Advertisement

“ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಸಂವಹನ ಕೌಶಲ  ಅಗತ್ಯ’

02:11 PM Feb 25, 2017 | Team Udayavani |

ಕಾಪು: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಸಂವಹನ ಕೌಶಲ್ಯ ತರಬೇತಿ ನೀಡಿದರೆ ಅವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಬಲ್ಲರು ಎಂದು ಜೇಸಿಐ ಉದ್ಯಾವರ ಕುತ್ಪಾಡಿಯ ಅಧ್ಯಕ್ಷ ಅಶೋಕ್‌ ಪಾಲನ್‌ ಹೇಳಿದರು.

Advertisement

ಉದ್ಯಾವರ ಸರಕಾರಿ ಪ. ಪೂ. ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ 10 ದಿನಗಳ ಇಂಗ್ಲೀಷ್‌ ಸಂವಹನ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತಾನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌. ಡಿ. ಎಂ. ಸಿ. ಉಪಾಧ್ಯಕ್ಷ ಉದ್ಯಾವರ ನಾಗೇಶ್‌ ಕುಮಾರ್‌ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಎಸ್‌. ಡಿ. ಎಂ. ಸಿ. ಸದಸ್ಯ ಪ್ರತಾಪ್‌ ಕುಮಾರ್‌, ಮುಖ್ಯ ಶಿಕ್ಷಕಿ ಮೂಕಾಂಬೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ದಿಶಾ ಸ್ವಾಗತಿಸಿದರು. ಪವಿತ್ರಾ ವಂದಿಸಿದರು. ವಿದ್ಯಾರ್ಥಿ ರೋಹನ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next