Advertisement

ಬ್ಯಾಂಕ್‌ ಅಧಿಕಾರಿಗಳಿಗೆ ಕನ್ನಡ ಪಾಠ!

11:45 PM Oct 12, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರಾಷ್ಟ್ರೀಕೃತ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿರುವ ಕನ್ನಡೇತರ ಅಧಿಕಾರಿಗಳು ಕರ್ತವ್ಯ ಸಂದರ್ಭ ಕನ್ನಡವನ್ನೇ ಬಳಸುವಂತೆ ಲೀಡ್‌ ಬ್ಯಾಂಕ್‌ ನಿರ್ದೇಶನ ನೀಡಿದೆ. ಹೀಗಾಗಿ ಎಲ್ಲ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಕನ್ನಡ ಕಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಕರಾವಳಿಯ ಬಹುತೇಕ ಎಲ್ಲ ಬ್ಯಾಂಕ್‌ಗಳಲ್ಲೂ ಹೊರ ರಾಜ್ಯದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಬಹುತೇಕರಿಗೆ ಕನ್ನಡ ತಿಳಿಯದ ಕಾರಣ ಗ್ರಾಹಕರಿಗೆ ಸಮಸ್ಯೆ ಆಗುತ್ತಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ತೊಂದರೆ ಹೆಚ್ಚು. ಸರಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೂ ಸಮಸ್ಯೆಯಾಗುತ್ತಿದೆ. ಈ ವಿಚಾರ ಜಿಲ್ಲಾ, ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಭೆ ಮತ್ತು ಲೀಡ್‌ ಬ್ಯಾಂಕ್‌ ಸಭೆಯಲ್ಲಿಯೂ ಹಲವು ಬಾರಿ ಪ್ರಸ್ತಾವವಾಗಿದೆ. ಕನ್ನಡೇತರ ಬ್ಯಾಂಕ್‌ ಅಧಿಕಾರಿಗಳು ಕನ್ನಡ ಕಲಿಯಬೇಕು ಎಂಬ ಸಾರ್ವಜನಿಕರ ಆಗ್ರಹದ ಮೇರೆಗೆ ಈ ವಿಚಾರಕ್ಕೆ ಒತ್ತು ನೀಡಲಾಗಿದೆ.

ಕನ್ನಡೇತರ ಬ್ಯಾಂಕ್‌ ಅಧಿಕಾರಿಗಳಿಗೆ ವಾರದಲ್ಲಿ ಒಂದು ದಿನ ಕನ್ನಡ ಕಲಿಕೆ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಸ್ಥಳೀಯ ಕನ್ನಡ ಪಂಡಿತರು ಅಥವಾ ನಿವೃತ್ತ ಕನ್ನಡ ಉಪನ್ಯಾಸಕರ ಸಹಾಯ ಪಡೆಯಲಾಗುತ್ತಿದೆ. ಹೊರ ರಾಜ್ಯದಲ್ಲಿ ಇರುವ ಕನ್ನಡಿಗರನ್ನು ಕರೆತನ್ನಿ!

ರಾಜ್ಯದ ಬಹಳಷ್ಟು ಅಧಿಕಾರಿಗಳು ಹೊರ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ಕರ್ನಾಟಕಕ್ಕೆ ವರ್ಗಾ ಯಿಸಬೇಕು ಎಂಬ ಆಗ್ರಹವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಸಂಸದ ನಳಿನ್‌ ಅವರು ಈಗಾಗಲೇ ರಾಜ್ಯ ಮುಖ್ಯ ಕಾರ್ಯ ದರ್ಶಿ ವಿಜಯ ಭಾಸ್ಕರ್‌ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಹೊರ ರಾಜ್ಯಗಳಲ್ಲಿರುವ ಕನ್ನಡಿಗ ಅಧಿಕಾರಿಗಳನ್ನು ಕರ್ನಾಟಕಕ್ಕೆ ವರ್ಗಾವಣೆ ಮಾಡಬೇಕು ಮತ್ತು ಭಡ್ತಿ ಸಂದರ್ಭದಲ್ಲಿ ಇಲ್ಲಿನ ಅಧಿಕಾರಿಗಳನ್ನು ಹೊರ ರಾಜ್ಯಗಳಿಗೆ ಕಳುಹಿಸದೆ ಇಲ್ಲಿಯೇ ಉಳಿಸುವ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಶೇ.35 ಕನ್ನಡೇತರ ಅಧಿಕಾರಿಗಳು
– ಒಂದು ಬ್ಯಾಂಕ್‌ನಲ್ಲಿ ಕನಿಷ್ಠ 5ರಿಂದ 15 ಅಧಿಕಾರಿಗಳು.
– ಕರಾವಳಿ ಜಿಲ್ಲೆಗಳಲ್ಲಿ ಸುಮಾರು 7 ಸಾವಿರ ಅಧಿಕಾರಿಗಳು.
– ಇವರಲ್ಲಿ ಶೇ. 35ರಷ್ಟು ಮಂದಿ ಕನ್ನಡೇತರರು.
– ಮ್ಯಾನೇಜರ್‌ ಸಹಿತ ಉನ್ನತ ಹುದ್ದೆಗಳಲ್ಲಿ ಬಹುತೇಕ ಹೊರ ರಾಜ್ಯಗಳವರು.

Advertisement

ಬ್ಯಾಂಕ್‌ಗಳಲ್ಲಿ ಕರ್ತವ್ಯದಲ್ಲಿರುವ ಕನ್ನಡೇತರ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ವ್ಯವ ಹಾರಕ್ಕೆ ಅನುಕೂಲ ವಾಗುವಂತೆ ಕನ್ನಡ ಭಾಷಾ ತರಬೇತಿ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ಹೆಚ್ಚಿನ ಬ್ಯಾಂಕ್‌ಗಳಲ್ಲಿ ಈ ಪ್ರಕ್ರಿಯೆ ಈಗ ನಡೆಯುತ್ತಿದೆ. ಜನಸಾಮಾನ್ಯ ರೊಂದಿಗೆ ವ್ಯವಹರಿಸಲು ಅನುಕೂಲ ವಾಗುವಂತೆ ಕನ್ನಡ ಭಾಷಾ ಕಲಿಕೆಗೆ ಆದ್ಯತೆ ನೀಡಲಾಗಿದೆ.
– ಪ್ರವೀಣ್‌ ಎಂ.ಪಿ., ರುದ್ರೇಶ್‌ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌-ದ.ಕ., ಉಡುಪಿ

ಒಟ್ಟು ಬ್ಯಾಂಕ್‌ಗಳು

ಜಿಲ್ಲೆ             ಬ್ಯಾಂಕ್‌ಗಳು      ಶಾಖೆಗಳು
ದಕ್ಷಿಣ ಕನ್ನಡ   35                   642
ಉಡುಪಿ         22                   410

Advertisement

Udayavani is now on Telegram. Click here to join our channel and stay updated with the latest news.

Next