ನಟ ಶಶಿಕುಮಾರ್ ಪುತ್ರ ಅಕ್ಷಿತ್ ಎಕ್ಸೆ„ಟ್ ಆಗಿದ್ದಾರೆ. ಜನ ತಮ್ಮ ಸಿನಿಮಾವನ್ನು ಯಾವ ರೀತಿ ಸ್ವೀಕರಿಸುತ್ತಾರೋ ಎಂಬ ಕುತೂಹಲದೊಂದಿಗೆ ಎದುರು ನೋಡುತ್ತಿದ್ದಾರೆ. ಅಂದಹಾಗೆ, ಅಕ್ಷಿತ್ ಕುತೂಹಲಕ್ಕೆ ಕಾರಣ “ಓ ಮೈ ಲವ್’. ಸಿನಿಮಾ ಆರಂಭವಾದ ದಿನದಿಂದಲೇ ಸಖತ್ ಸೌಂಡ್ ಮಾಡಿಕೊಂಡು ಬರುತ್ತಿರುವ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಜಿಸಿಬಿ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಜಿ. ರಾಮಾಂಜಿನಿ ಕಥೆ ಬರೆದು, ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಓ ಮೈ ಲವ್’ ಚಿತ್ರಕ್ಕೆ ಸ್ಮೈಲ್ ಶ್ರೀನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಪ್ರೇಕ್ಷಕರಿಗೆ ಇಷ್ಟವಾಗುವಂಥ ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಸಿನಿಮಾ ಪ್ರಚಾರಾರ್ಥ ಹೋದ ಕಡೆಗಳಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎನ್ನುವುದು ನಿರ್ದೇಶಕರ ಮಾತು.
ನಾಯಕ ಅಕ್ಷಿತ್ ಕೂಡಾ ಸಿನಿಮಾ ಮೂಡಿಬಂದ ಹಾಗೂ ಹಿರಿಯ ಕಲಾವಿದರ ಜೊತೆ ನಟಿಸಿದ ಅನುಭವ ಹಂಚಿಕೊಂಡರು. “ಓ ಮೈ ಲವ್’ ಚಿತ್ರದಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್ ಮತ್ತು ನಾಯಕಿಯಾಗಿ ಕೀರ್ತಿ ಕಲ್ಕೆರೆ ತೆರೆಮೇಲೆ ಜೋಡಿಯಾಗಿ ಅಭಿನಯಿಸಿದ್ದಾರೆ.
“ಸಿನಿಮಾದಲ್ಲಿ ಮನಮುಟ್ಟುವಂಥ ಒಳ್ಳೆಯ ಪಾತ್ರಗಳಿದ್ದು, ಇಡೀ ಚಿತ್ರತಂಡದ ಪ್ರಯತ್ನದಿಂದ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ’ ಎಂದು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು ನಾಯಕಿ ಕೀರ್ತಿ.
ಇನ್ನು “ಓ ಮೈ ಲವ್’ ಸಿನಿಮಾದಲ್ಲಿ ಬಹುಭಾಷಾ ನಟ ದೇವಗಿಲ್ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಎಸ್. ನಾರಾಯಣ್, ದೇವಗಿಲ್, ಸಾಧುಕೋಕಿಲ, ಪವಿತ್ರಾ ಲೋಕೇಶ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಹಾಲೇಶ್ ಎಸ್. ಛಾಯಾಗ್ರಹಣ, ಡಿ. ಮಲ್ಲಿ ಸಂಕಲನವಿದೆ.