Advertisement
ಇಲ್ಲಿನ ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ಅಗರಂ ರಂಗಯ್ಯ, ನಾಟಕಕಾರ ಸಂಸ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರನ್ನು ನಾಡಿಗೆ ನೀಡಿದ ಕೀರ್ತಿ ಈತಾಲೂಕಿನದ್ದು. ಇದರೊಂದಿಗೆ ಸೋಲಿಗರ ಜಾನಪದ ಸಾಹಿತ್ಯ, ಪಟ್ಟಣದ ಬಳೇಮಂಟಪ, ದಿವಾನ್ ಪೂರ್ಣಯ್ಯ ವಸ್ತುಸಂಗ್ರಹಾಲಯ ಸೇರಿದಂತೆ ಅನೇಕ ದೇಗುಲಗಳು ಮಠಗಳು ಇಲ್ಲಿನ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಜೈನ ಸಂತಮುನಿಗಳ ನೆಲವೀಡಾಗಿದ್ದ ಯಳಂದೂರು ಹಾಗೂ ತಾಲೂಕಿನಲ್ಲಿ ಇವರ ಇರುವಿಕೆ ಇತ್ತೆಂ ಬುದಕ್ಕೆ ಸಾಕ್ಷಿಯಾಗುವ ಯಾವ ಕೆಲಸಗಳೂ ನಡೆದಿಲ್ಲ.
Related Articles
Advertisement
ಇದರೊಂದಿಗೆಗೆ ಸಾಧ್ವಿ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದ ಅಗಂ ರಂಗಯ್ಯ ತಾಲೂಕಿನ ಅಗರ ಗ್ರಾಮದವರಾಗಿದ್ದಾರೆ. ಹೆಮ್ಮೆಯ ನಾಟಕಕಾರ ಸಂಸ: ಕನ್ನಡ ನಾಡಿನ ಶೇಷ್ಠ ನಾಟಕಕಾರರಲ್ಲಿ ಒಬ್ಬರಾಗಿದ್ದ ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್ ಅವರು ಸಂಸ ರೆಂತಲೇ ಖ್ಯಾತಿ ಪಡೆದ ಮಹಾನ್ ನಾಟಕಕಾರ ರಾಗಿದ್ದು ಕನ್ನಡಭಾಷೆಗೆ 23 ನಾಟಕಗಳನ್ನು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಆದರೆ ನಮಗೆ ಉಪಲಬ್ಧವಿರುವುದು
ಕೇವಲ ಬಿರುದಂತೆಂಬರ ಗಂಡ, ಸುಗುಣ ಗಂಭೀರ, ಬೆಟ್ಟದ ಅರಸು, ವಿಗಡ ವಿಕ್ರಮರಾಯ, ಮಂತ್ರಶಕ್ತಿ,ವಿಜಯನಾರಸಿಂಹ ಎಂಬ 6 ನಾಟಕಗಳು ಮಾತ್ರ. ಇಂವರ ಬಗ್ಗೆ ಪಟ್ಟಣದಲ್ಲಿ ಅಥವಾ ತಾಲೂಕಿನ ಯಾವ ಗ್ರಾಮಗಳಲ್ಲೂ ಇವರ ಇರುವಿಕೆಯನ್ನು ಗುರುತಿಸುವ ಒಂದೇ ಒಂದು ನೆಲೆ ಇಲ್ಲ. ಇತಿಹಾಸ ಹೇಳುವಂತೆ ಶೃಂಗಾರ ಪ್ರಧಾನ ಕಾವ್ಯವಾಗಿದ್ದ ನೇಮಿ ಚಂದ್ರನ ಲೀಲಾವತಿ ಪ್ರಬಂಧ ಗ್ರಂಥವನ್ನು ಯಳಂ ದೂರಲ್ಲಿ ಆನೆಯ ಮೇಲಿಟ್ಟು, ಇವರ ಶೃಂಗಾರ ರಸವು ಸೋರಿ ಹೋಗದಂತೆ ಆನೆಯ ಹೊಟ್ಟೆಯ ತಳಭಾಗದಲ್ಲಿ ತೊಟ್ಟಿಲು ಕಟ್ಟಿದ್ದರು ಇಷ್ಟು ಸಾಹಿತ್ಯ ಕಾಳಜಿ ಇಲ್ಲಿನ ಜನರಲ್ಲಿತ್ತು ಎನ್ನುತ್ತದೆ ಐತಿಹ್ಯ.
-ಫೈರೋಜ್‌ಖಾನ್