Advertisement

ಕನ್ನಡದ ಉಳಿವಿಗೆ ಕನ್ನಡ ಭವನದಿಂದ ಸೇವೆ 

04:19 PM Aug 01, 2017 | |

ಮುಂಬಯಿ: ಮುಂಬಯಿ ಕನ್ನಡಿಗರ ವಿದ್ಯಾ ಸಂಸ್ಥೆಗಳಲ್ಲೊಂದಾದ ಪ್ರತಿಷ್ಠಿತ ಕನ್ನಡ ಭವನ ಎಜುಕೇಶನ್‌ ಸೊಸೈಟಿ ಯಿಂದ 1964ರಲ್ಲಿ ಸ್ಥಾಪಿಸಲ್ಪಟ್ಟ ಕನ್ನಡ ಭವನ ಎಜುಕೇಶನ್‌ ಸೊಸೈಟಿ ಹೈಸ್ಕೂಲ್‌ನಲ್ಲಿ 2017-2018 ರ  ಶೈಕ್ಷಣಿಕ ಸಾಲಿನ ಶಾಲಾ ಪರಿಕರಗಳನ್ನು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

Advertisement

ಅಧ್ಯಕ್ಷತೆ ವಹಿಸಿದ್ದ   ಸೊಸೈಟಿಯ  ಕಾರ್ಯಾಧ್ಯಕ್ಷ ಎ. ಬಿ. ಶೆಟ್ಟಿ  ಅವರು ಮಾತನಾಡಿ, ಶಾಲಾ ಪರಿಕರಗಳನ್ನು ದಾನಿಯೊಬ್ಬರ ಆರ್ಥಿಕ ಸಹಾಯದಿಂದ ನೀಡ ಲಾಯಿತು.  ಕಳೆದ ಕೆಲವು ವರ್ಷಗಳಂತೆ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಕಂಪ್ಯೂಟರ್‌ ತರಬೇತಿ ಶುಲ್ಕ ಸೇರಿದಂತೆ ಇತರ ಇಲ್ಲಾ ಸಲಕರಣೆಗಳನ್ನು ಒದ ಗಿಸಲಾಗುತ್ತಿದ್ದು ಮುಂದೆಯೂ  ಇದೇ ನಿಧಿಯಿಂದ ಶಾಲೆಗೆ ಹೊಸದಾಗಿ ಸೇರ್ಪಡೆಯಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಈ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು.  ಕನ್ನಡ ಶಾಲೆಗೆ ವಿದ್ಯಾರ್ಥಿ ಗಳನ್ನು ಕಳುಹಿಸುತ್ತಿರುವ ಪಾಲಕರಿಗೆ ಆಗುವ ಯಾವುದೇ ರೀತಿಯ ತೊಂದರೆ ಹಾಗೂ ಈ ನಿಟ್ಟಿನಲ್ಲಿ ಅವರಿಗೆ ಆಗುತ್ತಿರುವ ಆರ್ಥಿಕ ಅಡಚಣೆಯನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶ ಕನ್ನಡ ಭವನದ್ದಾಗಿದ್ದು,  ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವ ದಾನಿಗಳ ನೆರವನ್ನು ಅವರ ಇಚ್ಛೆಯ ಮೇರೆಗೆ ಅವರ ಹೆಸರನ್ನು ಉಲ್ಲೇಖೀಸದೇ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. 55 ವರ್ಷಗಳ ಹಿಂದೆ ಹಿರಿಯರು ನೆಟ್ಟ ಗಿಡವು ಇಂದು ಹೆಮ್ಮರ ವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು  ನೀಡುತ್ತಿರುವುದು ತೃಪ್ತಿಯನ್ನು ತಂದಿದೆ.  ಇಂದಿನ ಜಾಗತೀಕರಣದ  ಪ್ರಭಾವದಲ್ಲಿಯೂ 55 ವರ್ಷ ಗಳಿಂದ ಇಂಗ್ಲಿಷ್‌ ಮಾಧ್ಯಮಕ್ಕೆ ಮಾರು ಹೋಗದೆ ನಿರಂತರ ಬರೇ ಕನ್ನಡ ಮಾಧ್ಯಮವನ್ನು ಅವಲಂಬಿಸಿ ಮುಂಬಯಿಯಲ್ಲಿ ಕನ್ನಡದ ಉಳಿವಿಗಾಗಿ ಕನ್ನಡ ಭವನವು ಮಹತ್ತರ ಸೇವೆ ಸಲ್ಲಿಸುತ್ತಿದೆ. ವಿದ್ಯಾರ್ಥಿಗಳು ಈ ಎಲ್ಲಾ ಶಾಲಾ ಪರಿಕರಗಳ ನೆರವನ್ನು ಸದುಪ ಗೊಳಿಸಿಕೊಳ್ಳಬೇಕು, ಹಾಗೂ ಹೆಚ್ಚೆಚ್ಚು ವಿದ್ಯಾರ್ಥಿಗಳು  ತಮ್ಮ ಮಾತೃಭಾಷೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡು ವಂತಾಗಲಿ ಎಂದು ಆಶಿಸುತ್ತಾ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹರಸಿದರು.

ಇದೇ ಸಂದರ್ಭದಲ್ಲಿ ಉಪ ಕಾರ್ಯಾಧ್ಯಕ್ಷ ಡಿ. ಬಿ. ಅಮೀನ್‌, ಗೌರವ ಪ್ರಧಾನ ಕಾರ್ಯ ದರ್ಶಿ ಶೇಖರ ಎ. ಅಮೀನ್‌ ಇವರು ಸಭೆಯನ್ನುದ್ದೇಶಿ ಸಮಯೋಚಿತವಾಗಿ ಮಾತನಾಡಿದರು.  

ಸಮಾರಂಭದ ಆರಂಭದಲ್ಲಿ ಶಾಲಾ ಕಾಲೇಜಿನ ಪ್ರಾಂಶುಪಾಲ ಎಲ್‌. ರಾಧಾಕೃಷ್ಣನ್‌ ಇವರು ಸ್ವಾಗತಿಸಿ,  ಸಂಸ್ಥೆಯ ಬಗ್ಗೆ ಮಾತನಾಡಿದರು.  ವೇದಿಕೆಯಲ್ಲಿ ಸೊಸೈಟಿಯ ಗೌರವ ಕೋಶಾಧಿಕಾರಿ ಪುರುಷೋತ್ತಮ ಎಂ.  ಪೂಜಾರಿ ಉಪಸ್ಥಿತರಿದ್ದರು. 

ಸಮವಸ್ತ್ರ,  ಸ್ಕೂಲ್‌ ಬ್ಯಾಗ್‌ ಹಾಗೂ ಇನ್ನಿತರ ಸಲಕರಣೆಗಳನ್ನು ವಿದ್ಯಾರ್ಥಿಗಳಿಗೆ ಪ್ರದಾನಿಸುವಲ್ಲಿ ಶಿಕ್ಷಕಿ ವಸಂತಿ  ಶೆಟ್ಟಿ ಹಾಗೂ ಅಮೃತಾ ಶೆಟ್ಟಿ ಅವರು ಸಹಕರಿಸಿದರು. ಶಿಕ್ಷಕ ವಿಟuಲ ಮಣೂರೆ ವಂದಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next