Advertisement

ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯವಾಗಲಿ: ಕಿಗ್ಗಾಲು

09:41 PM Aug 01, 2019 | Sriram |

ಮಡಿಕೇರಿ :ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸಮ್ಮೇಳನಾಧ್ಯಕ್ಷರಾದ ಕಿಗ್ಗಾಲು ಗಿರೀಶ್‌ ಅವರು ಒತ್ತಾಯಿಸಿದ್ದಾರೆ.

Advertisement

ಚೇರಂಬಾಣೆಯಲ್ಲಿ ಬುಧವಾರ ನಡೆದ ಮಡಿಕೇರಿ ತಾಲ್ಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಣಿಜ್ಯ ಮಳಿಗೆಗಳಲ್ಲಿಯೂ ಸಹ ಕನ್ನಡ ಭಾಷೆಯಲ್ಲಿ ಬರೆದ ಫ‌ಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಸರ್ಕಾರಿ ವ್ಯವಹಾರಗಳೆಲ್ಲವೂ ಕನ್ನಡದಲ್ಲಿಯೇ ನಡೆಯಬೇಕು. ಎಂದು ಅವರು ಹೇಳಿದರು. ಉದ್ಯೋಗದಲ್ಲಿಯೂ ಸಹ ಕನ್ನಡಿಗರಿಗೆ ಮತ್ತು ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ಇರಬೇಕು ಎಂದು ಕಿಗ್ಗಾಲು ಗಿರೀಶ್‌ ಅವರು ಆಗ್ರಹಿಸಿದರು.ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಕನ್ನಡವನ್ನೇ ಬಳಸಬೇಕು. ಎಂದು ಅವರು ಹೇಳಿದರು.

ಕೊಡಗು ಜಿಲ್ಲೆಯು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇತರ ಜಿಲ್ಲೆಗಳಿಗಿಂತ ತೀರ ಭಿನ್ನವಾಗಿದೆ. ಪುಟ್ಟ ಜಿಲ್ಲೆಯಾದರೂ ಹಲವಾರು ಸಮಸ್ಯೆಗಳನ್ನು ಬಹು ವರ್ಷದಿಂದ ಕಾಡುತ್ತಿವೆ. ಇವುಗಳನ್ನು ಇತ್ಯರ್ಥಪಡಿಸಬೇಕಿದೆ ಎಂದರು.
ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ದೊರೆಯಬೇಕು. ಎಂದು ಅವರು ಒತ್ತಾಯಿಸಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಜಾನಪದ ಪರಿಷತ್‌ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ವಿದ್ಯಾರ್ಥಿಗಳು ಕನ್ನಡ ಪುಸ್ತಕವನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಕನ್ನಡ ಭಾಷೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಸಲಹೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ‌ ಬಿ.ಎ.ಲೋಕೇಶ್‌ ಸಾಗರ್‌ ಅವರು ಮಾತನಾಡಿ ಕನ್ನಡ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದರು. ನಿಕಟ ಪೂರ್ವ ಅಧ್ಯಕ್ಷ ಮೊಣ್ಣಂಡ ಶೋಭ ಸುಬ್ಬಯ್ಯ ಅವರು ಮಾತನಾಡಿದರು.
ಸಮ್ಮೇಳನಾಧ್ಯಕ್ಷ‌ರು ಬರೆದಿರುವ ಪುಸ್ತಕಗಳನ್ನು ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ಅಧ್ಯಕಎಂ.ಪಿ.ಕೇಶವ ಕಾಮತ್‌ ಅವರು ಬಿಡುಗಡೆ ಮಾಡಿದರು.

Advertisement

ಪತ್ರಕರ್ತ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಬೇಂಗೂರು ಗ್ರಾ.ಪಂ. ಅಧ್ಯಕ್ಷ‌ ಕೆ.ಬಿ.ಅಶೋಕ್‌ ಮಾತನಾಡಿದರು.ಡಿ.ಎಚ್‌. ಪುಷ್ಪಾ ಅವರು ಸಮ್ಮೇಳನಾ ಧ್ಯಕ್ಷರ ಪರಿಚಯ ಮಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷಕುಡೆಕಲ್‌ ಸಂತೋಷ್‌ ಸ್ವಾಗತಿಸಿದರು, ಪರಮೇಶ್‌ ಮತ್ತು ದಿವ್ಯಾ ಅವರು ಕಾರ್ಯಕ್ರಮ ನಿರೂಪಿಸಿದರು. ಕಿಶೋರ್‌ ಕುಮಾರ್‌ ವಂದಿಸಿದರು.ಮೆರವಣಿಗೆಗೆ ತಹಶೀಲ್ದಾರ್‌ ಮಹೇಶ್‌ ಅವರು ಚಾಲನೆ ನೀಡಿದರು.

ಪೂರ್ವಗ್ರಹ ಅಗತ್ಯವಿಲ್ಲ
ಇಂಗ್ಲಿಷ್‌ ಮಾತನಾಡುವವರು ಬುದ್ಧಿವಂತರು ಎಂಬ ಪೂರ್ವಗ್ರಹ ಅಗತ್ಯವಿಲ್ಲ. ಇಂಗ್ಲೀಷ್‌ ಕಲಿಕೆ ಜತೆಗೆ ಕನ್ನಡ ಭಾಷೆಯನ್ನು ವ್ಯಾಕರಣ ಬದ್ಧವಾಗಿ ಕಲಿಯುವಂತಾಗಬೇಕು ಎಂದು ಕಿಗ್ಗಾಲು ಗಿರೀಶ್‌ ಅವರು ಸಲಹೆ ಮಾಡಿದರು.

ಪ್ರತಿಯೊಬ್ಬರೂ ದಿನಪತ್ರಿಕೆ, ನಿಯತಕಾಲಿಕೆಗಳನ್ನು ಕೊಂಡು ಓದಬೇಕು. ಇದರಿಂದ ಕನ್ನಡ ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಮ್ಮೇಳನ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಸಾಹಿತ್ಯ, ಸಂಗೀತ, ಬರವಣಿಗೆ ಚಟುವಟಿಕೆಗಳಲ್ಲಿ ತೊಡಗಿ ಸಿಕೊಳ್ಳು ವಂತಾಗಲು ಕನ್ನಡ ದಿನಪತ್ರಿಕೆಯನ್ನು ಪ್ರತಿನಿತ್ಯ ಓದಬೇಕು ಮತ್ತು ಬರೆಯುವ ಅಭ್ಯಾಸ ಬೆಳೆಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next