Advertisement

ಕನ್ನಡ ಉತ್ಸವಕ್ಕೆ ಜನಜಾತ್ರೆ

11:27 AM Nov 02, 2019 | Suhan S |

ಬೆಳಗಾವಿ: ಬಹು ಸಂಸ್ಕೃತಿಯ ನಗರಿ, ಭಾಷಾ ವೈವಿಧ್ಯತೆಯ ನೆಲವಾದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡದ ಬೇರು ಗಟ್ಟಿಯಾಗಿದೆ. ವರ್ಷದಿಂದ ವರ್ಷಕ್ಕೆ ಕನ್ನಡದ ಬಗೆಗಿನ ಉತ್ಸಾಹ ಹಾಗೂ ಅಭಿಮಾನ ಇಮ್ಮಡಿಯಾಗುತ್ತ ಸಾಗಿದೆ.ಈ ಸಲದ ರಾಜ್ಯೋತ್ಸವದಲ್ಲಿ ಬಿಸಿಲು-ಮಳೆಯನ್ನೂ ಲೆಕ್ಕಿಸದೇಪಾಲ್ಗೊಂಡ ಬೆಳಗಾವಿಗರು ರಾಜ್ಯೋತ್ಸವದ ಮೆರಗು ಹೆಚ್ಚಿಸಿದರು. ಸಂಭ್ರಮಾಚರಣೆಗೆ ಜನಸಾಗರವೇಹರಿದು ಬಂತು.ಭಾಷಾ ಸೌಹಾರ್ದತೆಗೆ ವಿಷ ಬೀಜ ಬಿತ್ತುತ್ತಿರುವ ಮಹಾರಾಷ್ಟ್ರ ಏಕೀಕರಣಸಮಿತಿ(ಎಂಇಎಸ್‌) ಸಂಘಟನೆಗೆಸಡ್ಡು ಹೊಡೆದು ನಿಂತಿರುವ ಕನ್ನಡಿಗರು ಉತ್ಸವವನ್ನು ಜಾತ್ರೆಯನ್ನಾಗಿ ಆಚರಿಸಿದರು.

Advertisement

ಎಲ್ಲೆಡೆಯೂ ಕನ್ನಡದ ಕಹಳೆ ಮೊಳಗಿಸಿದರು. ಕನ್ನಡ, ಕನ್ನಡಿಗ, ಕರ್ನಾಟಕದ ಜಯಘೋಷ ಮಾರ್ದನಿಸಿತು. ಗಡಿಯಲ್ಲಿ ಕನ್ನಡ ಇನ್ನೂ ಗಟ್ಟಿಯಾಗಿದೆ ಎಂದು ತೋರಿಸಿ ಕೊಟ್ಟರು. ನಗರದ ರಾಣಿ ಚನ್ನಮ್ಮ ವೃತ್ತ ಕರ್ನಾಟಕ ರಾಜ್ಯೋತ್ಸವಕ್ಕೆ ಹೇಳಿ ಮಾಡಿಸಿದ ಜಾಗ. ಇಡೀ ಆವರಣ ಹಳದಿ-ಕೆಂಪು ಬಾವುಟಗಳಲ್ಲಿ ರಾರಾಜಿಸಿತು. ಕಿಕ್ಕಿರಿದು ಸೇರಿದ್ದ ಜನಸ್ತೋಮ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಜಯಘೋಷ ಮೊಳಗಿಸಿ ಕನ್ನಡ ಮನಸ್ಸುಗಳು ಒಂದು ಎಂಬುದನ್ನು ಸಾಬೀತುಪಡಿಸಿದರು. ಯುವ ಪಡೆಯ ಸಂಭ್ರಮಕ್ಕೆ ಮಿತಿಯೇ ಇರಲಿಲ್ಲ.

ರಾಣಿ ಚನ್ನಮ್ಮನ ಪ್ರತಿಮೆಗೆ ಹೂಮಾಲೆ ಹಾಕಿ ವಂದಿಸಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಮಧ್ಯರಾತ್ರಿಯಿಂದಲೇ ರಾಜ್ಯೋತ್ಸವ ಸಂಭ್ರಮ ಆರಂಭಗೊಂಡಿತ್ತು. ಚನ್ನಮ್ಮ ಪ್ರತಿಮೆಗೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕನ್ನಡ ಸಂಘಟನೆಗಳು ಪೂಜೆ ಸಲ್ಲಿಸಿದವು. ಡಾಲ್ಬಿ ಹಾಗೂ ಡಿಜೆ ಸದ್ದುಗಳ ಮಧ್ಯೆ ನಡೆದ ರಾಜ್ಯೋತ್ಸವ ಮೆರವಣಿಗೆ ಯುದ್ದಕ್ಕೂ ಕನ್ನಡ ಹಾಡುಗಳ ಲೋಕ ಅನಾವರಣಗೊಂಡಿತು.

ಸುಮಾರು 100ಕ್ಕೂ ಹೆಚ್ಚು ರೂಪಕಗಳು ಗಮನ ಸೆಳೆದವು. ವಿವಿಧ ಸಂಘ-ಸಂಸ್ಥೆಗಳ ರೂಪಕಗಳು ಕರ್ನಾಟಕದ ಗತವೈಭವ ಸಾರಿದವು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಜಯಘೋಷ ಮೊಳಗಿಸಿ ಕನ್ನಡಾಭಿಮಾನಿಗಳು ಕನ್ನಡದ ಡಿಂಡಿಮ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next