Advertisement

ಬಸ್‌ಗಳಲ್ಲಿ ಮಾಯವಾಗಿದೆ ಕನ್ನಡ

10:25 PM Jul 13, 2019 | Team Udayavani |

ನಗರದಿಂದ ಪ್ರತೀ ದಿನ ನೂರಾರು ಬಸ್‌ಗಳು ವಿವಿಧ ಪ್ರದೇಶಗಳಿಗೆ ಸಂಚರಿಸುತ್ತಿದ್ದು ಕೆಲವೊಂದು ಬಸ್‌ಗಳ ನಾಮಫಲಕದಲ್ಲಿ ಕನ್ನಡ ಭಾಷೆ ಮರೆಯಾಗಿದೆ. ಇದರಿಂದಾಗಿ ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಹಳ್ಳಿಗಳಿಂದ ಮಂಗಳೂರಿಗೆ ಬರುವ ಮಂದಿಯ ಕೆಲವರಿಗೆ ಆಂಗ್ಲ ಭಾಷೆಯ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಮಂಗಳೂರಿನಿಂದ ಮಣಿಪಾಲ, ಕುಂದಾಪುರ ಕಡೆಗೆ ತೆರಳುವ ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆ ಮರೆಯಾಗಿದೆ. ಸಾರ್ವಜನಿಕರು ಅದರಲ್ಲಿಯೂ ಕನ್ನಡಾಭಿಮಾನಿಗಳ ಕೆಂಗ ಣ್ಣಿಗೆ ಗುರಿಯಾಗಿದೆ. ಪ್ರಯಾಣಿಕರೆಲ್ಲರಿಗೂ ಆಂಗ್ಲ ಭಾಷೆಯ ಬಗ್ಗೆ ಜ್ಞಾನವಿರುವುದಿಲ್ಲ. ಹಾಗಾಗಿ ಉಡುಪಿ ಅಥವಾ ಮಣಿಪಾಲಕ್ಕೆ ಹೋಗುವ ಇಂಗ್ಲಿಷ್‌ ಬಾರದ ಪ್ರಯಾಣಿಕರು ಬಸ್‌ ಹತ್ತಲು ಪರದಾಡುವ ಸ್ಥಿತಿ ಉಂಟಾಗಿದೆ.

ಇನ್ನು, ನಗರದ ಕೆಲವೊಂದು ಅಂಗಡಿಗಳ ಮುಂದೆ ಅಳವಡಿಸಿರುವ ನಾಮಫಲಕಗಳಲ್ಲಿಯೂ ಕನ್ನಡ ಭಾಷೆ ಮಾಯವಾಗಿದೆ. ಅಂಗಡಿ ಅಥವಾ ವಾಣಿಜ್ಯ ಸಂಕೀರ್ಣಗಳಿಗೆ ಪರವಾನಿಗೆ ನೀಡಬೇಕಾದರೆ, ಕನ್ನಡ ನಾಮಫಲಕ ಅಳವಡಿಕೆಯ ನಿಯಮವಿದೆ. ಕನ್ನಡ ನಾಮಫಲಕ ಅಳವಡಿಸಿಕೊಳ್ಳದಿದ್ದರೆ ಪರವಾನಿಗೆ ರದ್ದುಗೊಳಿಸುವ ಅಧಿಕಾರವೂ ಸ್ಥಳೀಯಾಡಳಿತಕ್ಕಿದೆ.ಕಾಯ್ದೆಯ ಪ್ರಕಾರ ನಾಮಫಲಕಗಳಲ್ಲಿ ಶೇ. 70ರಷ್ಟು ಕನ್ನಡ ಮತ್ತು ಶೇ. 30ರಷ್ಟು ಅನ್ಯಭಾಷೆಗಳಿರಬಹುದು. ಆದರೆ ನಗರದ ಕೆಲವೊಂದು ಅಂಗಡಿಗಳ ನಾಮಫಲಕಗಳಲ್ಲಿ ಕೇವಲ ಆಂಗ್ಲ ಭಾಷೆ ಮಾತ್ರ ರಾರಾಜಿಸುತ್ತಿದೆ.

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next