Advertisement

ಕಾಸರಗೋಡು ಕಾಲೇಜಲ್ಲಿ  ಕನ್ನಡ ವಿರೋಧಿ ಬರಹ

08:12 AM Nov 02, 2017 | |

ಕಾಸರಗೋಡು: ಇಲ್ಲಿನ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಗೋಡೆಗಳಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಬರೆದ ವಿರುದ್ಧ ಕನ್ನಡ ವಿದ್ಯಾರ್ಥಿಗಳ ಸಂಘಟನೆ “ಸ್ನೇಹರಂಗ’ದ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರಾಂಶುಪಾಲರ ಕೊಠಡಿ ಮುಂದೆ ಧರಣಿ ನಡೆಸಿದರು.

Advertisement

“ಇದು ಕೇರಳ ನಾಡು, ಕನ್ನಡಿಗರು ಇಲ್ಲಿಂದ ತೊಲಗಿ’ ಎಂದು ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಗೋಡೆ ಬರಹ ಗಳನ್ನು ಬರೆಯಲಾಗಿದೆ. ವರ್ಷಗಳ ಹಿಂದೆಯೂ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಕಾಲೇಜಿನ ಕನ್ನಡ ವಿಭಾಗದ ಗೋಡೆ ಗಳಲ್ಲಿ ಕಿಡಿಗೇಡಿಗಳು ಬರೆದಿದ್ದರು. ಅಂದೂ ಕೂಡ ಕನ್ನಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಕನ್ನಡಿಗ ವಿದ್ಯಾರ್ಥಿಗಳನ್ನು ಕೆರಳಿಸಲು ಮಲಯಾಳದಲ್ಲಿ ಅವ ಹೇಳನ ಕಾರಿಯಾಗಿ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿ ಮನವಿ ಸಲ್ಲಿಸಿದರು. ವ್ಯಾಪಕ ಖಂಡನೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಗೋಡೆಗಳಲ್ಲಿ ಕನ್ನಡ ವಿರೋಧಿ ಬರಹಗಳನ್ನು ಬರೆದು ಕನ್ನಡಿಗರನ್ನು, ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಅವ ಹೇಳನ ಗೈದಿರುವ ಕಿಡಿಗೇಡಿಗಳ ಕೃತ್ಯ ವನ್ನು ಕಾಸರ ಗೋಡಿನ ಕನ್ನಡ ಪರ ಸಂಘ-ಸಂಸ್ಥೆಗಳು ತೀವ್ರವಾಗಿ ಖಂಡಿಸಿದೆ. ಅಲ್ಲದೆ ಕನ್ನಡಿಗ ರನ್ನು ಅವಹೇಳನ ಮಾಡಿರುವ ಕಿಡಿಗೇಡಿ ಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next