Advertisement
ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಸರ್ಕಾರ ಶರತ್ತುಬದ್ಧ ಅನುಮತಿ ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಹೊಸಚಿತ್ರಗಳುಬಿಡುಗಡೆಯಾಗಿರಲಿಲ್ಲ. ಈಗಾಗಲೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಚಿತ್ರಗಳನ್ನೇ ಬಹುತೇಕ
Related Articles
Advertisement
ಕಳೆಗಟ್ಟಿದ ಚಿತ್ರಮಂದಿರಗಳು ಹೊಸ ನಿರೀಕ್ಷೆಯಲ್ಲಿ ಪ್ರೇಕ್ಷಕರು ಪ್ರಬಿಕ್ ಮೊಗವೀರ್ ನಿರ್ದೇಶನದ “ಗಡಿಯಾರ’, ಅರವಿಂದ್ ಕಾಮತ್ ನಿರ್ದೇಶನದ “ಅರಿಷಡ್ವರ್ಗ’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈ ವಾರಾಂತ್ಯದಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಈ ಪಟ್ಟಿಗೆ ಇನ್ನೂ ಎರಡು – ಮೂರು ಹೊಸ ಚಿತ್ರಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಉಳಿದಂತೆಡಿಸೆಂಬರ್ ಮೊದಲ ವಾರ ಮೂರು, ಎರಡನೇ ವಾರ ಎರಡು ಹೊಸಬರ ಚಿತ್ರಗಳು ಬಿಡುಗಡೆಗೆ ಪ್ಲಾನ್‌ಮಾಡಿಕೊಳ್ಳುತ್ತಿವೆ. ಈ ಸಂಖ್ಯೆಯಲ್ಲಿ ಸ್ವಲ್ಪ ಏರಿಳಿತವಾದರೂ, ಒಂದಷ್ಟು ಚಿತ್ರಗಳು ಬಿಡುಗಡೆಯಾಗುವುದಂತೂ ಬಹುತೇಕ ಪಕ್ಕಾ ಆಗಿದಂತಿದೆ.
ಇನ್ನು ಗಾಂಧಿನಗರ ಸೇರಿದಂತೆ, ಬೆಂಗಳೂರಿನ ಮತ್ತು ರಾಜ್ಯದ ಇತರ ಜಿಲ್ಲಾಕೇಂದ್ರಗಳಲ್ಲಿರುವ ಬಹುತೇಕ ಪ್ರಮುಖ ಚಿತ್ರಗಳಲ್ಲಿಕಳೆದ ಎರಡು-ಮೂರು ವಾರಗಳಿಂದ ಸ್ವಚ್ಛತೆ, ಸೀಟ್ ವ್ಯವಸ್ಥೆ, ಲೈಟಿಂಗ್, ಪೇಂಟಿಂಗ್, ಸ್ಯಾನಿಟೈಸೇಷನ್ ಸೇರಿದಂತೆ ಒಂದಷ್ಟು ದುರಸ್ಥಿಕೆಲಸಗಳನ್ನು ಭರದಿಂದ ನಡೆಸುತ್ತಿದ್ದು, ಈ ವಾರದಿಂದ ಬಹುತೇಕ ಚಿತ್ರಮಂದಿರಗಳು ಪ್ರೇಕ್ಷಕರಿಗೆ ಪ್ರದರ್ಶನ ಮುಕ್ತವಾಗಲಿವೆ. ರಾಜ್ಯದ ಪ್ರಮುಖ ಚಿತ್ರಮಂದಿರಗಳ ಮುಂದೆ ಮುಂಬರಲಿರುವ ಸಿನಿಮಾಗಳಕಟೌಟ್, ಬ್ಯಾನರ್, ಪೋಸ್ಟರ್‌ಗಳು ಒಂದೊಂದಾಗಿ ರಾರಾಜಿಸುತ್ತಿದ್ದು, ನಿಧಾನವಾಗಿ ಚಿತ್ರಮಂದಿರಗಳ ಮುಂದೆ ರಂಗೇರುತ್ತಿವೆ.ಈಗಾಗಲೇ ಬಿಡುಗಡೆ ಘೋಷಿಸಿರುವಕೆಲ ಹೊಸ ಸಿನಿಮಾಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಕೂಡ ಶುರುವಾಗಿದ್ದು, ನಿಧಾನವಾಗಿ ಪ್ರೇಕ್ಷಕರು ಆನ್‌ಲೈನ್‌ಮೂಲಕ ಟಿಕೆಟ್ ಖರೀದಿಗೆ ಮುಂದಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಆನ್‌ಲೈನ್ ಟಿಕೆಟ್ ಮಾರಾಟ ಕೂಡ ಗಣನೀಯವಾಗಿ ಏರಿಕೆ ಕಾಣುತ್ತಿರುವುದರಿಂದ, ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಕೂಡಕೊಂಚ ಮಟ್ಟಿಗೆ ನಿರಾಳರಾಗುತ್ತಿದ್ದಾರೆ.
