Advertisement

ರೇಪ್ ಕೇಸ್|ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು: ನಟಿ ರಮ್ಯಾ ಆಕ್ರೋಶ

03:15 PM Aug 27, 2021 | Team Udayavani |

ಬೆಂಗಳೂರು: ಮೈಸೂರು ವಿದ್ಯಾರ್ಥಿ ಅತ್ಯಾಚಾರ ಪ್ರಕರಣದ ಕುರಿತು ನಡೆಯುತ್ತಿರುವ ಚರ್ಚೆಗೆ ಇದೀಗ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಎಂಟ್ರಿ ಕೊಟ್ಟಿದ್ದು, ಪ್ರತಿ ಬಾರಿಯೂ ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

Advertisement

ಇಂದು ತಮ್ಮ ಸೋಷಿಯಲ್ ಮೀಡಿಯಾದ ಅಕೌಂಟ್ ಗಳನ್ನು ಈ ಬಗ್ಗೆ ಬರೆದಿರುವ ರಮ್ಯಾ, ‘ಮಹಿಳೆಯರ ಮೇಲೆ ಪುರುಷರಿಂದಾಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರವಾಗಲಿ ಅಥವಾ ದೈಹಿಕ ಅಥವಾ ಮಾನಸಿಕ ದೌರ್ಜನ್ಯವೇ ಆಗಲಿ.. ಮಹಿಳೆಯರಾದ ನಾವೇ ದೂಷಣೆಗೆ ಒಳಗಾಗುತ್ತೇವೆ. ಇದು ನಿನ್ನದೇ ತಪ್ಪು, ನೀನು ಹಾಗೆ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ನೀನು ಅದನ್ನ ಧರಿಸಬಾರದಿತ್ತು, ನಿನ್ನ ಉಡುಪು ತೀರಾ ಬಿಗಿಯಾಗಿದೆ ಮತ್ತು ತೀರಾ ಚಿಕ್ಕದಾಗಿದೆ, ತೀರಾ ತಡವಾಗಿ ನೀನು ಮನೆಯಿಂದ ಹೊರಗೆ ಹೋಗಬಾರದಿತ್ತು, ನೀನು ಮೇಕಪ್ ಧರಿಸಬಾರದಿತ್ತು, ಕೆಂಪು ಲಿಪ್ ಸ್ಕಿಕ್ ಯಾಕೆ ಹಾಕೊಂಡಿದ್ದೆ – ಇದನ್ನೆಲ್ಲ ನಾವು ಆಗಾಗ ಕೇಳುತ್ತಲೇ ಇರುತ್ತೇವೆ! ಯಾಕೆ?”

ಯಾಕಂದ್ರೆ, ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು. ನಾವು ಮಾತ್ರ ಕಾಂಪ್ರೊಮೈಸ್ ಆಗಬೇಕು. ನಾವು ಮಾತ್ರ ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು. ಇಲ್ಲ..! ಇನ್ನಾಗಲ್ಲ..! ಈ ನಾನ್‌ ಸೆನ್ಸ್‌ಗೆ ಈ ಕೂಡಲೆ ಪೂರ್ಣವಿರಾಮ ಇಡಿ! ನಿಜ ಹೇಳಬೇಕು ಅಂದ್ರೆ, ನಾನು ಇದನ್ನು ಮಾಡಿದ್ದೇನೆ. ನನ್ನ ಸ್ನೇಹಿತರೂ ಕೂಡ. ಆಪಾದನೆಯನ್ನು ಹೊತ್ತುಕೊಂಡಿದ್ದೇವೆ. ಆದರೆ ಏನ್ಗೊತ್ತಾ? ಇನ್ಮುಂದೆ ಇದನ್ನೆಲ್ಲಾ ಸಹಿಸಲು ಸಾಧ್ಯವಿಲ್ಲ. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಿರಬೇಡಿ. ಧ್ವನಿಯೆತ್ತಿ.” ಎಂದು ಬರೆದುಕೊಂಡಿದ್ದಾರೆ.

ಇನ್ನು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಾರೆ ಸಾಕಷ್ಟು ಚರ್ಚೆಗಳು ನಡೆದವು. ಆ ವಿದ್ಯಾರ್ಥಿನಿ ರಾತ್ರಿ ಹೊತ್ತು ಅಲ್ಲೇಕೆ ಹೋಗಬೇಕಿತ್ತು ಎನ್ನುವ ಪ್ರಶ್ನೆಗಳು ಕೇಳಿ ಬಂದವು. ಇದಕ್ಕೆ ಉತ್ತರ ಎನ್ನುವಂತೆ ರಮ್ಯಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಈ ಮೇಲಿನ ರೀತಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next