Advertisement
ನಗರದ ಜ್ಯೋತಿ ಜಂಕ್ಷನ್‌ನಿಂದ ನೆಹರೂ ಮೈದಾನ್ ತನಕ ಆಕರ್ಷಕ ಸ್ತಬ್ಧ ಚಿತ್ರಗಳೊಂದಿಗೆ ವಿದ್ಯಾರ್ಥಿಗಳು ಮತ್ತು ಗಣ್ಯರ ಮೆರವಣಿಗೆ, ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರಿಂದ ರಾಷ್ಟ್ರ ಧ್ವಜಾರೋಹಣ, ಪರೇಡ್ ವೀಕ್ಷಣೆ ಹಾಗೂ ರಾಜ್ಯೋತ್ಸವ ಸಂದೇಶ, ವಿವಿಧ ಘಟಕಗಳಿಂದ ಪಥ ಸಂಚಲನ, ಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ ಮತ್ತು ಕವಾಯತು ಪ್ರದರ್ಶನ, ನಾಡ ಗೀತೆಗಳ ಗಾಯನ ನೆರವೇರಿತು.
ಸನಿಲ್, ಮುಡಾ ಅಧ್ಯಕ್ಷ ಕೆ. ಸುರೇಶ್ ಬಲ್ಲಾಳ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಉಪ ಮೇಯರ್ ರಜನೀಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ತಾ.ಪಂ. ಅಧ್ಯಕ್ಷ ಮಹಮದ್ ಮೋನು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದರು. ಅತ್ಯುತ್ತಮ ತಂಡಕ್ಕೆ ಪ್ರಶಸ್ತಿ
ಅತ್ಯುತ್ತಮ ಪಥ ಸಂಚಲನಕ್ಕಾಗಿ ಬಾಲಕಿಯರ ರಸ್ತೆ ಸುರಕ್ಷಾ ಮತ್ತು ಗಸ್ತು ದಳ
(ಆರ್.ಎಸ್.ಪಿ.) ಪ್ರಥಮ ಹಾಗೂ ಭಾರತ್ ಸೇವಾ ದಳದ ಸೀನಿಯರ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
Related Articles
ಉದಯವಾಣಿಯ ಮಂಗಳೂರಿನ ಹಿರಿಯ ವರದಿಗಾರ ಕೇಶವ ಕುಂದರ್ ಸಹಿತ 15 ಮಂದಿ ಸಾಧಕರು ಮತ್ತು ನಾಲ್ಕು ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
Advertisement
ಪ್ರತಿಭಾ ಪುರಸ್ಕಾರಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 12 ಮಂದಿ ಮಕ್ಕಳಿಗೆ ಅಸಾಧಾರಣ ಪ್ರತಿಭಾ ಪುರಸ್ಕಾರ ಹಾಗೂ 2017 ಎಪ್ರಿಲ್‌ನಲ್ಲಿ ಜರಗಿದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಜಿಲ್ಲೆಯ 11 ಮಂದಿ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಮತ್ತು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು. ನಾಡ ಗೀತೆ, ಕವಾಯತು
ಉರ್ವ ಕೆನರಾ ಹೈಸ್ಕೂಲ್ ವಿದ್ಯಾರ್ಥಿನಿಯರಿಂದ ನಾಡಗೀತೆ ಗಾಯನ, ಗಾಂಧಿ ನಗರ ಸರಕಾರಿ ಶಾಲೆ, ಗುಜರಾತಿ ಆಂಗ್ಲ ಮಾಧ್ಯಮ ಶಾಲೆ, ಬೋಳಾರ ಸೈಂಟ್ ಆ್ಯನ್ಸ್ ಶಾಲೆ, ಕುದ್ರೋಳಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮತ್ತು ಬಲ್ಮಠ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಾಮೂಹಿಕ ನೃತ್ಯ/ಕವಾಯತು ಪ್ರದರ್ಶನ ನಡೆಯಿತು. ಭುವನೇಶ್ವರಿ ಮೆರವಣಿಗೆ
