Advertisement
ಆಗಿನ ಬರಹದ ವ್ಯಾಕರಣ – ಪದ ಬಳಕೆಯ ಶೈಲಿಯಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಸುಮಾರು 8 ತಿಂಗಳ ಕಾಲ ಸತತವಾಗಿ ಪ್ರಕಟವಾಯಿತು. ಮೂಲತಃ ಜರ್ಮನಿಯವರಾದರೆ| ಮೋಗ್ಲಿಂಗ್ ಅವರು 1836ರಲ್ಲಿ ಮಂಗಳೂರಿಗೆ ಬಂದರು. ಕನ್ನಡ ಭಾಷೆಯನ್ನು ಕಲಿತು, 1843ರಲ್ಲಿ ಮೊದಲ ಸಂಚಿಕೆ ಪ್ರಕಟಿಸಿದರು.
Related Articles
Advertisement
ಮಂಗಳೂರು ಆಕಾಶವಾಣಿ ಕೇಂದ್ರ, ದೂರದರ್ಶನ ಮರುಪ್ರಸಾರ ಕೇಂದ್ರ… ಹೀಗೆ 24×7 ಎಂಬಂತೆ ಸುದ್ದಿ, ಮಾಹಿತಿ, ಮನೋರಂಜನೆ.
ಉದ್ಯೋಗಾವಕಾಶಈ 180 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ಹಲವು ಸಾಧ್ಯತೆಗಳಿಗೆ ತನ್ನನ್ನು ತಾನು ತೆರೆದು ಕೊಂಡಿದೆ. ಕನ್ನಡ, ಆಂಗ್ಲ ಭಾಷೆಗಳ ಹೆಚ್ಚಿನ ಎಲ್ಲ ರಾಜ್ಯ- ರಾಷ್ಟ್ರೀಯ ಪತ್ರಿಕೆಗಳು ಮಂಗಳೂರಿನಲ್ಲಿ ಮುದ್ರಣವಾಗುತ್ತಿವೆ ಎಂಬುದು ಈ ಸಂದರ್ಭದಲ್ಲಿ ಉಲ್ಲೇಖನೀಯ. ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಸಹಿತ ಪತ್ರಿಕೋದ್ಯಮ ಈಗ ಅಪಾರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದೆ. ವಿ.ವಿ. ಹಾಗೂ ಕೆಲವು ಕಾಲೇಜುಗಳಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದ ಪದವಿ, ಸ್ನಾತಕೋತ್ತರ, ಪಿಎಚ್.ಡಿ. ಅವಕಾಶಗಳಿವೆ. ಮಂಗಳೂರು ದರ್ಶನದಿಂದ ಉಲ್ಲೇಖೀತ ಭಾಗವಿದು
ಆ ಕಾಲದಲ್ಲಿ ಅಂದರೆ- ಸುಮಾರು ಒಂದೂವರೆ ಶತಮಾನಗಳ ಹಿಂದೆ, ಸಂಪರ್ಕ ಸಾಧನಗಳು ಏನೇನೂ ಇಲ್ಲದಿದ್ದಾಗ ಮೋಗ್ಲಿಂಗ್ ತನ್ನ ಪತ್ರಿಕೆಗಳಲ್ಲಿ ಸ್ಥಳೀಯ ವಾರ್ತೆಗಳ ಜತೆಗೆ ದೇಶ ವಿದೇಶಗಳ ವಾರ್ತೆಯನ್ನು ಪ್ರಕಟಿಸು ತ್ತಿದ್ದರೆಂಬುದು ಅವರ ವಾರ್ತಾಪ್ರಜ್ಞೆಗೆ ಸಾಕ್ಷಿಯಾಗಿದೆ. ಕಂನಡ ಸಮಾಚಾರ ಆಯಿತು! ಮಂಗಳೂರು ಸಮಾಚಾರ ಪತ್ರಿಕೆ 8 ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ವೂರ ವರ್ತಮಾನಗಳು, ಸರಕಾರಿ ನಿರೂಪಗಳು/ ಕಾನೂನು, ಸುಬುದ್ಧಿಯನ್ನು ಹೇಳುವ ಸಾಮತಿಗಳು, ಹಾಡುಗಳು, ಕತೆಗಳು, ಸರ್ವರಾಜ್ಯ ವರ್ತಮಾನಗಳು, ವಾಚಕರ ವಾಣಿಗಳು ಅಂಕಣ ಗಳಾಗಿದ್ದವೆಂದು ಮಂಗಳೂರು ದರ್ಶನ ದಾಖಲಿಸಿದೆ. ಬಳಿಕ ಈ ಪತ್ರಿಕೆಯ ಹೆಸರನ್ನು ಕಂನಡ ಸಮಾಚಾರ ಎಂದು ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಲು ಆರಂಭಿಸಿದರು. ಪತ್ರಿಕೆಯ ಸಂಪಾದಕ ರೆ| ಮೋಗ್ಲಿಂಗ್ (1811-1881) ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ. ಕನ್ನಡ ಮಾತನಾಡುವ ಎಲ್ಲ ಜನರಲ್ಲೂ ಇದು ಪ್ರಸಾರಕ್ಕೆ ಬರಲಿ ಎಂಬ ಆಶಯದಿಂದ ಹೀಗೆ ಮಾಡಿದ್ದೇವೆ. ಇದರ ಮೊದಲ ಸಂಚಿಕೆ 1-3- 1844ರಂದು ಪ್ರಕಟವಾಯಿತು. ಪುಟ ಸಂಖ್ಯೆ 4ರಿಂದ 8ಕ್ಕೆ ಏರಿತು. ಬೆಲೆಯು ಹಿಂದಿನ ಒಂದು ದುಡ್ಡು (ಹಿಂದಿನ ಎರಡು ಕಾಸು) ಇದ್ದದ್ದು ಎರಡು ದುಡ್ಡಿಗೆ ಏರಿತು. ಈ ಪತ್ರಿಕೆ ದೀರ್ಘಾಯುವಾಗಲಿಲ್ಲ. ಆದರೆ ಕನ್ನಡ ಪತ್ರಿಕೋ ದ್ಯಮ ಮಾತ್ರ ದಿನದಿಂದ ದಿನಕ್ಕೆ ಉತ್ತುಂಗಕ್ಕೆ ಏರಿತು! ಅಂದಹಾಗೆ..
180 ವರ್ಷಗಳ ಹಿಂದೆ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರದಲ್ಲಿ ಸಂಪಾದಕ ಮೋಗ್ಲಿಂಗ್ ಅವರು ಪತ್ರಿಕೆಯ ಆಶಯವನ್ನು ಹೀಗೆ ವಿವರಿಸಿದ್ದಾರೆ. ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ಉಳಕೊಳ್ಳುವವರ ಹಾಗೆಯಿರುತ್ತಾ ಬಂದರು. ಅದು ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕೂ ದಿಕ್ಕಿಗೆ ಕಿಟಿಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷವೊಂದು ಸಾರಿ ಶಿದ್ದ ಮಾಡಿ ಅದನ್ನು ಓದಬೇಕೆಂದಿರುವೆಲ್ಲರಿಗೆ ಕೊಟ್ಟರೆ ಕಿಟಿಕಿಗಳನ್ನು ನೋಡಿದ ಹಾಗಿರುವುದು. ಮನೋಹರ ಪ್ರಸಾದ್