ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಮಾಡಬೇಕೆಂಬ ಹಂಬಲದಿಂದ 2019ರಲ್ಲಿ ಬೆಂಗಳೂರನ್ನು ಬಿಟ್ಟು ಜರ್ಮನಿಯನ್ನು ನೆಲೆಯಾಗಿಸಿಕೊಂಡೆ. ಈಗ ಡಿಜಿಟಲ್ ಮಾರ್ಕೆಂಟಿಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಊರು ಸುತ್ತೋದು, ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುವುದು ಬಹಳ ಇಷ್ಟ. ಅದರಲ್ಲೂ ಬೈಕ್ ಮೂಲಕವೇ ಸವಾರಿ ಹೋಗುತ್ತಿದೆ. ಕರ್ನಾಟಕದಲ್ಲಿದ್ದ ಈ ಚಾಳಿ, ಜರ್ಮನಿಗೆ ಬಂದ ಮೇಲೂ ಮುಂದುವರೆದಿದೆ. ಊರುಗಳನ್ನು ಸುತ್ತಿ ವೀಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಾಕುತ್ತೇನೆ.
ಜರ್ಮನಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ತುಂಬಾ ಕಷ್ಟ. ಯಾಕೆಂದರೆ ಅದರ ಮಹತ್ವ ಇಡೀ ವಿಶ್ವದಲ್ಲೇ ಬಹಳ ಹೆಚ್ಚು. ಎರಡು ವರ್ಷಗಳ ಹಿಂದೆ ನಾನು ಜರ್ಮನ್ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡೆ. ಬೈಕ್‌ನಲ್ಲಿ ಪ್ರಯಾಣ ಮಾಡುವ ಹುಚ್ಚು ನನಗೆ ಚಿಕ್ಕಮಗಳೂರು ಇಂದ ಶುರುಗೊಂಡು ಈಗ ಜರ್ಮನಿ, ಆಸ್ಟ್ರಿಯಾ, ಇಟಲಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲೂ ಮುಂದುವರೆದಿದೆ.
ಇಲ್ಲಿನ ಸುಂದರವಾದ ಆಲ್ಪ್ ಸ್ ಸರೋವರ ಹಾಗೂ ಬೆಟ್ಟಗಳ ನಡುವಿನ ರಸ್ತೆಯಲ್ಲಿ ಬೈಕ್ ಓಡಿಸಲು ಸಿದ್ಧತೆ ನಡೆಸಿ ಪಯಣ ಆರಂಭಿಸಿದೆವು. ಈ ಪಯಣದಲ್ಲಿ ನನ್ನ ಜತೆಯಾಗಿದ್ದು ಪತ್ನಿ ಯಶಸ್ರೀ. 9 ಮೌಂಟಿಯನ್ ಪಾಸ್‌ಗಳಲ್ಲಿ ಬೈಕ್ ಓಡಿಸಿ ಪ್ರತೀ ಒಂದು ಪಾಸ್‌ನಲ್ಲಿ ನಾವು ಕರ್ನಾಟಕ ಬಾವುಟವನ್ನು ಹಾರಿಸಿದ್ದೇವೆ. ಜತೆಗೆ ಆಸ್ಟ್ರಿಯಾ, ಇಟಲಿ ಮತ್ತು ಸ್ವಿಟ್ಜರ್‌ಲ್ಯಾಂಡ್
ಈ 3 ದೇಶದ ಪರ್ವತ ಶ್ರೇಣಿಗಳ ಸಾಲಿನಲ್ಲಿ ಹಾರಿಸಿದ್ದೀವಿ.