ಕೆಂಪು-ಹಳದಿ ಬಣ್ಣದ ಚಿತ್ತಾರದ ಆಕರ್ಷಣೆ..ನಾಡಿನ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳ ಸಮಾಗಮ..ಕನ್ನಡಾಂಬೆಯೇ ಆವಿರ್ಭವಿಸಿದಂತೆ ಭಾಸವಾಗುವ ತಾಯಿ ಭುವನೇಶ್ವರಿಯ ಪ್ರತಿರೂಪ..ನಗರದಲ್ಲೆಡೆ ಶೋಭಾಯಮಾನವಾಗಿ ವಿರಾಜಿಸಿದ ಕನ್ನಡದ ಕಂಪು.. ಇವು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಗರದ ಬಲ್ಮಠ ಜ್ಯೋತಿ ವೃತ್ತದಿಂದ ನೆಹರೂ ಮೈದಾನದ ತನಕ ಹಮ್ಮಿಕೊಂಡ ಭುವನೇಶ್ವರಿ
ಮೆರವಣಿಗೆಯಲ್ಲಿ ಕಂಡು ಬಂದ ನಾಡಿನ ಶ್ರೀಮಂತಿಕೆ ಸಾರುವ ದೃಶ್ಯಗಳು. ಕೆಂಪು-ಹಳದಿ ಬಣ್ಣದ ದಿರಿಸು, ಶಾಲುಗಳು ಆಕರ್ಷಣೀಯವಾಗಿ ಹೊಸ ಮೆರುಗು ನೀಡಿತು. ನಾಡಿನ ಕಲಾ
ಶ್ರೀಮಂತಿಕೆ ಸಾರುವ ಸ್ತಬ್ಧಚಿತ್ರಗಳು, ಗೊಂಬೆ ಕುಣಿತ, ಯಕ್ಷಗಾನ ಕಲೆ ಸಾರುವ ಗೊಂಬೆಗಳು ಮೆರವಣಿಗೆಗೆ
ಕಳೆಗಟ್ಟಿದ್ದವು. ಪರಿಸರ ಸಂರಕ್ಷಣೆ ಕುರಿತಾದ ಅರಣ್ಯ ಇಲಾಖೆಯ ಸ್ತಬ್ಧಚಿತ್ರ, ಗ್ರಾಮ ಜೀವನ ಪರಿಕಲ್ಪನೆಯ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ತಬ್ಧ ಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ದೇವಾಲಯಗಳ ಮಂಗಳವಾದ್ಯಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಭಾರತ ಸೇವಾದಳ, ಕನ್ನಡಪರ ಸಂಘಟನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಉದ್ಘಾಟನೆ
ಕನ್ನಡ ಭುವನೇಶ್ವರಿಯ ಮೆರವಣಿಗೆಯನ್ನು ಹಿರಿಯ ಸಾಹಿತಿ ನಾಡೋಜ ಸಾರಾ ಅಬೂಬಕರ್ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ,
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಆರೋಗ್ಯ ಇಲಾಖೆ ಅಧಿಕಾರಿ ಡಾ| ರಾಜೇಶ್
ಮತ್ತಿತರರು ಉಪಸ್ಥಿತರಿದ್ದರು. ಆಕರ್ಷಕ ಪಥ ಸಂಚಲನ
ವಿವಿಧ ಘಟಕಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್ ವಿಠಲ
ಶಿಂಧೆ ಅವರು ಪಥ ಸಂಚಲನದ ದಂಡ ನಾಯಕರಾಗಿ ಕಾರ್ಯನಿರ್ವಹಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕೆಎಸ್
ಆರ್‌ಪಿ, ನಗರ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ, ಪೊಲೀಸ್ ವಾದ್ಯವೃಂದ, ಅಗ್ನಿಶಾಮಕ ದಳ, ಅರಣ್ಯ ಪಡೆ, ಎನ್‌ಸಿಸಿ ಏರ್‌ವಿಂಗ್ ಮತ್ತು ನೇವಲ್, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ್ ಸೇವಾದಳ, ಬಾಲಕಿಯರ ರಸ್ತೆ ಸುರಕ್ಷತಾ ಮತ್ತು ಗಸ್ತು ದಳ ಸಹಿತ 14 ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.