Advertisement
ಆದರೆ, ಪರಭಾಷೆಯ ಪ್ರಭಾವಕ್ಕೆ ಸಿಲುಕಿರುವ ಇಂಥ ರಾಜಧಾನಿಯಲ್ಲೂ ಕನ್ನಡಿಗರು ಹೆಮ್ಮೆಪಡುವಂಥ ಒಂದು ಹೋಟೆಲ್ ಇದೆ. ಅದು ಕನ್ನಡ ಕೆಫೆ! ಜಯನಗರ 4ನೇ ಬ್ಲಾಕ್‌ನಲ್ಲಿರುವ ಈ ಹೋಟೆಲ್‌ನಲ್ಲಿ ಎಲ್ಲಿ ನೋಡಿದರೂ, ಕನ್ನಡಮಯ. ಕುವೆಂಪು- ಬೇಂದ್ರೆಯಾದಿಯಾಗಿ ಕನ್ನಡದ ಜ್ಞಾನಪೀಠಿಗಳು ಇಲ್ಲಿ ನಗುನಗುತ್ತಾ ಸ್ವಾಗತಿಸುತ್ತಾರೆ.ಸುರೇಶ್‌ಗೌಡ ಹಾಗೂ ವೀರೇಂದ್ರ ಅವರ ಮಾಲೀಕತ್ವದಲ್ಲಿ ಆರಂಭವಾದ ಈ ಹೋಟೆಲ್, ಹಸಿವನ್ನು ತಣಿಸುತ್ತಾ, ತಣ್ಣಗೆ ಕನ್ನಡದ ಸೇವೆಯನ್ನೂ ಮೆರೆಯುತ್ತಿದೆ. ಈ ಹೋಟೆಲ್‌ನಲ್ಲಿ ಗ್ರಾಹಕರಿಗೆ ನೀಡುವ ಬಿಲ್ ಕೂಡ ಕನ್ನಡದ ಅಕ್ಷರಗಳಲ್ಲಿಯೇ ಮುದ್ರಿತವಾಗಿರುತ್ತದೆ.
ಹಿರಿಯ ಹೆಂಗಸೊಬ್ಬರು ಒಮ್ಮೆ ಈ ಹೋಟೆಲ್‌ಗೆ ಬಂದಿದ್ದರಂತೆ. ಊಟ ಮಾಡಿ, ಸೆಲ್ಫಿಗಳನ್ನು ತೆಗೆದುಕೊಂಡು, ನಂತರ ಮಾಲೀಕರ ಬಳಿ ಬಂದು ಹೀಗೆ ಹೇಳಿದಳು- “ನಿಮಗೆ ತುಂಬಾ ಧನ್ಯವಾದ. ಕನ್ನಡದ ಮೇಲಿರುವ ನಿಮ್ಮ ಅಭಿಮಾನ ಸದಾ ಹೀಗೆಯೇ ಇರಲಿ. ನನ್ನ ಮಗ ಜರ್ಮನಿಯಿಂದ ಕರೆಮಾಡಿ, ಜನರೆಲ್ಲಾ ಕನ್ನಡ ಕಫೆ ಬಗ್ಗೆ ತುಂಬಾ ಮಾತನಾಡುತ್ತಿದ್ದಾರೆ. ಒಮ್ಮೆ ನೀನು ಅಲ್ಲಿಗೆ ಹೋಗಿ, ಫೋಟೋಗಳನ್ನು ಕಳಿಸು ಎಂದಿದ್ದ. ಅದಕ್ಕೆ ನಾನು ಬಂದೆ’!
