Advertisement

ಹೈ-ಕ, ಉ.ಕ.ಕ್ಕೆ ಡಿಸಿಎಂ ಸ್ಥಾನ: ಇಂದು ಪ್ರತಿಭಟನೆ 

06:55 AM May 27, 2018 | |

ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಹೈದರಾಬಾದ್‌ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮೇ 27ರಂದು ನಗರದ ಕೆಂಪೇಗೌಡ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವು ಹೈದರಾಬಾದ್‌ ಕರ್ನಾಟಕ ಮತ್ತು ಉತ್ತರ
ಕರ್ನಾಟಕವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಹಿಂದುಳಿದಿರುವ ಆ ಭಾಗಗಳು ಅಭಿವೃದ್ಧಿಯಾಗಬೇಕೆಂದರೆ ಅಲ್ಲಿನ ಶಾಸಕರನ್ನು ಡಿಸಿಎಂ ಮಾಡಬೇಕು ಎಂದು ಆಗ್ರಹಿಸಿದರು.

ರಜನಿ ಚಿತ್ರ ನಿರ್ಬಂಧಿಸಲು ಆಗ್ರಹ: ತಮಿಳು ನಟ ರಜನಿಕಾಂತ್‌ ನಟಿಸಿರುವ ಕಾಲಾ ಚಲನಚಿತ್ರ ರಾಜ್ಯದ ಯಾವುದೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವಕಾಶ ನೀಡಬಾರದು.

ಒಂದು ವೇಳೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆ ಮಾಡಲಾಗುತ್ತದೆ ಎಂದು ವಾಟಾಳ್‌ ಎಚ್ಚರಿಸಿದರು. ಕಾವೇರಿ ನೀರು ನಮ್ಮ ಆಸ್ತಿ.ಇದುವರೆಗೂ ನಟರಾಗಿದ್ದ ರಜನೀಕಾಂತ್‌ ಈಗ ರಾಜಕಾರಣಿ
ಯಾಗಿದ್ದಾರೆ. ತಮ್ಮ ಪಕ್ಷದ ಪ್ರಭಾವ ಹೆಚ್ಚಿಸಲು ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಹೇಳಿಕೆ
ನೀಡುತ್ತಿದ್ದಾರೆ. ಈ ಮೂಲಕ ತಾನು ಹುಟ್ಟಿದ ನಾಡನ್ನು ಮರೆತು ಕನ್ನಡ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಒಂದು ವೇಳೆ ನಿರ್ವಹಣಾ ಮಂಡಳಿ ರಚನೆಯಾದರೆ, ಕಬಿನಿ, ಹಾರಂಗಿ, ಕೆಆರ್‌ಎಸ್‌ ಎಲ್ಲ ಜಲಾಶಯಗಳ ನೀರು ಪಡೆಯಲು ಮಂಡಳಿ ಎದುರು ಕೈ ಮುಗಿದು ನಿಂತುಕೊಳ್ಳ ಬೇಕಾಗುತ್ತದೆ. ಹಾಗಾಗಿ ಕನ್ನಡ ದ್ರೋಹಿ ರಜನಿಕಾಂತ್‌
ಚಿತ್ರವನ್ನು ಪ್ರತಿಯೊಬ್ಬರೂ ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ನಾಯಕರಿಗೆ ರಾಜ್ಯದ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಇತ್ತೀಚೆಗೆ ಕುಮಾರಸ್ವಾಮಿ ಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಟ ಕಮಲಹಾಸನ್‌ರನ್ನು ಕರೆಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ಬೇಕು ಎನ್ನುವವರನ್ನು ಕರೆಸಿ ವೇದಿಕೆ ಹಂಚಿಕೊಂಡಿದ್ದಾರೆ. ಇದು ನಾಚಿಕೆಗೇಡಿನ
ವಿಚಾರ. ಅವರಿಗೆ ಮಾನ-ಮರ್ಯಾದೆಯಿಲ್ಲ ಎಂದು ವಾಗ್ಧಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next