Advertisement
ಪಟ್ಟಣದ ಮಹಾರಾಜ ವೃತ್ತದಲ್ಲಿ ಕುಂತೂರು ಚಂದ್ರಪ್ಪ ಹಾಗೂ ಜಾನ್ ಅಮ್ಮೇಡ ವೇದಿಕೆಯಲ್ಲಿ ನಡೆದ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ವಿಶ್ವದಲ್ಲಿ ಅತ್ಯಂತ ಹೆಚ್ಚು ಆಯುಧಗಳನ್ನು ಹೊಂದಿರುವ ವ್ಯಕ್ತಿಯ ಅತ್ಯಂತ ಪುಕ್ಕಲು ತನದಿಂದ ಕೂಡಿದ್ದು ಸಾಹಿತ್ಯ ಬಲ್ಲ ವ್ಯಕ್ತಿಯು ಯಾವುದೇ ಅಂಜು ಅಳಕಿಲ್ಲದೆ ಸತ್ಯವನ್ನು ಹೊರ ಹಾಕಬಲ್ಲ. ಜನರ ಹಾಡು ಮಾತುಗಳಿಂದ ರಚಿತವಾದ ಸಾಹಿತ್ಯಕ್ಕೆ ಹೆಚ್ಚು ಗಟ್ಟಿತನವಿದ್ದು ಇಂದಿನ ಅಧುನಿಕ ಯುಗದಲ್ಲಿ ಯೂ ಗಟ್ಟಿ ಯಾಗಿ ನೆಲೆ ಕಂಡಿರುವ ಕನ್ನಡ ಸಾಹಿತ್ಯಕ್ಕೆ ಅಂತ ಹದೊಂದು ಪರಂಪರೆ ಇದ್ದು , ಸಾಹಿತ್ಯ ಸಮ್ಮೇಳನಗಳು ಮಹಾನಗರಗಳಿಂದ ಆರಂಭ ವಾಗಿ ಗ್ರಾಪಂಗಳವರೆಗೂ ಹರಡಿ ಕೊಂಡಿರುವ ಕಾರಣ ಆಧುನೀಕತೆ ಭರಾಟೆಯನಡುವೆಯೂ ಕನ್ನಡ ಸಾಹಿತ್ಯ ಕಟ್ಟಿತನದಿಂದ ಬೇರು ಬಿಟ್ಟಿದೆ ಎಂದರು.
Related Articles
Advertisement
ಬದ್ಧನಾಗಿರುವೆ: ಶಾಲಾ ಕಾಲೇಜು ದಿನಗಳಿಂದಲೂ ನಾಡು ಕಂಡ ಮಹನೀಯವರ ವಿಚಾರವಾದಿಗಳ ಮತ್ತು ತತ್ವಜ್ಞಾನಿಗಳ ಬರಹಗಳ ಪ್ರೇರಣೆ ಯಿಂದ ಮತ್ತು ಜಿಲ್ಲೆ ಮತ್ತು ರಾಜ್ಯದ ಸಾಹಿತಿಗಳು ಬುದ್ದಿಜೀವಿಗಳ ಒಡನಾಟದಿಂದ ಸಾಹಿತ್ಯ ಕ್ಷೇತ್ರದಲ್ಲಿ ಇಲ್ಲಿವರೆಗೂ ಉಳಿಯುವಂತೆ ಮಾಡಿರುವುದು ಅತ್ಯಂತ ಹೆಮ್ಮ ಎನಿಸಿದೆ. ಇನ್ನು ಅಧ್ಯಕ್ಷನಾಗಿ ನನ್ನಿಂದಾಗುವ ಕನ್ನಡದ ಕೆಲಸಗಳಿಗೆ ಕಂಕಣ ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.