Related Articles
ಅಂದಹಾಗೆ, ಈ ಹೋಟೆಲ್‌ನಲ್ಲಿ ಪುಟ್ಟ ಗ್ರಂಥಾಲಯವೂ ಇದೆ. ಓದುವ ಆಸಕ್ತಿ ಇರುವ ಗ್ರಾಹಕರು, ಇಲ್ಲೇ ಓದುತ್ತಾ ಕೂರಬಹುದು. ಇಲ್ಲವೇ ಪುಸ್ತಕದ ಬೆಲೆಯನ್ನು ನೀಡಿ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ, ಮರಳಿ ಪುಸ್ತಕವನ್ನು ಹಿಂತಿರುಗಿಸಬಹುದು. ಕೊಟ್ಟ ಹಣವನ್ನೂ ವಾಪಸು ಪಡೆಯಬಹುದು.
Advertisement
ಗೋಡೆ ಮೇಲೆ ಕನ್ನಡತನಹೋಟೆಲ್ ಗೋಡೆಗಳ ಮೇಲೆ ಕನ್ನಡತನವನ್ನು ಸಂಕೇತಿಸುವ ಫೋಟೋಗಳನ್ನೂ ಹಾಕಲಾಗಿದೆ. ಕರ್ನಾಟಕದ ಸುಂದರ ನಕಾಶೆಯಲ್ಲಿ, ಪ್ರಸಿದ್ಧ ತಾಣಗಳನ್ನು ಗುರುತಿಸಲಾಗಿದೆ. ಒಂದು ಚಿತ್ರದಲ್ಲಿ ಸ್ಕ್ಯಾನಿಂಗ್ ಕೋಡ್ ಇದ್ದು, ಮೊಬೈಲ್‌ನಲ್ಲಿ ಅದನ್ನು ಸ್ಕ್ಯಾನ್ ಮಾಡಿದರೆ ಕರ್ನಾಟಕದ ಇತಿಹಾಸವೇ ತೆರೆದುಕೊಳ್ಳುತ್ತದೆ. ಜ್ಞಾನಪೀಠ ಪುರಸ್ಕೃತರು, ಕನ್ನಡ ಸಾಹಿತಿಗಳು, ಕನ್ನಡ ಸಾಧಕರ ಜೊತೆಗೆ ಇಲ್ಲಿನ ಜಾನಪದ ಕಲೆಗಳ ವರ್ಣರಂಜಿತ ಚಿತ್ರಗಳನ್ನು ಹಾಕಲಾಗಿದೆ. ನಿಜಕ್ಕೂ ಈ ಹೋಟೆಲ್‌ಗೆ ಬಂದರೆ, ಖುಷಿಯಾಗುತ್ತದೆ. ಕನ್ನಡ ಸಾಹಿತ್ಯ, ಕಲೆಯನ್ನು ಬಿಂಬಿಸುವ ಚಿತ್ರಗಳನ್ನು ನೋಡಿದಾಗ ಮನಸ್ಸು ಅರಳುತ್ತದೆ. ಊಟೋಪಾಹಾರವೂ ಚೆನ್ನಾಗಿದೆ.
– ಮಹಾದೇವಪ್ಪ, ಗ್ರಾಹಕ ಕನ್ನಡ ಜಾಗೃತಿಯನ್ನು ಮೂಡಿಸುವ ಅಪರೂಪದ ಕೆಲಸವನ್ನು ಕನ್ನಡ ಕೆಫೆ ಮಾಡುತ್ತಿದೆ. ಲೈಬ್ರರಿ, ಇಲ್ಲಿನ ಚಿತ್ರಗಳಲ್ಲಿ ಕನ್ನಡತನವೇ ತುಂಬಿಕೊಂಡಿದೆ. ಬೆಂಗಳೂರಿನಲ್ಲಿ ಇಂಥ ಹೋಟೆಲ್‌ಗಳ ಸಂಖ್ಯೆ ಹೆಚ್ಚಬೇಕಿದೆ.
– ಸತೀಶ್ ಗೌಡ, ಕ.ರ.ವೆ. ಅಧ್ಯಕ್ಷ, ಬಸವನಗುಡಿ – ಉಮೇಶ ರೈತನಗರ