ಬೆಂಗಳೂರು : ಮಹಾಮಾರಿ ಕೋವಿಡ್ ಎರಡನೇ ಅಲೆಗೆ ಚಿತ್ರರಂಗ ನಲುಗುತ್ತಿದೆ. ಸೋಂಕು ತಗುಲಿ ಈಗಾಗಲೇ ಹಲವರವನ್ನು ಚಂದನವನ ಕಳೆದುಕೊಂಡಿದೆ. ಇದೀಗ ಮತ್ತೋರ್ವ ಯುವ ನಿರ್ದೇಶಕ ಅಭಿರಾಮ್ ಬಲಿಯಾಗಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಉದಯೋನ್ಮುಖ ನಿರ್ದೇಶಕ ಅಭಿರಾಮ್ ಶುಕ್ರವಾರ ಸಾವನ್ನಪ್ಪಿದ್ದಾರೆ.
ಕಳೆದೊಂದು ವಾರದಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯದೇ ಮನೆಯಲ್ಲೇ ಇದ್ದರು. ಕೊನೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಬಳಿಕ ಟೆಸ್ಟ್ ಮಾಡಿಸಿದಾಗ ಕೋವಿಡ್ ಪಾಸಿಟೀವ್ ಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಭಿರಾಮ್ ನಿಧನರಾಗಿದ್ದಾರೆ. ಇವರು ಸಂಯುಕ್ತ 2, ಹಾಗು 0% ಲವ್ ಸಿನಿಮಾ ನಿರ್ದೇಶಿಸಿದ್ದರು.
ಇತ್ತೀಚೆಗೆ 0% ಲವ್ ಸಿನಿಮಾದ ನಟ ನಿರ್ಮಾಪಕ ಮಂಜುನಾಥ್ ಕೊರೋನಾಗೆ ಬಲಿಯಾಗಿದ್ದರು.