Advertisement

ಹರಿದ ಬಟ್ಟೆಯಂತಾದ ಕನ್ನಡ ಭಾಷೆ

01:16 PM Nov 02, 2021 | Team Udayavani |

ಸಿರಿಗೆರೆ: ನಾಡಿನ ಪ್ರಬುದ್ಧ ಚಿಂತಕರು, ಲೇಖಕರು, ಮುತ್ಸದ್ಧಿಗಳು ಮತ್ತುಚಳವಳಿಗಾರರ ಹೋರಾಟದಿಂದ ಹರಿದುಹಂಚಿಹೋಗಿದ್ದ ನಾಡು ಏಕೀಕರಣಗೊಂಡುಅಖಂಡ ಕರ್ನಾಟಕ ಆಗಿದೆ. ಆದರೆ ನಾಡಿನ ಭಾಷೆಯಾದ ಕನ್ನಡ ಹರಿದ ಬಟ್ಟೆಯಾಗಿದೆ ಎಂದು ತರಳಬಾಳು ಜಗದ್ಗುರು ಡಾ|ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

Advertisement

ಸಿರಿಗೆರೆಯಲ್ಲಿ ಆಯೋಜಿಸಲಾಗಿದ್ದ 66ನೆಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶ್ರೀಗಳುಮಾತನಾಡಿದರು. ಕನ್ನಡ ಮಾತನಾಡುವಾಗಹಲವರು ಅನ್ಯ ಭಾಷೆಯ ಪದಗಳನ್ನುಮಿಶ್ರಣ ಮಾಡಿ ಮಾತನಾಡುವ ಪರಿಪಾಠಬೆಳೆಸಿಕೊಂಡಿದ್ದಾರೆ. ಭಾಷೆಯನ್ನು ಬೆಳೆಸುವವಿಚಾರದಲ್ಲಿ ಈ ಪ್ರವೃತ್ತಿ ಒಳ್ಳೆಯದಲ್ಲ.ತಾಯ್ನುಡಿಯಲ್ಲಿ ಪದಗಳ ಲಭ್ಯತೆ ಇಲ್ಲದೇಇದ್ದರೆ ಅನ್ಯ ಭಾಷೆಯ ಪದಗಳನ್ನು ರೂಪಾಂತರ ಮಾಡಿ ಬಳಸಬಹುದು. ಆದರೆ ಕನ್ನಡ ಭಾಷೆಮಾತನಾಡುವಾಗ ಅನ್ಯ ಭಾಷೆ ಪದಗಳನ್ನು ಬಳಸಬಾರದು ಎಂದರು.

ಬಿಎಂಶ್ರೀಯವರು ಕಾಸಿನ ಸಂಘವೊಂದನ್ನು ಸ್ಥಾಪಿಸಿದ್ದರು. ಆ ಸಂಘದಲ್ಲಿದ್ದ ಹಿರಿಯಸಾಹಿತಿಗಳು ಮಾತನಾಡುವ ಸಂದರ್ಭದಲ್ಲಿಕನ್ನಡ ಭಾಷೆಯ ಮಧ್ಯೆ ಅನ್ಯ ಭಾಷೆಯಪದಗಳನ್ನು ಬಳಸಿದರೆ ಇಂತಿಷ್ಟು ಹಣವನ್ನುದಂಡ ರೂಪದಲ್ಲಿ ಸಂಗ್ರಹಿಸುತ್ತಿದ್ದರು.ವಿದ್ಯಾರ್ಥಿಗಳು ಹಿರಿಯ ಲೇಖಕರ ಕನ್ನಡಕೃತಿಗಳನ್ನು ತಮ್ಮ ಪಠ್ಯಪುಸ್ತಕಗಳ ಜೊತೆಗೆಓದಬೇಕು. ಅದರಿಂದ ಅಪಾರ ಜ್ಞಾನ ಸಂಪತ್ತು ಗಳಿಸಬಹುದು ಎಂದು ಸಲಹೆ ನೀಡಿದರು.

ಯಾವುದೇ ಭಾಷೆಯ ಬಗ್ಗೆ ದ್ವೇಷ ಭಾವನೆ ಬೇಡ. ಜಗತ್ತಿನಲ್ಲಿರುವ ಹಲವು ಭಾಷೆಗಳನ್ನು ಕಲಿತುಕೊಳ್ಳಿ. ಆದರೆ ಯಾವುದೇ ಭಾಷೆಯ ಬಗ್ಗೆಅತಿಯಾದ ವ್ಯಾಮೋಹ ಬೆಳೆಸಿಕೊಳ್ಳಬಾರದು.ನಿಮ್ಮ ಅಭಿಮಾನ, ಸ್ವಾಭಿಮಾನ ಕನ್ನಡಭಾಷೆಗಷ್ಟೇ ಇರಲಿ ಎಂದು ಕಿವಿಮಾತು ಹೇಳಿದರು.

ನಮ್ಮ ಹಿರಿಯ ತಲೆಮಾರಿನ ಜನರು ಶುದ್ಧಕನ್ನಡ ಮಾತನಾಡುತ್ತಿದ್ದರು. ಇಂಗ್ಲೆಂಡ್‌ಎಂಟು ಸಾವಿರ ಮೈಲುಗಳ ದೂರದಲ್ಲಿದ್ದರೂನಮಗೆ ಇಂಗ್ಲಿಷ್‌ ಬಗ್ಗೆ ಅದೇನು ವ್ಯಾಮೋಹಬೆಳೆದಿದೆಯೋ ಗೊತ್ತಿಲ್ಲ. ಹಾಗಾಗಿ ಇಂದುವಿದ್ಯಾರ್ಥಿಗಳು ಕನ್ನಡದಲ್ಲಿಯೇ ಮಾತಾಡುವಮತ್ತು ಕನ್ನಡದಲ್ಲಿಯೇ ಬರೆಯುವ ಹಾಗೂಕನ್ನಡದಲ್ಲಿ ಅನ್ಯ ಭಾಷೆಯ ಪದಗಳನ್ನುಬಳಸುವುದಿಲ್ಲವೆಂಬ ಸಂಕಲ್ಪ ಮಾಡಬೇಕು. ಇದು ಕಷ್ಟವಾದರೂ ಕ್ರಮೇಣ ಸಾಧ್ಯವಾಗುತ್ತದೆ ಎಂದರು.

Advertisement

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯವಿಶೇಷಾಧಿಕಾರಿ ಡಾ| ಎಚ್‌.ವಿ. ವಾಮದೇವಪ್ಪ,ಪ್ರಾಚಾರ್ಯರಾದ ಬಿ.ಎಸ್‌. ಕಲ್ಪನಾ, ಸುರಕೋಡ,ಡಿ.ಎಂ. ನಾಗರಾಜ, ಮುಖ್ಯಶಿಕ್ಷಕರಾದಜೆ.ಡಿ. ಬಸವರಾಜ್‌, ಸೋಮಶೇಖರ್‌, ಎಂ.ಎನ್‌.ಶಾಂತಾ, ಗ್ರಾಪಂ ಅಧ್ಯಕ್ಷ ಕೆ.ಬಿ. ಮೋಹನ್‌ಮತ್ತಿತರರು ಉಪಸ್ಥಿತರಿದ್ದರು. ಯು. ಚಂದ್ರಪ್ಪಸಭಿಕರಿಗೆ ಕನ್ನಡ ಪ್ರತಿಜ್ಞಾ ವಿಧಿ ಬೋಧಿ ಸಿದರು. ಬಿ.ಎಸ್‌. ಮರುಳಸಿದ್ದಯ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next