Advertisement
ಮಹಿಳೆಯರ ಅಮೋಘ ನೃತ್ಯ, ವಾಚಕರ ವಾಣಿ ಅದ್ಬುತವಾಗಿತ್ತು. ಇಷ್ಟೇಲ್ಲಾ ಕಾರ್ಯಕ್ರಮ ಇಡೋ ಸ್ಪ್ಯಾನಿಷ್ ಟೇಸ್ಟಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ತೃತೀಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.
Related Articles
Advertisement
ಕಸಾಪ ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ್ ಮಾತನಾಡಿ, ಪರಿಶುದ್ದ ಕನ್ನಡ ಬಳಕೆಯಾಗಲಿ. ನಿಮ್ಮ ನಡೆ, ನುಡಿ ಕನ್ನಡವಾಗಿರಲಿ ಕನ್ನಡ ಸಾಹಿತ್ಯವನ್ನು ಓದುವ ಅವ್ಯಾಸ ಬೆಳೆಸಿಕೊಳ್ಳಿ ಮನೆ ಮತ್ತು ಮನದಲ್ಲಿ ಕನ್ನಡ ಪೀಠವನ್ನು ಪ್ರತಿಷ್ಟಾಪಿಸಿ, ಕನ್ನಡ ಪುಸ್ತಕ ಓದುವ ಸಂಕಲ್ಪ ಮಾಡಿ ನಮ್ಮ ಸಾವಿರಾರು ವರ್ಷಗಳ ಭಾಷೆಯನ್ನು ಉಳಿಸಿ ಬೆಳೆಸಿ ಅದರ ಸಾರ್ವಭೌಮತ್ವವನ್ನು ಉತ್ತಂಗಕ್ಕೆ ಏರಿಸಿ ಎಂದರು.
ಮಕ್ಕಳಿಗೆ ಅಮ್ಮ, ಅಪ್ಪ ಎನ್ನುವ ಸಂಸ್ಕೃತಿ ಕಲಿಸಿ ಮಮ್ಮಿ, ಡ್ಯಾಡಿ ಎಂಬ ಆಂಗ್ಲ ಭಾಷೆಯ ಸಂಸ್ಕೃತಿಯನ್ನು ಮನೆಯಿಂದ ಹೊರಗೆ ಕಳಿಸಿ. ಪರಭಾಷೆ, ಪರದೇಶ ವಸ್ತ್ರಗಳಿಗೆ ನಮ್ಮ ಯುವ ಜನಾಂಗ ಒಳಗಾಗಿ ಉತ್ತಮ ಬಟ್ಟೆ ಧರಿಸುವ ಶಕ್ತಿ ಇದ್ದರೂ ಹರಿದ ಬಟ್ಟೆ ಧರಿಸುತ್ತಿರುವುದು ಇದೆಂತಹಾ ಸಂಸ್ಕೃತಿ ಎಂದರು.
ಕನ್ನಡ ಸಹಾಕಯ ಪ್ರಾಧ್ಯಾಪಕ ಡಾ.ಎಂ.ಗೋವಿಂದರಾಯ ಮಾತನಾಡಿ, ದೇಶದಲ್ಲಿಯೇ ನಮ್ಮ ಕರಿಯನಾಡು, ಕನ್ನಡ ನಾಡು ಕರ್ನಾಟಕ ರಾಜ್ಯದ ಭೂಮಿ ಅತೀ ಶ್ರೇಷ್ಠವಾದದ್ದು, ಪರಿಶುದ್ದವಾದದ್ದು. ಇಲ್ಲಿ ಬಸವ, ಅಕ್ಕಮಹದೇವಿ, ಕೃಷ್ಣದೇವರಾಯ, ರನ್ನ, ಪಂಪ, ಕುವೆಂಪು ಸೇರಿದಂತೆ ರಾಜ ಮಹರಾಜರು, ಪಾಳೇಗಾರರು ಮೊದಲಾದ ಮಹನೀಯರು ಈ ನಾಡನ್ನು ಕಟ್ಟಿ ಭಾಷೆ, ಸಂಸೃತಿ, ಸಾಹಿತ್ಯ, ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿ ವಿಶ್ವವು ಇತ್ತಕಡೆ ನೋಡುವಂತೆ ಮಾಡಿದ್ದಾರೆ ಎಂದು ಹೇಳಿದರು.
