ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಹೀರೋಗಳ ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ಆದರೆ, ಆ್ಯಕ್ಷನ್ ಹೀರೋಯಿನ್‌ಗಳ ಸಂಖ್ಯೆ ಕಡಿಮೆ ಎಂಬುದು ಬಹುತೇಕರ ಮಾತು. ಮಾಲಾಶ್ರೀ, ವಿಜಯಶಾಂತಿ, ಆಯೇಷಾ ಹೀಗೆ ಒಂದಷ್ಟು ನಟಿಯರನ್ನು ಹೊರತುಪಡಿಸಿದರೆ, ಇತ್ತೀಚಿನ ವರ್ಷಗಳಲ್ಲಿ ಕಂಪ್ಲೀಟ್ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿಯರ ಸಂಖ್ಯೆ ತುಂಬ ವಿರಳ ಎಂದೇ ಹೇಳಬಹುದು. ಈಗ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಹೆಸರು ರಿತನ್ಯಾ ಹೂವಣ್ಣ.
ಇದೇ ಸೆ. 16ಕ್ಕೆ ತೆರೆ ಕಾಣುತ್ತಿರುವ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರದ “ಮರ್ದಿನಿ’ ಸಿನಿಮಾದ ಮೂಲಕ ರಿತನ್ಯಾ ಹೂವಣ್ಣ ಎಂಬ ನವ ನಟಿ ಆ್ಯಕ್ಷನ್ ಹೀರೋಯಿನ್ ಆಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ.
ಹೌದು, “ಮರ್ದಿನಿ’ ರಿತನ್ಯಾ ಹೂವಣ್ಣ ಅಭಿನಯದ ಚೊಚ್ಚಲ ಚಿತ್ರ. ಮೊದಲ ಚಿತ್ರದಲ್ಲೇ ರಿತನ್ಯಾ ಖಾಕಿ ತೊಟ್ಟು ಖಡಕ್ ಪೊಲೀಸ್ ಅಧಿಕಾರಿಯಾಗಿ ತೆರೆಮೇಲೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡುವ ರಿತನ್ಯಾ, “ಸಿನಿಮಾದ ಟೈಟಲ್ಲೇ ಹೇಳುವಂತೆ, “ಮರ್ದಿನಿ’ ಕಂಪ್ಲೀಟ್ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದ ಸಿನಿಮಾ. ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬಳು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಏನೆಲ್ಲ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾಳೆ ಅನ್ನೋದು ಸಿನಿಮಾದ ಕಥೆಯ ಒಂದು ಎಳೆ. ಇದರಲ್ಲಿ ಆ್ಯಕ್ಷನ್ ಜೊತೆಗೆ, ಲವ್, ಸೆಂಟಿಮೆಂಟ್, ಎಮೋಶನ್ಸ್, ಪಾಲಿಟಿಕ್ಸ್, ಮಾನವೀಯತೆ… ಹೀಗೆ ಎಲ್ಲವೂ ಇದೆ. ಛಲ ಮತ್ತು ಹಠವಿದ್ದರೆ, ಸಾಮಾನ್ಯ ಮಹಿಳೆಯೊಬ್ಬಳು ಏನೆಲ್ಲಾ ಸಾಧಿಸಬಹುದು ಅನ್ನೋದನ್ನ, ಸಿನಿಮ್ಯಾಟಿಕ್ ಆಗಿ ಸ್ಕ್ರೀನ್‌ನಲ್ಲಿ ಹೇಳಲಾಗಿದೆ. “ಮರ್ದಿನಿ’ ಎಲ್ಲ ಮಹಿಳೆಯರಿಗೂ ಸ್ಫೂರ್ತಿಯಾಗುವಂಥ ಸಿನಿಮಾ’ ಎನ್ನುತ್ತಾರೆ.
ಇದನ್ನೂ ಓದಿ:ಅಬ್ಬಾ..ಈ ಗಣೇಶ ಮಂಡಳಿಯ ಒಂದು ತೆಂಗಿನಕಾಯಿ 2.65 ಲಕ್ಷ ರೂ.ಗೆ ಹರಾಜು!
ಇನ್ನು “ಮರ್ದಿನಿ’ ಸಿನಿಮಾದ ಪೊಲೀಸ್ ಅಧಿಕಾರಿಯ ಪಾತ್ರಕ್ಕಾಗಿ ರಿತನ್ಯಾ ಹೂವಣ್ಣ ಸುಮಾರು ನಾಲ್ಕು ತಿಂಗಳು ಕಾಲ ಕಠಿಣ ತರಬೇತಿ ಪಡೆದುಕೊಂಡಿದ್ದಾರಂತೆ. “ಪೊಲೀಸ್ ಆμàಸರ್ ಹೇಗಿರುತ್ತಾರೆ. ಅವರ ಮ್ಯಾನರಿಸಂ ಹೇಗಿರುತ್ತದೆ ಅನ್ನೋದನ್ನ ಹತ್ತಿರದಿಂದ ಕಂಡು ಪಾತ್ರಕ್ಕೆ ಬೇಕಾದ ಪ್ರಿಪರೇಷನ್ ಮಾಡಿಕೊಂಡಿದ್ದೇನೆ. ಆ್ಯಕ್ಷನ್ ಕಲಿತಿದ್ದೇನೆ. ನನ್ನ ಪಾತ್ರ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ ಪಡಿಸುತ್ತಾರೆ ರಿತನ್ಯಾ.
“ಅಂಕಿತ್ ಫಿಲಂಸ್’ ಬ್ಯಾನರ್‌ನಲ್ಲಿ ಭಾರತಿ ಜಗ್ಗಿ, ಜಗದೀಶ್ ಜಗ್ಗಿ ನಿರ್ಮಿಸಿರುವ ಈ ಚಿತ್ರಕ್ಕೆ ಕಿರಣ್ ಕುಮಾರ್ ನಿರ್ದೇಶನವಿದೆ. ಚಿತ್ರ ಸೆ. 16ಕ್ಕೆ 120ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ.