Advertisement

ಬರ್ಗೆಟ್‌ ಬಸ್ಯಾ! ಇದು ಹೊಸಬರ ಚಿತ್ರ

01:46 PM Apr 16, 2023 | Team Udayavani |

ಯರ್ರಂ ರೆಡ್ಡಿ ಪಿಚ್ಚರ್ ಸಂಸ್ಥೆಯ ಅಡಿಯಲ್ಲಿ ಮೂಲತ: ಬಳ್ಳಾರಿಯವರಾದ ವೈ.ನಾಗಾರ್ಜುನ ರೆಡ್ಡಿಯವರು ನಿರ್ಮಿಸುತ್ತಿರುವ “ಬರ್ಗೆಟ್‌ ಬಸ್ಯಾ’ ಚಿತ್ರದ ಚಿತ್ರೀಕರಣ ರಾಜಾಜಿನಗರ, ಮಹಾಲಕ್ಷ್ಮೀ ಬಡಾವಣೆಯಲ್ಲಿ ನಡೆಯಿತು. ಈ ಚಿತ್ರವನ್ನು ರಿಶ್‌ ಹಿರೇಮಠ, ಮೊದಲ ಬಾರಿಗೆ ನಿರ್ದೇಶಿಸಿದ್ದು, ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

Advertisement

ಇವರು ನಿರ್ದೇಶನ ವಿಭಾಗದಲ್ಲಿ ತರಬೇತಿ ಪಡೆದಿದ್ದು, ಕೆಲವು ನುರಿತ ನಿರ್ದೇಶಕರ ಬಳಿ ಕೆಲಸ ಕಲಿತು ಕೆಲವು ಕಿರು ಚಿತ್ರಗಳನ್ನು ಮಾಡಿದ್ದಾರೆ. ಸಂಗೀತ ಎನ್‌.ಸ್ವಾಮಿ ಈ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರಕ್ಕೆ ಶಾಮ್‌ ಸೆಲ್ವಿನ್‌ ಛಾಯಾಗ್ರಹಣ, ಪ್ರಕಾಶ್‌.ಜಿ. ಸಾಹಿತ್ಯ, ಸಂಜಯ್‌ ರೆಡ್ಡಿ ಸಂಕಲನ, ಸಂಗೀತ ಅನುಜ್‌ ಎಸ್‌ ಪರಿವೃದ್‌ ಸಂಗೀತವಿದೆ.

ಚಿತ್ರವನ್ನು ಬೆಂಗಳೂರು, ಸಕಲೇಶಪುರ, ತೀರ್ಥಹಳ್ಳಿ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಕಂಡ ಕಂಡ ಹುಡುಗಿಯರನ್ನು ಲವ್‌ ಮಾಡಿ ಎಂದು “ಬರ್ಗೆಟ್‌ ಬಸ್ಯ’ ಎನ್ನುವ ಪಾತ್ರಧಾರಿ ಹಿಂಬಾಲಿಸುವುದರ ಬಗ್ಗೆ ಕಥಾವಸ್ತುವಿದೆ ಎಂಬುದು ಚಿತ್ರತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next