ವಿಜಯನಗರದಲ್ಲಿ ರತ್ನ, ಮುತ್ತುಗಳ ಮಾರಾಟದ ಕೇಂದ್ರವೇ ಆಗಿತ್ತು. ಇಂತಹ ಸುವರ್ಣ ಭೂಮಿ ಎಲ್ಲಿ ನೋಡಲು ಸಾಧ್ಯವಿಲ್ಲ. ನಮ್ಮ ಭಾಷೆ ಸಂಸ್ಕೃತಿಗೆ ಎರಡು ಸಾವಿರಕ್ಕೂ ಅಧಿಕ ವರ್ಷಗಳ ಹಿಂದೆಯೇ ಕಾಣ ಬಹುದ್ದಾಗಿತ್ತು, ನಾಡಿನಲ್ಲಿ ಜಲ, ಕನಿಜ ಸಂಪತ್ತು ಸಂಮೃದ್ದಿಯಾಗಿತ್ತು, ಮಹಾತ್ಮಗಾಂಧೀಜಿ ಅವರು ಬೆಳಗಾವಿಗೆ ಬಂದ ಸಂದರ್ಭದಲ್ಲಿ, ಕನ್ನಡನಾಡಿಗೆ ನಿಮ್ಮ ಸಂದೇಶ ಏನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಸವಣ್ಣ ನವರು ನೆಲೆಸಿರುವ ನಾಡಿನಲ್ಲಿ ಸಾಹಿತ್ಯ, ವಚನಗಳ ಬಂಡಾರವೇ ಅಡಗಿದೆ, ಮಹನೀಯರು ಈ ರಾಜ್ಯಕ್ಕೆ ಅಲ್ಲ ಇಡೀ ಸಮಾಜಕ್ಕೆ ಕೊಟ್ಟಂತಹ ಸಂದೇಶದ ಮುಂದೆ ನಾನೇನು ಸಂದೇಶ ನೀಡಲಿ ಎಂದರು ಹಾಗಾಗಿ ನಮ್ಮ ನಾಡಿಗೆ ಇತಿಹಾಸದ ಪರಂಪರೆ ಇದೆ ಅದನ್ನು ಉಳಿಸಿ ಬೆಳೆಸುವ ಜಬಾವ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಖಾನೆ ನಿರ್ದೇಶಕ ಪಿ.ಶಿವರಾಮ್ ಅಧ್ಯಕ್ಷತೆ ವಹಿಸಿದರು. ಹವ್ಯಾಸಿ ಬರಹಗಾರ ಮಂಜುನಾಥ್ ಕುಣಿಗಲ್ ಟು ಕಂದಹಾರ್ ಪುಸ್ತಕದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಪ್ತಗಿರಿ ಆಸ್ಪತ್ರೆಯ ಡಾ.ಕುಮಾರ್, ನಿವೃತ್ತ ಪ್ರಾಚಾರ್ಯ ರಾಮಣ್ಣ, ಪತ್ರಿಕಾ ಸಂಘದ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಆರ್.ರಂಗನಾಥ್, ಜಿಲ್ಲಾ ನಿರ್ದೇಶಕ ಕೆ.ಎರವೀಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ದಿನೇಶ್‌ಕುಮಾರ್, ಕರವೇ ಅಧ್ಯಕ್ಷ ಮಂಜುನಾಥ್, ಕಾರ್ಖಾನೆಯ ಜಗದೀಶ್‌ನಾಯ್ಕ್ ಮತ್ತಿತರರು ಇದ್ದರು.