Advertisement
ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳ ಮುಖಂಡರು, ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಉಪಸಮಿತಿಗಳನ್ನು ರಚಿಸಲಾಗಿದೆ. 67 ಜನರಿಗೆ ಧೀಮಂತ ಸನ್ಮಾನ ಜತೆಗೆ ಪೌರಕಾರ್ಮಿಕರು ಸೇರಿದಂತೆ 16-17 ಕ್ಷೇತ್ರದವರಿಗೆ ಸನ್ಮಾನ ಮಾಡಲಾಗುವುದು. ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಉಪ ಮಹಾಪೌರರ ನೇತೃತ್ವದಲ್ಲಿ ಎಲ್ಲ ಸಮಿತಿಯ ಸದಸ್ಯರು ಇರುತ್ತಾರೆ. 50 ವರ್ಷ ಮೇಲ್ಪಟ್ಟ ಹಾಗೂ ಕನಿಷ್ಟ 10 ವರ್ಷ ಅವಳಿನಗರದಲ್ಲಿ ವಾಸವಿದ್ದು, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರನ್ನು ಸನ್ಮಾನಿಸಲಾಗುವುದು. ಸನ್ಮಾನಕ್ಕೆ ಅರ್ಜಿ ಆಹ್ವಾನಿಸದೆ ನೇರವಾಗಿ ಸಮಿತಿ ಸದಸ್ಯರಿಂದ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಸನ್ಮಾನಿತರಿಗೆ ಪ್ರಶಸ್ತಿ, ನೆನಪಿನ ಕಾಣಿಕೆ, ಭಿನ್ನವತ್ತಳೆ ನೀಡಲಾಗುವುದು ಎಂದರು.
Related Articles
Advertisement
ಉಪ ಮಹಾಪೌರ ಉಮಾ ಮುಕುಂದ, ಸಭಾನಾಯಕ ತಿಪ್ಪಣ್ಣ ಮಜ್ಜಗಿ, ವಿಪಕ್ಷ ನಾಯಕ ರಾಜಾರಾವ ಮನ್ನೆಕುಂಟ್ಲ, ಸದಸ್ಯರಾದ ಸುವರ್ಣಾ ಕಲ್ಲಕುಂಟ್ಲ, ಸಂದೀಲಕುಮಾರ ಎಸ್., ಮೊಹ್ಮದಆರೀಫ ಭದ್ರಾಪೂರ, ಮೊಹ್ಮದಇಕ್ಬಾಲ ನವಲೂರ, ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಸಹಾಯಕ ಆಯುಕ್ತ ಎಸ್.ಸಿ. ಬೇವೂರ ಇದ್ದರು.
ಗುಂಡಿ ಮುಚ್ಚಲು 3.28 ಕೋಟಿ
ಅವಳಿನಗರದ ರಸ್ತೆಗಳಲ್ಲಿ ಬಿದ್ದಿರುವ ತಗ್ಗು-ಗುಂಡಿ ಗಳನ್ನು ಅಂದಾಜು 3.28 ಕೋಟಿ ರೂ. ವೆಚ್ಚದಲ್ಲಿ ಮುಚ್ಚುವ ಕೆಲಸವನ್ನು ಗುರುವಾರದಿಂದಲೇ ಆರಂಭಿಸ ಲಾಗುವುದು ಎಂದು ಆಯುಕ್ತ ಡಾ| ಗೋಪಾಲಕೃಷ್ಣ ಬಿ. ತಿಳಿಸಿದರು. ಪಾಲಿಕೆ ಅಭಿಯಂತರರು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ತಗ್ಗು-ಗುಂಡಿಗಳನ್ನು ಗುರುತಿಸಿದ್ದಾರೆ. ಈಗಾಗಲೇ ವರ್ಕ್ ಆರ್ಡರ್ ಕೂಡ ನೀಡಲಾಗಿದೆ. ರಸ್ತೆಗಳನ್ನು ಯಂತ್ರ ಮತ್ತು ಕಾರ್ಮಿಕರಿಂದ ಅವಶ್ಯವಿದ್ದೆಡೆ ಡಾಂಬರ್ ಹಾಗೂ ಸಿಮೆಂಟ್ ಕಡಿ ಮೂಲಕ ಮುಚ್ಚಲಾಗುವುದು ಎಂದರು.
ಹೆಸರು ನೋಂದಣಿ
ಹುಬ್ಬಳ್ಳಿ: ಪಾಲಿಕೆ ವತಿಯಿಂದ ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅ.29 ಮತ್ತು 30ರಂದು ಪ್ರತಿದಿನ ಸಂಜೆ 5 ಗಂಟೆಗೆ ಇಂದಿರಾ ಗಾಜಿನಮನೆಯಲ್ಲಿ ಆಯೋಜಿಸಿದ್ದು, ಇದರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಗೀತ, ನೃತ್ಯ ಅಭಿರುಚಿಯುಳ್ಳವರು ಪಾಲ್ಗೊಳ್ಳಬಹುದಾಗಿದೆ. 29ರಂದು ಸಂಗೀತ ಸ್ಪರ್ಧೆ, 30ರಂದು ನೃತ್ಯ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಸಕ್ತಿಯುಳ್ಳವರು ಅ.28ರ ಸಂಜೆ 6 ಗಂಟೆಯೊಳಗಾಗಿ ಹೆಸರನ್ನು ಮಹಾನಗರ ಪಾಲಿಕೆ ಸಹಾಯವಾಣಿ ಕೇಂದ್ರದ ವಾಟ್ಸ್‌ಆ್ಯಪ್ ಸಂಖ್ಯೆ 8277803778ಗೆ ಕಳುಹಿಸಬಹುದು. 31ರಂದು ಸಂಜೆ 6 ಗಂಟೆಗೆ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಮತ್ತು ತಂಡದಿಂದ ನಗೆ ಹಬ್ಬ ಇದೆ. ನ. 1ರಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.