Advertisement
“ಒನ್ ನೇಶನ್ ಒನ್ ರೇಶನ್ ಕಾರ್ಡ್’ಆ್ಯಪ್‌ನಲ್ಲಿ ಮೊದಲು ಇಂಗ್ಲಿಷ್ ಹಾಗೂ ಹಿಂದಿಎರಡೇ ಭಾಷೆಗಳನ್ನು ಅಳವಡಿಸಲಾಗಿತ್ತು.ಆ್ಯಂಡ್ರಾಯ್ಡ ಮೊಬೈಲ್ ಬಳಕೆ ಗೊತ್ತಿದ್ದುಇಂಗ್ಲಿಷ್ ಅಥವಾ ಹಿಂದಿ ಭಾಷೆ ಓದಲುಬಾರದೇ ಇರುವವರಿಗೆ ಈ ಆ್ಯಪ್ ಬಳಕೆಕಷ್ಟವಾಗಿತ್ತು. ಈಗ ಕನ್ನಡ ಭಾಷೆ ಅಳವಡಿಸಿರುವುದರಿಂದ ಸಾಮಾನ್ಯ ಕನ್ನಡ ಓದಲುಬರುವವರೂ ಸಹ ಆ್ಯಪ್ ಪ್ರಯೋಜನಪಡೆದುಕೊಳ್ಳಬಹುದಾಗಿದೆ.
Related Articles
Advertisement
ತಪ್ಪು ತಿಳಿವಳಿಕೆ ಬೇಡ: ಕೇವಲ ಆಧಾರ್‌ನಂಬರ್ ಇದ್ದರೆ ಸಾಕು ಒನ್ ನೇಶನ್ ಒನ್‌ರೇಶನ್ ಕಾರ್ಡ್’ ಆ್ಯಪ್‌ನಲ್ಲಿಯೇ ಲಿಂಕ್‌ಆಗಿರುವ ರೇಶನ್ ಕಾರ್ಡ್ ನಂಬರ್, ಪಡಿತರವ್ಯವಹಾರ ಮಾಹಿತಿ, ಪಡಿತರ ಲಭ್ಯತೆ ಹಾಗೂಜಿಪಿಎಸ್ ಮೂಲಕ ಹತ್ತಿರದ ಪಡಿತರಅಂಗಡಿಗಳ ಮಾಹಿತಿಯೂ ಲಭ್ಯವಾಗಲಿದೆ.ಕೆಲ ವಲಸಿಗರು ವಲಸೆ ಬಂದ ಸ್ಥಳದಲ್ಲಿ ಪಡಿತರಪಡೆದರೆ ಮೂಲ ಸ್ಥಳದಲ್ಲಿನ ರೇಶನ್ ಕಾರ್ಡ್‌ರದ್ದಾಗಬಹುದು ಎಂಬ ತಪ್ಪು ತಿಳಿವಳಿಕೆಯಿಂದಪಡಿತರ ಪಡೆಯಲು ಹಿಂದೇಟುಹಾಕುತ್ತಿದ್ದಾರೆ. ಇನ್ನು ಕೆಲವರು ತಾವುನೆಲೆಯೂರಿದ ಸ್ಥಳದ ಹತ್ತಿರದ ಪಡಿತರಅಂಗಡಿ ಎಲ್ಲಿದೆ ಎಂಬುದನ್ನು ತಿಳಿಯಲುಅಲೆದಾಡುತ್ತಾರೆ. ವಲಸೆ ಬರುವಾಗ ಪಡಿತರಚೀಟಿ ಬಿಟ್ಟು ಬಂದು ಪರದಾಡುತ್ತಾರೆ.
ಇಂಥಎಲ್ಲ ಸಮಸ್ಯೆಗಳಿಗೆ ಅಂಗೈಯಲ್ಲೇ ಈ ಆ್ಯಪ್‌ಮೂಲಕ ಈಗ ಕನ್ನಡದಲ್ಲೇ ಪರಿಹಾರ ಕಂಡುಕೊಳ್ಳಬಹುದಾಗಿದೆ.ಆ್ಯಪ್ ಜಾಗೃತಿ: ವಲಸಿಗರಿಗೆ ಹೆಚ್ಚುಉಪಯುಕ್ತವಾಗಿರುವ ಒನ್ ನೇಶನ್ ಒನ್‌ರೇಶನ್ ಕಾರ್ಡ್’ ಆ್ಯಪ್‌ನಲ್ಲಿ ಕನ್ನಡ ಭಾಷೆಅಳವಡಿಸಿದ್ದರಿಂದ ಇತೀ¤ಚೆಗೆ ಈ ಆ್ಯಪ್ ಹೆಚ್ಚುಜನರನ್ನು ಆಕರ್ಷಿಸಿದೆ. ಆಹಾರ ಇಲಾಖೆ ಸಹನ್ಯಾಯಬೆಲೆ ಅಂಗಡಿ, ಜಾಹೀರಾತು ಫಲಕಗಳಮೂಲಕ ಆ್ಯಪ್ ಬಗ್ಗೆ ಹೆಚ್ಚು ಪ್ರಚಾರಮಾಡುತ್ತಿದೆ. ಕೇವಲ ಪಡಿತರ ಪಡೆಯಲುಅನುಕೂಲವಾಗಲೆಂದು ಈ ಆ್ಯಪ್‌ರೂಪಿಸಲಾಗಿದ್ದು, ಎಲ್ಲಿಯೇ ಪಡಿತರತೆಗೆದುಕೊಂಡರೂ ಮೂಲ ಸ್ಥಳದಲ್ಲಿ ಪಡಿತರಚೀಟಿ ರದ್ದಾಗುವುದಿಲ್ಲ ಎಂಬ ಬಗ್ಗೆಯೂಇಲಾಖೆ ತಿಳಿವಳಿಕೆ ನೀಡುತ್ತಿದೆ.
ಎಚ್.ಕೆ. ನಟರಾಜ