Advertisement

ಮಿ.ನಟ್ವರ್ ಲಾಲನ ಯುಗಳ ಗೀತೆ

04:04 PM Nov 09, 2023 | Team Udayavani |

ತನುಷ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ತನುಷ್‌ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿರುವ ಹಾಗೂ ವಿ. ಲವ ನಿರ್ದೇಶನದ “ಮಿ. ನಟ್ವರ್‌ ಲಾಲ್’ ಸಿನಿಮಾದ ಯುಗಳ ಗೀತೆಯೊಂದು ಬಿಡುಗಡೆಯಾಗಿದೆ.

Advertisement

ಈ ಚಿತ್ರಕ್ಕಾಗಿ ಬಹದ್ದೂರ್‌ ಚೇತನ್‌ ಕುಮಾರ್‌ ಬರೆದಿರುವ “ಅಚ್ಚಚ್ಚಚ್ಚು ಅಚ್ಚುಮೆಚ್ಚು…’ ಎಂಬ ಪ್ರೇಮಗೀತೆ “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ ಮೂಲಕ ಹೊರಬಂದಿದ್ದು, ಕೇಳುಗರ ಗಮನ ಗೆಲ್ಲುತ್ತಿದೆ.

ಧರ್ಮವಿಶ್‌ ಸಂಗೀತ ಸಂಯೋಜಿಸಿರುವ ಈ ಯುಗಳಗೀತೆ ಗಾಯಕ ಸಾಯಿ ವಿಘ್ನೇಶ್‌ ಕಂಠಸಿರಿಯಲ್ಲಿ ಸುಮಧುರವಾಗಿ ಮೂಡಿಬಂದಿದೆ. ತನುಷ್‌ ಶಿವಣ್ಣ ಹಾಗೂ ಸೋನಾಲ್‌ ಮೊಂತೆರೊ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿ. ಲವ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ವಿಲಿಯಂ ಡೇವಿಡ್‌ ಛಾಯಾಗ್ರಹಣ, ಕೆ. ಎಂ. ಪ್ರಕಾಶ್‌ ಸಂಕಲನವಿದೆ. ತನುಷ್‌ ಶಿವಣ್ಣ, ಸೋನಾಲ್‌ ಮೊಂತೆರೊ, ನಾಗಭೂಷಣ, ಕಾಕ್ರೋಜ್‌ ಸುಧಿ, ಯಶ್‌ ಶೆಟ್ಟಿ, ರಾಜೇಶ್‌ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್‌, ಸುಂದರರಾಜ್‌, ಕಾಂತರಾಜು ಕಡ್ಡಿಪುಡಿ ಮುಂತಾದವರು “ಮಿ. ನಟ್ವರ್‌ ಲಾಲ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next