Advertisement
ಫೆ. 21 ರಂದು ವಡಾಲ ಶ್ರೀ ರಾಮಮಂದಿರದಲ್ಲಿ ಕನ್ನಡ ಕಲಾಕೇಂದ್ರ ಮುಂಬಯಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ, ಗೋಕರ್ಣ ಪರ್ಥಗಾಳಿ ಜೀವೋತ್ತಮ ಮಠ ವಡಾಲ ಇವರ ಪ್ರಾಯೋಜಕತ್ವದಲ್ಲಿ ನಡೆದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರ 11 ನೇ ಯಕ್ಷೋತ್ಸವ-2019 ಕ್ಕೆ ಚಾಲನೆ ನೀಡಿ ಮಾತನಾಡಿದ ಇವರು, ಯಕ್ಷಗಾನವು ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವುದಲ್ಲದೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾ ಬಂದಿದೆ. ಇಂದಿನ ಕಾಲಘಟ್ಟದಲ್ಲಿ ಯುವಜನತೆ ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾನು ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ಭವಿಷ್ಯದಲ್ಲೂ ನನ್ನ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಂಕಣಿ ರಂಗಕರ್ಮಿ, ವಡಾಲ ಶ್ರೀರಾಮ ಮಂದಿರ ಮಠದ ವಕ್ತಾರ ಕಮಲಾಕ್ಷ ಸರಾಫ್ ಇವರು, ವಡಾಲ ಶ್ರೀ ರಾಮ ಮಂದಿರವು ಯಕ್ಷಗಾನ ಕಲೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ಭವಿಷ್ಯದಲ್ಲೂ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ನಮ್ಮ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ನುಡಿದರು.
Related Articles
Advertisement
ಈ ಸಂದರ್ಭದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಕಲಾವಿದರುಗಳಿಂದ ಸೀತಾಪಹರಣ ಯಕ್ಷಗಾನ ಪ್ರದರ್ಶನ ಗೊಂಡಿತು. ಶಿವಾನಂದ ಹೆಗಡೆ ಇವರ ನಿರ್ದೇಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವತ ರಾಗಿ ದಂತಳಿಕೆ ಅನಂತ ಹೆಗಡೆ, ಮದ್ದಳೆಯಲ್ಲಿ ಮೂರುರು ನರಸಿಂಹ ಹೆಗಡೆ, ಚೆಂಡೆಯಲ್ಲಿ ಕೃಷ್ಣಯಾಜಿ ಇಡಗುಂಜಿ, ಕಲಾವಿದರುಗಳಾಗಿ ಶ್ರೀಪಾದ ಹೆಗಡೆ ಹಡಿನಬಾಳ, ಕೆರೆಮನೆ ಶಿವಾನಂದ ಹೆಗಡೆ, ಶಿರಳಗಿ ತಿಮ್ಮಪ್ಪ ಹೆಗಡೆ, ಈಶ್ವರ್ ಭಟ್ ಹೊಸಳ್ಳಿ, ಚಂದ್ರಶೇಖರ್ ಎಸ್., ಕೆರೆಮನೆ ಶ್ರೀಧರ ಹೆಗಡೆ, ವಿನಾಯಕ ನಾಯ್ಕ ಅವರು ಭಾಗವಹಿಸಿದ್ದರು. ಸ್ತಿÅàಪಾತ್ರದಲ್ಲಿ ಸದಾಶಿವ ಭಟ್ ಯಲ್ಲಾಪುರ, ಗಣಪತಿ ಕುಣಬಿ, ನಕುಲ್ ಗೌಡ, ಹಾಸ್ಯದಲ್ಲಿ ಸೀತಾರಾ ಮ ಹೆಗಡೆ ಮುಡಾಕಿ ಇವರು ಪಾಲ್ಗೊಂಡಿದ್ದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹರಿಸಿದರು.
ಯಕ್ಷಗಾನವು ನಮ್ಮ ಶ್ರೀಮಂತ ಕಲೆಯಾ ಞಗಿದ್ದು, ಯಕ್ಷಗಾನ ಅಕಾಡೆಮಿ ಯನ್ನು ಸ್ಥಾಪಿಸುವುದರ ಮೂಲಕ ಯಕ್ಷಗಾನಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಯಕ್ಷಗಾನವು ಕೇವಲ ಜಾನಪದ ಕಲೆಯಲ್ಲ, ಇದರಲ್ಲಿ ಅನೇಕ ವಿಶೇಷತೆಗಳಿದ್ದು, ಧಾರ್ಮಿಕ ಚಿಂತನೆಯನ್ನು ಮೂಡಿಸಲು ಯಕ್ಷಗಾನ ಸಹಕಾರಿಯಾ ಗುತ್ತಿದೆ. ಮುಂಬಯಿಯಲ್ಲಿ ಯಕ್ಷೋತ್ಸವದ ಮೂಲಕ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ನಿಮ್ಮೆಲ್ಲರ ಕಲಾಭಿಮಾನ ಅಭಿನಂದನೀಯ.– ಡಾ| ಸುನೀತಾ ಎಂ. ಶೆಟ್ಟಿ ,ಹಿರಿಯ ಸಾಹಿತಿ ಚಿತ್ರ-ವರದಿ : ಸುಭಾಷ್ ಶಿರಿಯಾ