ಧೈರ್ಯ ಮಾಡಿ ನೀರಿಗೆ ಇಳಿದಿದ್ದೀವಿ. ಯಾರಾದರೂ ಒಬ್ಬರು ಧೈರ್ಯ ಮಾಡಿ ಬಂದಾಗ ಎಲ್ಲರಿಗೂ ಒಂದು ದಾರಿ ಆಗುತ್ತದೆ. ನಮಗೆಸಿಗುವ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಸಿನಿಮಾದವರು ಮುಂದೆ ಬರುತ್ತಾರೆ. ಹೇಗಿದ್ದರೂ ಚಿತ್ರರಂಗ ರಿಕವರಿ ಆಗಲೇಬೇಕು. ಬೇಗನೇ ಆಗಲಿ ಎಂಬುದು ನಮ್ಮ ಆಶಯ. ಆರಂಭದಿಂದಲೂ ನಮಗೆ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ರಿಲೀಸ್ ಮಾಡಬೇಕೆಂಬ ಆಸೆ ಇತ್ತು.–ದೇವರಾಜ್ ಆರ್. ನಿರ್ಮಾಪಕರು, ಆ್ಯಕ್ಟ್ 1978
ಎಂಟು ತಿಂಗಳ ನಂತರ ದಕ್ಷಿಣ ಭಾರತದಲ್ಲೇ ಹೊಸ ಸಿನಿಮಾವಾಗಿ ನಮ್ಮ “ಆಕ್ಟ್ 1978′ ರಿಲೀಸ್ ಆಗುತ್ತಿದೆ. ಹೊಸ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು. ನಿಮ್ಮಿಂದಲೇ ನಾವು. ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಿನಿಮಾ ನೋಡಿ ಪ್ರೋತ್ಸಾಹಿಸಿ. –ಶಿವರಾಜ್‌ಕುಮಾರ್, ನಟ
ಸಿನಿಪ್ರಿಯರು ಏನಂತಾರೆ? :
ಏಳೆಂಟು ತಿಂಗಳಿನಿಂದ ಥಿಯೇಟರ್ ನಲ್ಲಿಯಾವುದೇ ಸಿನಿಮಾಗಳನ್ನೂ ನೋಡಲಾಗಲಿಲ್ಲ. ಈ ವಾರ ರಿಲೀಸ್ ಆಗುವ ಸಿನಿಮಾವನ್ನುಖಂಡಿತ ನೋಡುತ್ತೇನೆ. –ರಂಗನಾಥ್, ಆಟೋರಿಕ್ಷಾ ಚಾಲಕ
ಈಗ ಹೊಸ ಸಿನಿಮಾಗಳ ಬಿಡುಗಡೆ ಆರಂಭವಾಗಿದೆ. ಹೊಸ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಮತ್ತೆ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. –ಪ್ರಜ್ವಲ್ ಗೌಡ, ಹೋಟೆಲ್ ನೌಕರ ಗಾಂಧಿನಗರ
ಮೊದಲಿನಿಂದಲೂ ನಮಗೆ ಇಡೀಫ್ಯಾಮಿಲಿ ಜೊತೆ ಸಿನಿಮಾ ನೋಡಿ ಅಭ್ಯಾಸ.ಕೋವಿಡ್ ದಿಂದಾಗಿ ಈ ವರ್ಷ ಫ್ಯಾಮಿಲಿ ಜೊತೆಯಾವ ಸಿನಿಮಾಗಳನ್ನೂ ನೋಡಲಾಗಲಿಲ್ಲ. ಈಗ ಸ್ವಲ್ಪಕೊರೊನಾ ಭಯ ಕಡಿಮೆಯಾಗಿರೋದ್ರಿಂದ, ಒಳ್ಳೆಯ ಸಿನಿಮಾವನ್ನ ನೋಡುವಯೋಚನೆಯಿದೆ. –ರಶ್ಮಿ, ಸಾಫ್ಟ್ವೇರ್ ಉದ್ಯೋಗಿ
ಎಂಟು ತಿಂಗಳ ನಂತರ ತೆರೆಕಾಣುತ್ತಿರುವ ಹೊಸ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಆನಂದಿಸಬೇಕೆಂದಿದ್ದೇನೆ. ನಾವು ಫ್ರೆಂಡ್ಸ್ ಜೊತೆಯಾಗಿ ಹೋಗುತ್ತೇವೆ. –ರಾಜೇಶ್ ಪಿಂಟೋ, ಕಾಲೇಜು ವಿದ್ಯಾರ್ಥಿ
-ಜಿ.ಎಸ್.ಕಾರ್ತಿಕ ಸುಧನ್