“ಗಡಿನಾಡು’ ಬೆಳಗಾವಿಯಲ್ಲಿ ಯಾವಾಗಲೂ ತಾರಕಕ್ಕೇರುವ, ಇದ್ದಕ್ಕಿದ್ದಂತೆ ಕಿಚ್ಚು ಹೊತ್ತಿಸಿ ಕಾವು ಪಡೆದುಕೊಳ್ಳುವ ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆ, ಚಳುವಳಿ-ಹೋರಾಟಗಳೆ ಈ ಚಿತ್ರದ ಹೈಲೈಟ್. ಇದರ ಜೊತೆಗೊಂದು ನವಿರಾದ ಪ್ರೇಮಕಥೆ ಇದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಸೌಹಾರ್ಧ ಭಾವನೆಯನ್ನು ಸಾರುವ ಸಂದೇಶ ಕೂಡ ಇರಲಿದೆಯಂತೆ.
Advertisement
ಇನ್ನು ಬೆಳಗಾವಿ ಮೂಲದ ನಿರ್ಮಾಪಕ ಮತ್ತು ಕನ್ನಡಪರ ಹೋರಾಟಗಾರ ವಸಂತ ಮುರಾರಿ ದಳವಾಯಿ “ಅಕ್ಷಯ ಫಿಲಂ ಮೇಕರ್’ ಬ್ಯಾನರ್‌ನಲ್ಲಿ “ಗಡಿನಾಡು’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ನಾಗ್ ಹುಣಸೋಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗೆ ಚಿತ್ರದ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡಪರ ಹೋರಾಟಗಾರರ ಸಮ್ಮುಖದಲ್ಲಿ ತನ್ನ
ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, “ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು
ಬೆಳಗಾವಿಗೆ ಬರುವ ನಾಯಕ ಅಲ್ಲಿನ ಗಡಿ ಸಮಸ್ಯೆಯನ್ನು ಕಂಡು, ತಾನೇ ಒಂದು ಗಡಿನಾಡು ಸೇನೆಯನ್ನು ಪ್ರಾರಂಭಿಸುತ್ತಾನೆ. ನಂತರ ಅವರ ಕಾರ್ಯಕ್ಕೆ ಹಲವು ಅಡ್ಡಿಯಾಗುತ್ತಾರೆ. ಇದರ ನಡುವೆ ಮರಾಠಿ ಹುಡುಗಿಯೊಬ್ಬಳ ಜೊತೆ ನಾಯಕನಿಗೆ ಪ್ರೀತಿ ಮೂಡುತ್ತದೆ.
Related Articles
ಕಥೆಯ ಎಳೆಯನ್ನು ಬಿಚ್ಚಿಟ್ಟಿತು. “ಗಡಿನಾಡು’ ಚಿತ್ರದ ಹಾಡುಗಳಿಗೆ ಎಲ್ವಿನ್ ಜೋಶ್ವಾ ಸಂಗೀತ
ಸಂಯೋಜಿಸಿದ್ದು, ಸಂತೋಷ್ ನಾಯಕ್ ಮತ್ತು ನಾಗ್ ಹುಣಸೋಡ್ ಸಾಹಿತ್ಯ ರಚಿಸಿದ್ದಾರೆ. ಧನಂಜಯ್ ಹರಿಕೃಷ್ಣ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.
Advertisement
ಸದ್ಯ ಬಿಡುಗಡೆಯಾಗಿರುವ “ಗಡಿನಾಡು’ ಚಿತ್ರದ ಹಾಡುಗಳು ನಿಧಾನವಾಗಿ ಕೇಳುಗರ ಗಮನ ಸೆಳೆಯುತ್ತಿದ್ದು, ಇದೇ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
– ಜಿ. ಎಸ್. ಕಾರ್ತಿಕ ಸುಧನ್