Advertisement

ತಾಳಿಕೋಟೆಯ ಬಸವೇಶ್ವರ ಮಾರುಕಟ್ಟೆಯಲ್ಲಿ ಕನ್ನಡ ಕಂಪು

02:20 PM Nov 01, 2021 | Shwetha M |

ತಾಳಿಕೋಟೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವುದರಲ್ಲಿ ತಾಳಿಕೋಟೆಯ ಬಸವೇಶ್ವರ ಮಾರ್ಕೇಟ್‌ ಯಾರ್ಡ್‌ ಮುಂಚೂಣಿಯಲ್ಲಿದೆ.

Advertisement

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಬಸವೇಶ್ವರ ಮಾರ್ಕೇಟ್‌ ಯಾರ್ಡ್‌ನಲ್ಲಿ ಸುಮಾರು 70ಕ್ಕೂ ಹೆಚ್ಚು ವರ್ತಕರಿದ್ದಾರೆ. ದಿನನಿತ್ಯ ರೈತರು ತರುವ ಮಾಲು ಮಸಲುಗಳು ಇಲ್ಲಿಂದಲೇ ಮಾರಾಟವಾಗುವುದು ಸಾಮಾನ್ಯ ವಾಗಿದೆ. ಆದರೆ ರೈತರು ತರುವ ಮಾಲು ಮಸಲಿನ ಚೀಲಗಳ ಮೇಲೆ ವಿಳಾಸವನ್ನು ಸಹ ಅಂಕಿ ಸಂಖ್ಯೆಗಳಲ್ಲಿ ಎಷ್ಟು ಚೀಲ ಯಾರು ತಂದಿದ್ದಾರೆಂಬ ಹೆಸರುಗಳೊಂದಿಗೆ ಕನ್ನಡದ ಲ್ಲಿಯೇ ಉಪಯೋಗಿಸಿ ಬರೆಯುತ್ತಾರೆ. ಅಲ್ಲದೇ ದಿನನಿತ್ಯದ ವ್ಯವಹಾರದ ಬರೆಯುವ ಹೊತ್ತಿಗೆಗಳಾದ ರೋಖಡಿ, ರೋಜ, ಖಾತೆ, ಝಾಂಗಾಡ, ದಾರ ಹೊತ್ತಿಗೆ, ಅಷ್ಟೇ ಅಲ್ಲದೇ ಚೀಟಿ ಪುಸ್ತಕ, ಪಟ್ಟಿ ಪುಸ್ತಕ ಒಳಗೊಂಡಂತೆ ಎಲ್ಲದರಲ್ಲೂ ಸಿಗುವದು ಕನ್ನಡ ಅಕ್ಷರಗಳು ಮಾತ್ರ. ಇಂತಹ ಕನ್ನಡತನವನ್ನು ಶ್ರೀಮಂತಗೊಳಿ ಸುವುದರೊಂದಿಗೆ ವ್ಯವಹಾರ ನಡೆಸುತ್ತಿರುವ ಈ ಬಸವೇಶ್ವರ ಮಾರ್ಕೇಟ್‌ಯಾರ್ಡ್‌ನಲ್ಲಿ ಕನ್ನಡತನದ ಸುಗಂಧ ಬೀರುವ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಅಪ್ಪಟ ಕನ್ನಡತನವನ್ನು ಹೊಂದಿರುವ ಈ ಮಾರುಕಟ್ಟೆಯಲ್ಲಿ ಸುಮಾರು 70 ವರ್ಷದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಗುಮಾಸ್ತರು, ಲೆಕ್ಕಪತ್ರದ ಶಿರ್ಷಿಕೆಯನ್ನು ಹೊಸದಾಗಿ ಕೆಲಸಕ್ಕೆ ಸೇರುವ ಯುವ ಪೀಳಿಗೆಗೆ ಕನ್ನಡದ ಅಂಕಿ ಸಂಖ್ಯೆಗಳನ್ನು ಹೇಳಿ ಕೊಡುವ ಕಾರ್ಯದೊಂದಿಗೆ ಕನ್ನಡತನವನ್ನು ಉಳಿಸಿ ಬೆಳೆಸುತ್ತಿದ್ದಾರೆ.

45 ವರ್ಷದಿಂದ ಬಸವೇಶ್ವರ ಮಾರುಕಟ್ಟೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡದ ಅಕ್ಷರ ಮತ್ತು ಅಂಕಿ ಸಂಖ್ಯೆಗಳನ್ನು ಬಿಟ್ಟರೆ ಇಂಗ್ಲಿಷ್‌ ಅಂಕಿ ಸಂಖ್ಯೆಗಳನ್ನು ಬಳಿಸಿದ ಉದಾಹರಣೆಗಳೇ ಇಲ್ಲ. ಕನ್ನಡ ಅಕ್ಷರ ಅಂಕಿಗಳೆಂದರೆ ಬಹಳ ಪ್ರೀತಿಯಿಂದ ಲೆಕ್ಕ ಶಿರ್ಷಿಕೆಯಲ್ಲಿ ಬರೆಯುತ್ತೇವೆ. -ಶ್ರೀಶೈಲ ಹೋಳಿ, ಎಸ್‌.ವೈ. ಆನೇಸೂರ, ಅಂಗಡಿ ಗುಮಾಸ್ತ

Advertisement

Udayavani is now on Telegram. Click here to join our channel and stay updated with the latest news.

Next