Advertisement

ಕನ್ನಡ ವಿಭಾಗ ಮುಂಬಯಿ ವಿವಿ: 2 ಕೃತಿಗಳ ಬಿಡುಗಡೆ

11:50 AM Dec 18, 2017 | |

ಮುಂಬಯಿ: ಮುಂಬಯಿಗರು ಪಾರದರ್ಶಕ ಭಾಷಾಭಿಮಾನಿಗಳಾಗಿದ್ದಾರೆ. ಇವರಲ್ಲಿನ ಕನ್ನಡ ಭಾಷಾ ಶೈಲಿ, ಅಪಾರವಾದ  ಸಂಸ್ಕೃತಿ  ಪ್ರೇಮ ಕನ್ನಡಿಗರಿಗೆಲ್ಲರಿಗೂ ಮಾದರಿ. ಕನ್ನಡಾಭಿಮಾನವಂತೂ ಮನಸ್ಸು ತಟ್ಟುವಂಥದ್ದು ಎಂದು ಹೆಸರಾಂತ ಸಂಶೋಧಕ, ಹಿರಿಯ ಸಾಹಿತಿ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ನುಡಿದರು.

Advertisement

ಡಿ. 15ರಂದು ಕನ್ನಡ ವಿಭಾಗ ಮುಂಬಯಿ ವಿವಿ ವತಿಯಿಂದ ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪÓನ ವಿದ್ಯಾನಗರಿಯ ಡಬ್ಲೂÂಆರ್‌ಐಸಿ ಸಭಾಗೃಹದಲ್ಲಿಆಯೋಜಿಸಲಾಗಿದ್ದ ಕಾರ್ಯಕ್ರಮ
ದಲ್ಲಿ ಅಭಿಜಿತ ಪ್ರಕಾಶನದ ದುರ್ಗಪ್ಪ ಯು. ಕೋಟಿಯವರ್‌ ಅವರ “ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಅಧ್ಯಕ್ಷ ಪ್ರೊ| ದುಷ್ಯಂತ ನಾಡಗೌಡ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಾಹಿತಿ ಡಾ| ಶ್ಯಾಮಸುಂದರ್‌ ಬಿದರಕುಂದಿ ಅವರು ಪ್ರೊ| ಜಿ. ಸಿ. ಕುಲ್ಕರ್ಣಿ ಅವರ ಕುಮಾರವ್ಯಾಸ ಭಾರತದ ಮರಾಠಿ ಅನುವಾದಿತ ಗ್ರಂಥವನ್ನು ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್‌ ನಿಂಜೂರು ಮತ್ತು ಮುಂಬಯಿ ವಿವಿ ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಉಪಸ್ಥಿತರಿದ್ದರು. ರಮಾ ಉಡುಪ ಅವರು ಕೃತಿ ಪರಿಚಯಿಸಿದರು.   ಮುಂಬಯಿ ಕನ್ನಡ ಸಾಹಿತ್ಯದ ಕೇಂದ್ರಸ್ಥಾನವಿದ್ದಂತೆ. ಮುಂಬಯಿ ವಿವಿ  ಕನ್ನಡ ವಿಭಾಗದ ಪ್ರೋತ್ಸಾಹ ಅನನ್ಯ ಎಂದು ಅಧ್ಯಕ್ಷೀಯ ಭಾಷಣದಲ್ಲಿ ನಾಡಗೌಡ ತಿಳಿಸಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾ ಧ್ಯಾಯ ಅವರು ಪ್ರಸ್ತಾವಿಕ ನುಡಿಗಳನ್ನಾಡಿ “ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ಇದು ನಮ್ಮದು 83ನೇ ಕೃತಿ. ಕೃತಿಕರ್ತ ದುರ್ಗಪ್ಪ ಯು. ಕೋಟಿಯವರ್‌ ಅವರ ಶ್ರಮ ಅನನ್ಯವಾದದ್ದು. ನಮ್ಮಲ್ಲಿನ ಅನೇಕರು ಕೃತಿಗಳನ್ನು ರಚಿಸಿದ ಬಳಿಕ ಸುಮ್ಮಗಿರುತ್ತಾರೆ. ಆದರೆ ಪ್ರೊ| ಕುಲ್ಕರ್ಣಿ ಅವರು ಕೃತಿಗಳನ್ನು ರಚಿಸಿ
ಸಾವಿರ ಕೃತಿ ಮಾಡಿ ಹಂಚಿದ ಕೀರ್ತಿಕಾರ. ಕನ್ನಡದಲ್ಲಿ ಕುಮಾರವ್ಯಾಸನ ಸಾಹಿತ್ಯೋಪಾಸನಗೈದು ವ್ಯಾಸ
ರಿಗೆ ಮರು ಜೀವವನ್ನುನೀಡಿದ್ದಾರೆ. ಇಂಥವರಿರುವ ತನಕ ಮುಂಬಯಿಯಲ್ಲಿ ಕನ್ನಡಕ್ಕೆ ಹಿನ್ನಡೆ ಅಸಾಧ್ಯ. ಕನ್ನಡದ ಅಸ್ಮಿತೆ ಗಟ್ಟಿಗೊಳಿಸುವ ಕೆಲಸ ಕನ್ನಡ ವಿಶ್ವವಿದ್ಯಾಲಯ,ಸರಕಾರ ಮಾಡಬೇಕಾಗಿದೆ ಎಂದರು.

Advertisement

 ಕೃತಿಕಾರ ದುರ್ಗಪ್ಪ ಯು. ಕೋಟಿಯವರ್‌ ಮಾತನಾಡಿ, ಮುಂಬಯಿ ಕನ್ನಡ ವಿಭಾಗದಲ್ಲಿ ಎಂ.ಎಲ್‌ ಮಾಡಬೇಕೆಂಬ ಯೋಚನೆಯೊಂದಿಗೆ  ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯರನ್ನು ಭೇಟಿಯಾದೆ. ಅವರು ನನಗೆ ಎಂ.ಫಿಲ್‌ ಅಧ್ಯಯನಕ್ಕೆಬೇಕಾದ ಎಲ್ಲಾ  ಗ್ರಂಥಗಳನ್ನು ನೀಡಿ, ಮಾರ್ಗ ದರ್ಶನ ನೀಡಿ ಪ್ರೋತ್ಸಾಹಿಸಿದ ಫಲವೇ ಈ ಕೃತಿಯಾಗಿದೆ ಎಂದ‌ರು. ಕಾರ್ಯಕ್ರಮದಲ್ಲಿ ದುರ್ಗಪ್ಪ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.  ಸುರೇಖಾ ಆರ್‌. ನಾಯ್ಕ, ಡಾ| ಜೀವಿ ಕುಲಕರ್ಣಿ, ಲಲಿತಪ್ರಭಾ ಅಂಗಡಿ, ಗಿರಿಜಾ ಶಾಸ್ತ್ರಿ, ನಾರಾಯಣ ರಾವ್‌, ಕುಮುದಾ ಆಳ್ವ, ಗೀತಾ ಮಂಜುನಾಥ್‌, ಪರಸಪ್ಪ ಡಿ. ಹರಿಜನ, ಶಿವರಾಜ್‌ ಎಂ. ಜೆ., ರೇವಣಸಿದ್ಧಿ ಕೌಟಗಿ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ವೈ. ಬಿ. ಮಧುಸೂದನ ರಾವ್‌ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next