Advertisement

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸುತ್ತೋಲೆ ಹೊರಡಿಸಿದ ಸರಕಾರ

10:54 PM Nov 27, 2020 | sudhir |

ಬೆಂಗಳೂರು: 2020-21ನೇ ವರ್ಷವನ್ನು ಕನ್ನಡ ಕಾಯಕ ವರ್ಷಾಚರಣೆ ಹಿನ್ನೆಲೆಯಲ್ಲಿ ಸರಕಾರದ ಎಲ್ಲ ಇಲಾಖೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಸುತ್ತೋಲೆ ಹೊರಡಿಸಿದ್ದಾರೆ.

Advertisement

ತಂತ್ರಾಂಶದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಬಳಸಲು ಕಾರ್ಯಕ್ರಮ ರೂಪಿಸುವುದು. ಇಲಾಖೆಗಳು ರೂಪಿಸುವ ನೀತಿ, ಕರಡು ಪ್ರತಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಿದ್ಧಪಡಿಸಿ ಹಾಗೂ ಅನುಮೋದಿತ ಅಂತಿಮ ಪ್ರತಿಯನ್ನು ಕನ್ನಡದಲ್ಲಿ ಸಿದ್ಧಪಡಿಸುವುದು. ತಂತ್ರಾಂಶ ವ್ಯವಸ್ಥೆ ಮೂಲಕ ಅರ್ಜಿದಾರರಿಗೆ ಎಸ್‌ಎಂಎಸ್‌ ಹಾಗೂ ಇ-ಮೇಲ್‌ಗ‌ಳನ್ನು ಕನ್ನಡದಲ್ಲಿ ಕಳುಹಿಸುವುದು. ಕರ್ನಾಟಕದ ನಗರ ಪಟ್ಟಣಗಳ ಹೆಸರುಗಳನ್ನು ಕನ್ನಡದಲ್ಲಿಯೇ ಬರೆಯುವುದು, ಮೈಲುಗಲ್ಲುಗಳ ಮೇಲೆ ಕನ್ನಡ ಅಂಕಿ ಮತ್ತು ಅಕ್ಷರ ಬಳಕೆ, ಎಲ್ಲ ಇಲಾಖೆಗಳ ಜಾಲತಾಣಗಳ ಪ್ರಧಾನ ಹಾಗೂ ಒಳ ಪುಟಗಳು, ಸಾಮಾಜಿಕ ಜಾಲತಾಣದಲ್ಲೂ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡುವುದು. ಇಲಾಖೆ ಟಿಪ್ಪಣಿಗಳು, ಸಚಿವ ಸಂಪುಟದ ಟಿಪ್ಪಣಿ, ಕಾಯ್ದೆ ಕಾನೂನು ಆದೇಶಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬಳಕೆ ಮಾಡುವುದು. ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಪ್ಯಾಕೆಟ್‌ ಮೇಲೆ ಕನ್ನಡ ಬಳಕೆ ಮಾಡಲು ಆಗ್ರಹಿಸುವುದು. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನರ್ಸಿಂಗ್‌ ಹೋಂಗಳು ಸಾರ್ವಜನಿಕ ಮಾಹಿತಿಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಕಲ್ಲಿದ್ದಲು ಹೊಗೆಯಿಂದ ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

Advertisement

Udayavani is now on Telegram. Click here to join our channel and stay updated with the latest news.

Next