ಮೆರವಣಿಗೆ:ಸಮ್ಮೇಳದ ವಿಶೇಷವಾಗಿ ರಾಷ್ಟ್ರಧ್ವಜವನ್ನು ತಹಶೀಲಾœರ್ ಎಂ.ಮಂಜುನಾಥ್, ನಾಡಧ್ವಜವನ್ನು ಕಸಾಪದ ಜಿಲ್ಲಾ ಅಧ್ಯಕ್ಷ ನಾಗಾನಂದ ಕೆಂಪರಾಜ್, ಪರಿಷತ್ ಧ್ವಜವನ್ನು ತಾಲೂಕು ಅಧ್ಯಕ್ಷ ದಾ.ಮು.ವೆಂಕಟೇಶ್ ಆರೋಹಣ ನಡೆಸಿದರು. ಅದ್ಧೂರಿ ಅರ್ಥಪೂರ್ಣ ಮೆರವಣಿಗೆಗೆ ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು. ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆಯ ನಂತರ ಪಿ.ಲಂಕೇಶ್ ಅವರ ದ್ವಾರದ ಮೂಲಕ ಹಾದು ವೇದಿಕೆ ಕಾರ್ಯಕ್ರಮ ತಲುಪಿತು. ಕಾರ್ಯಕ್ರಮದ ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಎನ್.ವಿ.ಮುರಳೀಧರ, ಆರ್ ಪ್ರಭಾಕರ್, ತಾಪಂ ಇಒ ವಿ.ಕೃಷ್ಣಪ್ಪ, ಪುರಸಭಾ ಮುಖ್ಯಾಧಿಕಾರಿ ನಜೀರ್‌ಸಾಬ್, ಬಿಇಒ ಕೃಷ್ಣಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ ತಾಪಂ ಉಪಾಧ್ಯಕ್ಷೆ ನಾಗವೇಣಿ ಚಂದ್ರು, ಪುರಸಭಾ ಸದಸ್ಯರಾದ ಪರಮೇಶ್, ಭಾರತಿ ಶಂಕರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ನರಸಿಂಹ ಮತ್ತಿತರರು ಇದ್ದರು. ಪಟ್ಟಣದ ಹೆಸರಾಂತ ಗಾಯಕರಾದ ಗುಲ್ಜಾರ್, ಸಿ.ಆರ್.ನಟರಾಜ್, ಪ್ರಸನ್ನ ವೆಂಕಟೇಶ್, ಶೀಲಾಸೋಮಶೇಖರ್, ಜ.ಮು. ಚಂದ್ರ ನಾಡಗೀತೆ, ರೈತಗೀತೆ ಪ್ರಸ್ತುತ ಪಡಿಸಿದರು
ಇದನ್ನೂ ಓದಿ:ಬೆಳಗಾವಿ ನಮ್ಮದೆಂದ ಮಹಾ ಸಿಎಂ ವಿರುದ್ಧ ಧರಣಿ
ಸಮ್ಮೇಳನಕ್ಕೆ ಪಿಚ್ಚಳ್ಳಿಯ ಗಾಯನ ಮೆರುಗು
ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಒಡನಾಡಿಯಾಗಿ ಸಾರಂಗ ರಂಗದ ರೂವಾರಿಗಳಲ್ಲಿ ಒಬ್ಬರಾಗಿರುವ ಸಿ.ಲಕ್ಷ್ಮೀನಾರಾಯಣ್ ಅವರ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ನಾಡಿನ ಖ್ಯಾತ ಜಾನಪದ ಗಾಯಕ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್ ಸಂತ ಪರಂಪರೆಯ ಖ್ಯಾತಿಯ ಕೈವಾರ ತಾತಯ್ಯನವರು ರಚಿಸಿ ಡಾ.ಕೆ. ವೈ.ನಾರಾಯಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿರುವ ಏನಮ್ಮ ಗಂಗಾಭವಾನಿ ಎಂಬ ಗೀತೆಯನ್ನು ಹಾಡಿ ಸಭಿಕರ ಮನದಲ್ಲಿ ಸಾಹಿತ್ಯದ ಪರಂಪರೆ ಬಿತ್ತಿದರು.
ಎಂ.ರವಿಕುಮಾರ್