Advertisement

ಚರ್ಚೆಗೆ ಗ್ರಾಸವಾಯಿತು ‘ಪೆಂಟಗನ್‌’ ಟೀಸರ್‌

10:46 AM Jan 20, 2023 | Team Udayavani |

ನಿರ್ದೇಶಕ ಗುರುದೇಶಪಾಂಡೆ ತಮ್ಮ “ಜಿ ಸಿನಿಮಾಸ್‌’ ಬ್ಯಾನರ್‌ನಡಿ ನಿರ್ಮಿಸಿರುವ “ಪೆಂಟಗನ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಐದು ಕಥೆಗಳನ್ನೊಳಗೊಂಡ ಈ ಚಿತ್ರವನ್ನು ಐದು ಜನ ನಿರ್ದೇಶಕರು ನಿರ್ದೇಶಿಸಿದ್ದಾರೆ.

Advertisement

ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ ಕನ್ನಡ ಹೋರಾಟಗಾರನೊಬ್ಬನ ಸುತ್ತ ಸಾಗಿದ್ದು, ಚಿತ್ರದಲ್ಲಿ ಬರುವ ಸಂಭಾಷಣೆಗಳು ಚರ್ಚೆಗೆ ಗ್ರಾಸವಾಗಿದೆ. ಕನ್ನಡಪರ ಸಂಘಟನೆಯ ಮುಖ್ಯಸ್ಥನೊಬ್ಬನ ಭ್ರಷ್ಟಾಚಾರದ ಬಗ್ಗೆ ಟೀಸರ್‌ನಲ್ಲಿ ಹೇಳಲಾಗಿದ್ದು, ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿಸಿದೆ.

ಟೀಸರ್‌ ಬಿಡುಗಡೆ ಬಳಿಕ ಮಾತನಾಡಿದ ಗುರುದೇಶಪಾಂಡೆ, “ಇದು ಐದು ಕಥೆಗಳನ್ನೊಳಗೊಂಡ ಸಿನಿಮಾ. ನಾನು ಕೆಲವು ವರ್ಷಗಳ ಹಿಂದೆ ಅಂದುಕೊಂಡ ಎಳೆಯನ್ನಿಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಕಿಶೋರ್‌ ಇಲ್ಲಿ ಮುಖ್ಯಪಾತ್ರ ಮಾಡಿದ್ದಾರೆ. ರೌಡಿಯೊಬ್ಬ ಕನ್ನಡಪರ ಹೋರಾಟಗಾರನಾಗುವ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಅಂಶು ಮಲಿಕ್

ಚಿತ್ರದಲ್ಲಿ ಡೆತ್‌ ಥೀಮ್‌ ವೊಂದಿದ್ದು, ಅದು ಐದು ಕಥೆಗಳಿಗೂ ಒಂದೇ ಆಗಿದೆ. ಕೊನೆಯಲ್ಲಿ ಐದೂ ಕಥೆಗಳು ಒಂದು ಕಥೆಗೆ ಲಿಂಕ್‌ ಆಗುತ್ತದೆ. ಇವತ್ತು ಟೀಸರ್‌ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಚರ್ಚೆ ಆಗಬೇಕೆಂಬ ಉದ್ದೇಶ ನಮ್ಮದಾಗಿತ್ತು. ಇದು ಆರೋಗ್ಯಕರ ಚರ್ಚೆ. ಅಂತಿಮವಾಗಿ ಎಲ್ಲಾ ಕುತೂಹಲಗಳಿಗೂ ಸಿನಿಮಾ ಉತ್ತರ ನೀಡಲಿದೆ’ ಎಂದರು.

Advertisement

ನಟ ಕಿಶೋರ್‌ ಅವರಿಗೆ ಈ ಸಿನಿಮಾದ ಪಾತ್ರ ಇಷ್ಟವಾಯಿತಂತೆ. “ಗುರುದೇಶಪಾಂಡೆ ಯವರು ಐದು ಕಥೆಗಳನ್ನು ಸೇರಿಸಿ, ಒಂದು ಸಿನಿಮಾ ಮಾಡಿದ್ದಾರೆ. ಐದು ಸಿನಿಮಾಗಳ ಶ್ರಮವನ್ನು ಒಂದೇ ಚಿತ್ರಕ್ಕೆ ಹಾಕಿದ್ದಾರೆ. ನನ್ನ ಪ್ರಕಾರ ಒಂದು ಸಿನಿಮಾ ಎಂದಾಗ ಅದು ಚರ್ಚೆಯಾಗಬೇಕು. ಇವತ್ತು ಚಿತ್ರದ ಟೀಸರ್‌ ಚರ್ಚೆಗೆ ಗ್ರಾಸವಾಗಿದೆ. ನನಗೆ ತುಂಬಾ ಖುಷಿಕೊಟ್ಟ ಪಾತ್ರ’ ಎಂದರು.

ಚಿತ್ರದಲ್ಲಿ ನಟಿಸಿರುವ ಕೃತಿಕಾ ದೇಶಪಾಂಡೆ ಕೂಡಾ ತಮ್ಮ ಅನುಭವ ಹಂಚಿಕೊಂಡರು. ಉಳಿದಂತೆ ನಿರ್ದೇಶಕ ಆಕಾಶ್‌ ಶ್ರೀವತ್ಸ ಕೂಡಾ ಮಾತನಾಡಿದರು

ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next