Advertisement

ಕಲಾವಿದರ ಮೇಲೆ ಸದ್ಯ ಯಾವುದೇ ಕ್ರಮವಿಲ್ಲ: ಚಲನಚಿತ್ರ ವಾಣಿಜ್ಯ ಮಂಡಳಿ

12:02 PM Sep 07, 2020 | sudhir |

ಬೆಂಗಳೂರು: ಡ್ರಗ್ಸ್‌ ಮಾಫಿಯಾ ಜಾಲದಲ್ಲಿ ನಟಿ ರಾಗಿಣಿ ದ್ವಿವೇದಿ ಸೇರಿ ಕೆಲವು ಕಲಾವಿದರ ಹೆಸರು ಕೇಳಿ ಬರುತ್ತಿದ್ದು, ಸದ್ಯ ಪೊಲೀಸರು ಮತ್ತು ಎನ್‌.ಸಿ.ಬಿ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡು ಅಪರಾಧ ಸಾಬೀತಾಗುವವರೆಗೂ ಯಾವುದೇ ಕಲಾ ವಿದರ ಮೇಲೆ ಕ್ರಮ ಕೈಗೊಳ್ಳು ವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.

Advertisement

ಈ ಕುರಿತು ಮಾತನಾಡಿರುವ ಕರ್ನಾ ಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಈ ಪ್ರಕರಣದ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ರಾಗಿಣಿ ಅಥವಾ ಇತರ ಕಲಾವಿದರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ವಾಣಿಜ್ಯ ಮಂಡಳಿ ಕಾದು ನೋಡುವ ತೀರ್ಮಾನಕ್ಕೆ ಬಂದಿದೆ. ಅಪರಾಧಿ ಎಂದು ತೀರ್ಪು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next