ಇದನ್ನೂ ಓದಿ:Desi Swara: ಆಗಸ್ಟ್ 30-ಸೆ.1: 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ
ಆಗ್ಸ್‌ಬರ್ಗ್‌ನಿಂದ ಹೊರಟು ಆಸ್ಟ್ರಿಯಾದ ಪರ್ವತ ಶ್ರೇಣಿ ಮತ್ತು ಟಿಮೇಜೋಚ್ ಮತ್ತು ಆಸ್ಟ್ರಿಯಾ – ಇಟಲಿ ಗಡಿಯಲ್ಲಿ ಇರುವ ಸ್ಟೇಲ್‌ವಿಯೋ ಕಣಿವೆಯಲ್ಲಿ ಬೈಕ್ ಓಡಿಸೊಕ್ಕೆ ಪುಣ್ಯ ಮಾಡಿದ್ದೆ ಅನಿಸಿತ್ತು. ಹಾಗೆ ಎರಡನೇ ದಿನ ಇಟಲಿ-ಸ್ವಿಟ್ಜರ್‌ಲ್ಯಾಂಡ್ ಗಡಿಯಲ್ಲಿ ಇರುವ ಅಂಬ್ರೈಲ್ ಕಣಿವೆ ದಾಟಿ ಫ್ರೌನ್ ಕಣಿವೆಯಲ್ಲಿ ಓಡಿಸಿ ಅನಂತರ ಸ್ಪ್ಲುಗೆನ್ ಕಣಿವೆ ದಾಟಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಒಂದು ಬೆಟ್ಟದ ಮೇಲೆ ತಂಗಿದೆವು. ಅಲ್ಲಿ ಕರ್ನಾಟಕ ಬಾವುಟದ ಜತೆ ನಿಂತು ಇಬ್ಬರು ಒಂದು ಫೋಟೋ ತೆಗೆದುಕೊಂಡೆವು.
ಮುಂದಿನ ಪರ್ವತ ಕಣಿವೆ ಮತ್ತು ಸ್ಯಾನ್ ಬರ್ನಾಡಿನೊ ಕಡೆ ಹೊರಟ್ವಿ. ಅದರ ಅನಂತರ ಗೊತ್ತಾರ್ಡ್ ಕಣಿವೆ ಮತ್ತು ಜೇಮ್ಸ್ ಬಾಂಡ್ ಮತ್ತು ಗೋಲ್ಡ್ ಸಿನೆಮಾದಲ್ಲಿ ಹೆಸರುವಾಸಿ ಆದ ಫುರ್ಕಾ ಕಣಿವೆಯಲ್ಲಿ ಸಮಯ ಕಳೆದು ಅನಂತರ ಗ್ರಿಂಸೆಲ್ ಕಣಿವೆಯಲ್ಲಿ ಓಡಿಸಿ 9 ಪರ್ವತ ಕಣಿವೆಗಳ ನಮ್ಮ ಪ್ರಯಾಣವನ್ನ ಮುಕ್ತಾಯ ಮಾಡಿದೆವು. ಇಂಟರ್ ಲೇಕೆನ್ ನಗರಕ್ಕೆ ಹೋಗಿ ಉಳಿದುಕೊಂಡು ಮತ್ತೆ ಮಾರನೇ ಆಗ್ಸ್‌ಬರ್ಗ್‌ನ ಕಡೆಗೆ ಹಿಂತಿರುವ ಪ್ರಯಾಣ ಮಾಡಿದ್ವಿ. ಒಟ್ಟು ಸೇರಿ 1,200 ಕಿ.ಮೀ. ರೈಡ್ ಮಾಡಿ ಒಳ್ಳೆ ನೆನಪುಗಳ ಜತೆಗೆ ಆಗ್ಸ್‌ಬರ್ಗ್‌ನಗೆ ಬಂದ್ವಿ.
ಕನ್ನಡ ಮತ್ತು ಕರ್ನಾಟಕದ ಮೇಲೆ ಇರುವ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿ ನಮಗೆ ತುಂಬಾ ಹೆಮ್ಮೆ ಇದೆ. ಜರ್ಮನಿ ಅಲ್ಲಿ ಇದ್ದರೂ ಕೂಡ ಪ್ರತೀ ಒಂದು ಕನ್ನಡ ಚಲನಚಿತ್ರ ವೀಕ್ಷಿಸುತ್ತೀವೆ. ಕೆಜಿಎಫ್ 2 ನ 3 ಸಲಿ ಇಲ್ಲಿನ ಚಿತ್ರ ಮಂದಿರದಲ್ಲಿ ತೆರೆಕಂಡಾಗ ಹೋಗಿ ವೀಕ್ಷಿಸಿದೀನಿ. ಹೀಗೆ ಮುನಿಚ್, ಜರ್ಮನಿಯಲ್ಲಿ ಇರುವ ಕನ್ನಡ ಸಂಘಟನೆಗಳಲ್ಲಿ ಭಾಗಿ ಆಗಿ ಕನ್ನಡ ಮತ್ತು ಕರ್ನಾಟಕದ ಪ್ರೀತಿ ಬೆಳೆಸಿಕೊಂಡು ಹೋಗುತ್ತಿದೀನಿ.
*ಭರತ್ ರವಿಶಂಕರ್, ಜರ್ಮನಿ