Advertisement

17ನೇ ಅಕ್ಷರ ಜಾತ್ರೆಗೆ ಕಂಗೊಳಿಸುತ್ತಿದೆ ಕನ್ನಡ ಭವನ

10:56 AM Dec 08, 2018 | Team Udayavani |

ಕಲಬುರಗಿ: ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 8ರಿಂದ ಆರಂಭವಾಗಲಿದ್ದು, ಪ್ರಾಧ್ಯಾಪಕಿ, ಸಾಹಿತಿ ಡಾ| ನಾಗಾಬಾಯಿ ಬುಳ್ಳಾ ಅವರ ಸರ್ವಾಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ಅಕ್ಷರ ಜಾತ್ರೆ ನಡೆಯಲಿದ್ದು, ಇಡೀ ಕನ್ನಡ ಭವನ ಆವರಣ ನವ ವಧುವಿನಿಂದ ಕಂಗೊಳಿಸುತ್ತಿದೆ. ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಸಮ್ಮೇಳನದ ವೇದಿಕೆ ಸೇರಿದಂತೆ ಸಂಪೂರ್ಣ ಕನ್ನಡ ಭವನದ ಆವರಣವನ್ನು ಸಿಂಗಾರಗೊಳಿಸಲಾಗಿದೆ.

Advertisement

ಕನ್ನಡದ ಧ್ವಜ ಮತ್ತು ದೇಶಿ ಸಂಸ್ಕೃತಿಯನ್ನು ಬಿಂಬಿಸುವ ಛತ್ರಿ, ಚಾದರ್‌ಗಳು ರಾರಾಜಿಸುತ್ತಿವೆ. ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಹಾಗೂ ಪದಾಧಿಕಾರಿಗಳು, ಸ್ವಾಗತ ಸಮಿತಿ ಸದಸ್ಯರು ಶುಕ್ರವಾರ ರಾತ್ರಿಯವರೆಗೆ ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. 

ಶನಿವಾರ ಬೆಳಗ್ಗೆ 9 ಗಂಟೆಗೆ ನಗರದ ನೆಹರು ಗಂಜ್‌ನ ನಗರೇಶ್ವರ ಬಾಲ ಭವನದಿಂದ ಬಾಪುಗೌಡ ದರ್ಶನಾಪುರ ರಂಗಮಂದಿರದ ವರೆಗೆ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ ನಡೆಯಲಿದೆ. 19 ವರ್ಷಗಳ ನಂತರ ಮಹಿಳೆಯೊಬ್ಬರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ ಕನ್ನಡದ ತೇರು ಎಳೆಯುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ನಂತರ ಸಮ್ಮೇಳನಕ್ಕೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಚಾಲನೆ ನೀಡುವರು.

ಸಮ್ಮೇಳನಕ್ಕಾಗಿ 325ಕ್ಕೂ ಹೆಚ್ಚು ವಿವಿಧ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗಿದ್ದು, ಮೆರವಣಿಗೆಯಲ್ಲಿ 15ಕ್ಕೂ ಅಧಿಕ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಈ ಬಾರಿ ಸಮ್ಮೇಳನದಲ್ಲಿ ದೇಶಿ ಸಂಸ್ಕೃತಿ ಮತ್ತು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಗಣ್ಯರು, ಶಿಕ್ಷಕರು, ಶಾಲಾ ಮಕ್ಕಳು, ಕನ್ನಡಾಭಿಮಾನಿಗಳು ಸೇರಿ ಎರಡು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮ್ಮೇಳನಕ್ಕೆ ಐದು ಸಾವಿರ ಕನ್ನಡಾಸಕ್ತರು ಭಾಗಹಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ.

ಡಿ.8 ಮತ್ತು ಡಿ. 9ರಂದು ನಡೆಯುವ ಅಕ್ಷರ ಜಾತ್ರೆಯಲ್ಲಿ ವಿವಿಧ ವಿಚಾರ ಸಂಕಿರಣ ಮತ್ತು ಕವಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪುಸ್ತಕ ಮಳಿಗೆಗಳಿಗೂ ಆದ್ಯತೆ ನೀಡಲಾಗಿದೆ. ಸಾಹಿತ್ಯಾಭಿಮಾನಿಗಳನ್ನು ಸೆಳೆಯಲು ನಗರಾದ್ಯಂತ ಸಮ್ಮೇಳನದ ಸ್ವಾಗತ ಫಲಕಗಳನ್ನು ಅಳವಡಿಸಲಾಗಿದೆ.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಇರುವರೆಗೂ 16 ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದೆ. 17ನೇ ಸಮ್ಮೇಳನವನ್ನು ಸಕಲ ರೀತಿಯಲ್ಲೂ ಅರ್ಥಪೂಣವಾಗಿ ಆಚರಿಸಲು ಕಸಾಪ ಅಧ್ಯಕ್ಷ ಮತ್ತು ಪದಾಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹಾಲಿ ಅಧ್ಯಕ್ಷ ವೀರಭದ್ರ ಸಿಂಪಿ ಇದುವರೆಗೂ 9 ವರ್ಷಗಳ ಕಾಲ ಜಿಲ್ಲಾ ಕಸಾಪದ ಸಾರಥ್ಯ ವಹಿಸಿದ್ದು, ಅವರ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ 8ನೇ ಸಮ್ಮೇಳನ ಇದಾಗಿದೆ. ಹೀಗಾಗಿ ಆರು ತಿಂಗಳಿಂದಲೂ ಸಮ್ಮೇಳನಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡು ಬಂದಿದ್ದು, ಶುಕ್ರವಾರವೂ ಸಮ್ಮೇಳನಕ್ಕೆ ಅಂತಿಮ ರೂಪುರೇಷೆ ನೀಡುವಲ್ಲಿ ತಲ್ಲೀನರಾಗಿದ್ದ

Advertisement

Udayavani is now on Telegram. Click here to join our channel and stay updated with the latest news.

Next