Advertisement

Kananda Cinema; ತೆರೆಗೆ ಸಿದ್ದವಾದ ಕ್ರೈಂ ಥ್ರಿಲ್ಲರ್ ನಟ್ವರ್ ಲಾಲ್

03:51 PM Feb 15, 2024 | Team Udayavani |

ನಟ್ವರ್ ಲಾಲ್‌- ಹೀಗೊಂದು ಸಿನಿಮಾ ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ವಿ.ಲವ ಈ ಸಿನಿಮಾದ ನಿರ್ದೇಶಕರು.

Advertisement

ಚಿತ್ರದ ಬಗ್ಗೆ ಮಾತನಾಡುವ ಲವ,”ಇದೊಂದು ಕ್ರೈಂ ಥ್ರಿಲ್ಲರ್‌, ಆ್ಯಕ್ಷನ್‌ ಚಿತ್ರ. ಬೆಂಗಳೂರಿನಲ್ಲಿ ನಡೆದ ನೈಜಘಟನೆ ಈ ಚಿತ್ರಕ್ಕೆ ಸ್ಫೂರ್ತಿ. ತನುಶ್‌ ಶಿವಣ್ಣ ಈ ಚಿತ್ರದ ನಾಯಕ. ಸೋನಾಲ್‌ ಮೊಂತೆರೊ ನಾಯಕಿ. ನಾಗಭೂಷಣ, ಕಾಕ್ರೋಜ್‌ ಸುಧಿ, ಯಶ್‌ ಶೆಟ್ಟಿ, ರಾಜೇಶ್‌ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್‌, ಸುಂದರರಾಜ್, ಕಾಂತರಾಜು ಕಡ್ಡಿಪುಡಿ, ಸುಜಯ್‌ ಶಾಸ್ತ್ರಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಧರ್ಮವಿಶ್‌ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್‌ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್‌ ಸಂಕಲನ ಈ ಚಿತ್ರಕ್ಕಿದೆ. ಟ್ರೇಲರ್‌ನಲ್ಲಿ ಈ ಚಿತ್ರದ ಎರಡನೇ ಭಾಗ ಬರುವ ಸುಳಿವು ಕೂಡ ನೀಡಿದ್ದೇವೆ’ ಎಂದರು.

ತನುಶ್‌ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. “ನಾನು ನಾಯಕನಾಗಿ ನಟಿಸಿರುವ ನಾಲ್ಕನೇ ಚಿತ್ರ. ನಾನು ಎಂಟು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ನಿರ್ಮಾಣ ಕೂಡ ನನ್ನದೆ. ಒಂದು ಹಂತದಲ್ಲಿ ಹಣದ ಸಮಸ್ಯೆಯಿಂದಾಗಿ ಸಿನಿಮಾ ನಿಲ್ಲಿಸಿ ಬಿಡೋಣ ಅಂದುಕೊಂಡೆ. ಆದರೆ ನಾನು ನಂಬಿರುವ ಅಮ್ಮನವರ ದಯೆಯಿಂದ ಅನೇಕ ಸ್ನೇಹಿತರು ನನ್ನ ಸಹಾಯಕ್ಕೆ ಬಂದರು. ಅವರೆಲ್ಲರ ಸಹಾಯ ಹಾಗೂ ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇದೇ 23 ಬಿಡುಗಡೆಯಾಗುತ್ತಿದೆ’ ಎಂದರು.

ಸೋನಾಲ್‌ ಮೊಂತೆರೋ ಈ ಚಿತ್ರದ ನಾಯಕಿ. ನಂದಿನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ಹರಿಣಿ ಶ್ರೀಕಾಂತ್‌, ರಘು ರಮಣಕೊಪ್ಪ, ಕಾಕ್ರೋಜ್‌ ಸುಧಿ, ವಿಜಯ್‌ ಚೆಂಡೂರ್‌ ಕೂಡಾ ಮಾತನಾಡಿದರು

Advertisement

Udayavani is now on Telegram. Click here to join our channel and stay updated with the latest news.