Advertisement

ಪ್ಲಸ್‌ವನ್‌ ತತ್ಸಮಾನ ಕನ್ನಡ ತರಗತಿ ನೋಂದಣಿಗೆ ಶಾಸಕರಿಂದ ಚಾಲನೆ

06:05 AM Jul 21, 2018 | |

ಕುಂಬಳೆ: ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾಕರ ಶೈಕ್ಷಣಿಕ ಹಕ್ಕಿನ ರಕ್ಷಣೆಯ ಕಾರ್ಯ ಅತ್ಯಗತ್ಯ, ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಪ್ಲಸ್‌ ವನ್‌ ತರಗತಿಗಳ ನೋಂದಣಿ ಪ್ರಕ್ರಿಯೆಯು ಜಿಲ್ಲೆಯಲ್ಲಿ ಹೊಸ ಮನ್ವಂತರ ಸೃಷ್ಠಿಸಲಿದೆ ಎಂದು ಶಾಸಕ ಪಿ.ಬಿ. ಅಬ್ದುಲ್‌ರಜಾಕ್‌ ಅವರು ಹೇಳಿದರು. 

Advertisement

ಹೈಯರ್‌ ಸೆಕೆಂಡರಿ ತತ್ಸಮಾನ ಕನ್ನಡ ಪಠ್ಯಕ್ರಮದ ಪ್ಲಸ್‌ ವನ್‌ ತರಗತಿಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಳ್ಳಲಿದ್ದು, ನೋಂದಣಿ ಪ್ರಕ್ರಿಯೆಗೆ ಮಂಜೇಶ್ವರ ಬ್ಲಾ.ಪಂ ಕಚೇರಿ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ವ ಶಿಕ್ಷಾ ಅಭಿಯಾನದ ಮೂಲಕ 2015 ರಲ್ಲಿ ಆರಂಭಗೊಂಡ ಯೋಜನೆಯು ಪ್ರಸ್ತುತ ವರ್ಷದಿಂದ ಚಾಲ್ತಿಗೆ ಬಂದಿದೆ ಎಂದು ಅವರು ಹೇಳಿದರು.ಅಲ್ಪಸಂಖ್ಯಾತರ ಶೆ„ಕ್ಷಣಿಕ ಹಕ್ಕಿನ ರಕ್ಷಣೆಜವಾಬ್ದಾರಿಯುರಾಜ್ಯ ಸರಕಾರ ಸಹಿತ ಸ್ಥಳೀಯಾಡಳಿತ ಸಂಸ್ಥೆಗಳ ಮೇಲಿದೆ ಎಂದರು.

ಕನ್ನಡ ಭಾಷೆಯಲ್ಲಿ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ತಾನು ಕನ್ನಡಿಗರ ನ್ಯಾಯಯುತ ಹಕ್ಕಿನ ರಕ್ಷಣೆಗೆ ಕಟಿಬದ್ಧನಾಗಿರುವುದಾಗಿ ತಿಳಿಸಿದರು.

ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಅವಶ್ಯಕತೆಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸ ಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುಕೂಲಗಳನ್ನು ಮಾಡಿ ಕೊಡಲಾ ಗುವುದು ಎಂದರು.
ಪ್ಲಸ್‌ಒನ್‌ ಕನ್ನಡ ತತ್ಸಮಾನ ತರಗತಿಗೆ ಪ್ರತಿ ವರ್ಷ 3000 ಮಂದಿ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಪ್ರತಿ ವರ್ಷಜಿಲ್ಲೆಯಿಂದ 5 ಸಾವಿರ ಮಂದಿ ಕನ್ನಡ ವಿದ್ಯಾರ್ಥಿಗಳು ಹತ್ತನೇ ತರಗತಿ ಪೂರೈಸುತ್ತಿದ್ದಾರೆ.ಅಂತಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕನ್ನಡ ಮಾಧ್ಯಮ ತತ್ಸಮಾನ ಪಠ್ಯಕ್ರಮ ಪೂರಕವಾಗಿರಲಿದೆ ಎಂದರು.

Advertisement

ಕಾಸರಗೋಡು ಜಿ.ಪಂ ಯೋಜನೆಯಡಿ ಪ್ರಾಥಮಿಕ ಹಂತದ ಕನ್ನಡ ಪಠ್ಯಕ್ರಮದ ಭಾಷಾಂತರಕ್ಕೆ 2 ಲಕ್ಷ ರೂ. ಹಾಗೂ ಮುದ್ರಣ ಖರ್ಚು ವೆಚ್ಚಗಳಿಗೆ ಒಟ್ಟು 20 ಲಕ್ಷ ರೂ.  ಮೀಸಲಿಡಲಾಗಿದೆ ಎಂದು ಸರ್ವ ಶಿಕ್ಷಾ ಅಭಿಯಾನದ ಅಧಿಕಾರಿ ಸಿರಾಜ್‌ ಹೇಳಿದರು.

ಬ್ಲಾ.ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್‌, ಎಣ್ಮಕಜೆ ಗ್ರಾ.ಪಂ ಅಧ್ಯಕ್ಷೆ ರೂಪವಾಣಿ ಭಟ್‌, ಬ್ಲಾ.ಪಂ. ಸದಸ್ಯರಾದ ಮುಹಮ್ಮದ್‌ ಮುಸ್ತಫಾ, ಯು.ಸದಾಶಿವ, ಪ್ರದೀಪ್‌, ಪ್ರಸಾದ್‌ರೈ ಕಯ್ನಾರು, ಅಸಿಮಾ, ಸಬಿತಾ, ಸಾಯಿರಾಬಾನು  ಹಾಗೂ ವಿವಿಧ ಗ್ರಾ.ಪಂ.ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು. 

ಇದು ಸಕಾಲ: ಅಶ್ರಫ್‌
ಅಧ್ಯಕ್ಷತೆ ವಹಿಸಿ ಮಾತನಾ ಡಿದ ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್‌ ಗಡಿಭಾಗದ ಕನ್ನಡ ವಿದ್ಯಾರ್ಥಿಗಳ ಶೈಕ್ಷಣಿಕ ಕೊರತೆಗಳನ್ನು ನೀಗಿಸಲಾ ಗುವುದು. ಹೆಚ್ಚಿನ ಅನಿವಾಸಿ ಉದ್ಯಮಿಗಳೇ ಇರುವ ಮಂಜೇಶ್ವರದಲ್ಲಿ ಹೊಸ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಲು ಇದು ಸಕಾಲ ಎಂದರು.  ಕನ್ನಡ ಮಾಧ್ಯಮ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾ.ಪಂ ಗಳು ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳು ಬದ್ಧವಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next