ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವರನ್ನು ಕಸಾಪ ಸನ್ಮಾನಿಸಿತು. ಕೊಪ್ಪಳ ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಅವರು ಪ್ರಾಸ್ತಾವಿಕ ಮಾತನಾಡಿದರು. ಸಂಗಪ್ಪ ಚಕ್ರಸಾಲಿ ನಿರೂಪಿಸಿದರು. ಮಲ್ಲಿಕಾರ್ಜುನ ಹ್ಯಾಟಿ ಅವರು ಸ್ವಾಗತಿಸಿದರು. ಬಸವರಾಜ ಶಿರಗುಪ್ಪಿಶೆಟ್ಟರ್ ವಂದಿಸಿದರು.