Advertisement
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಹೊರನಾಡ ಕನ್ನಡಿಗರಿಂದ ನಾವು ಕಲಿತುಕೊಳ್ಳುವುದು ಬಹಳಷ್ಟಿದೆ. ಕನ್ನಡಕ್ಕೆ ಧಕ್ಕೆಯಾಗಬಾರದೆನ್ನುವ ಅವರ ಕಳಕಳಿ ನಮಗೆ ಮಾರ್ಗದರ್ಶಿ. ಕನ್ನಡಿಗರು ದುಡಿಯಲು ಅನ್ಯ ದೇಶಗಳಿಗೆ ಹೋದರೂ ಕನ್ನಡವನ್ನು ಮರೆತಿಲ್ಲ. ಅಲ್ಲಿ ಕನ್ನಡ ಉಳಿಸುವ ಹಾಗೂ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
Related Articles
Advertisement
ದುಬೈ ಕನ್ನಡಿಗರ ಮಾಜಿ ಅಧ್ಯಕ್ಷರಾದ ವೀರೇಂದ್ರ ಬಾಬು, ಉಮಾ ವಿದ್ಯಾಧರ, ಮಲ್ಲಿಕಾರ್ಜುನಗೌಡ, ಕರ್ನಾಟಕ ಸಂಘ ಕತಾರ್ ಮಾಜಿ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಟಾಗಿಲು, ಅರವಿಂದ ಪಾಟೀಲ, ಬಸವರಾಜ ಸಾಲಿಮಠ ಅವರನ್ನು ಸನ್ಮಾನಿಸಲಾಯಿತು. ವೀರಭದ್ರ ರೇಶ್ಮಿ, ಸಹದೇವ ಪಾಗೋಜಿ, ಧನರಾಜ ಬಡಿಗೇರ, ದೀಪಕ ದುರ್ಗಾಯಿ, ಸುಭಾಸ ಚಿಕ್ಕಪ್ಪನವರ, ವೀರೇಶ ಚಿಕಣಿ ಮೊದಲಾದವರಿದ್ದರು.
ಮಲ್ಲಿಕಾರ್ಜುನಗೌಡ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಮೇಲೆ ಶಂಕರ ಪಾಗೋಜಿ ಇದ್ದರು. ಮಲ್ಲಪ್ಪ ಹೊಂಗಲ್ ಪ್ರಾರ್ಥಿಸಿದರು. ಬಸವರಾಜ ಹೊಂಗಲ್ ನಿರೂಪಿಸಿದರು. ಜೋಸೆಫ್ ಮಲ್ಲಾಡಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಮಲ್ಲಪ್ಪ ಹೊಂಗಲ ನಿರ್ದೇಶನದಲ್ಲಿ ದೇವರ ಹುಬ್ಬಳ್ಳಿಯ ರಂಗಗಂಗಾ ಕಲಾತಂಡದ ವತಿಯಿಂದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-1990’ ನಾಟಕದ ಪ್ರದರ್ಶನ ನಡೆಯಿತು.
ಮೂಲಸೌಲಭ್ಯ ಕಲಿಸಿಸರಕಾರ 28,000 ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಿ ಅವುಗಳನ್ನು ಬೇರೆ ಶಾಲೆಗಳೊಂದಿಗೆ ವಿಲೀನಗೊಳಿಸಲು ಮುಂದಾಗಿರುವುದನ್ನು ಎಲ್ಲ ಕನ್ನಡಿಗರು ಒಕ್ಕೊರಲಿನಿಂದ ಖಂಡಿಸಬೇಕು. ಸರಕಾರಿ ಕನ್ನಡ ಶಾಲೆಗಳಲ್ಲಿ ಬಡ ಮಕ್ಕಳು ಕಲಿಯುತ್ತಾರೆ. ಎಲ್ಲರಿಗೂ ಖಾಸಗಿ ಶಾಲೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸರಕಾರ ಮನಗಾಣಬೇಕಿದೆ. ಸರಕಾರಿ ಶಾಲೆ- ಕಾಲೇಜುಗಳಿಗೆ ಮೂಸೌಲಭ್ಯ ಕಲ್ಪಿಸಬೇಕು ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಹೇಳಿದರು. ರಾಜ್ಯ ಸರಕಾರ ಅಮೆರಿಕದ ಅಕ್ಕ ಸಂಘಟನೆಗೆ ಸಹಕಾರ ನೀಡಿದಂತೆ ನಮಗೆ ಸಹಕಾರ ನೀಡುತ್ತಿಲ್ಲ. ಇಲ್ಲಿಂದ ಕಲಾವಿದರನ್ನು ದುಬೈಗೆ ಕಳಿಸಲು ವ್ಯವಸ್ಥೆ ಮಾಡಿದರೆ ನಮ್ಮ ನಾಡಿನಲ್ಲಿ ಕನ್ನಡ ಚಟುವಟಿಕೆಗಳು ನಡೆಯಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ರಾಜ್ಯ ಸರಕಾರ ಕ್ರಮಕ್ಕೆ ಮುಂದಾಗಬೇಕು.
ಸದನ್ ದಾಸ್, ಅಧ್ಯಕ್ಷ, ಕನ್ನಡಿಗರು ದುಬೈ