Advertisement

ಕನ್ನಡ ಚಿತ್ರರಂಗಕ್ಕೆ ಇಂದು 90 ವರ್ಷ; ಸಿಎಂ ಅವರಿಂದ “ಸಿನಿ 90′ ಲಾಂಛನ ಬಿಡುಗಡೆ

11:45 PM Mar 02, 2024 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗ ಆರಂಭವಾಗಿ ಇಂದಿಗೆ 90 ವರ್ಷವಾಗಿದ್ದು, ಈ ಸಂಭ್ರಮವನ್ನು ಆಚರಿಸಲು ಚಿತ್ರರಂಗ ಮುಂದಾಗಿದೆ.

Advertisement

ಕನ್ನಡದ ಮೊದಲ ವಾಕಿcತ್ರ “ಸತಿ ಸುಲೋಚನಾ’ 1934ರ ಮಾ. 3ರಂದು ತೆರೆಕಂಡಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ 90 ವರ್ಷ ನಡೆದುಬಂದ ಹಾದಿಯ ಕುರಿತು “ಸಿನಿ 90′ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರ್‌ನಲ್ಲಿ ಸಂಜೆ 5.30ಕ್ಕೆ ಲಾಂಛನ ಬಿಡುಗಡೆ ಹಾಗೂ ವಾಣಿಜ್ಯ ಮಂಡಳಿಯ ಯೂಟ್ಯೂಬ್‌ ಚಾನೆಲ್‌ಗೆ ಚಾಲನೆ ನೀಡಲಿದ್ದಾರೆ.

90ರ ಸಂಭ್ರಮವನ್ನು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ಕನ್ನಡ ಚಿತ್ರೋದ್ಯಮವು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮಂಡಳಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next