Advertisement

ನಟ ಸತೀಶ್ ನೀನಾಸಂ ಅವರಿಗೆ ಮಾತೃವಿಯೋಗ

02:05 PM Oct 01, 2021 | Team Udayavani |

ಬೆಂಗಳೂರು: ಸ್ಯಾಂಡಲ್​ವುಡ್ ನಟ​ ಸತೀಶ್​ ನೀನಾಸಂ ಅವರಿಗೆ ಮಾತೃವಿಯೋಗವಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸತೀಶ್ ಅವರ ತಾಯಿ ಚಿಕ್ಕತಾಯಮ್ಮ (85) ಇಂದು ಬೆಳಿಗ್ಗೆ ಇಹಲೋಕ ತೈಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ.

Advertisement

ಸುಮಾರು ಒಂದು ವರ್ಷದಿಂದ ಚಿಕ್ಕತಾಯಮ್ಮ ಅವರಿಗೆ ಆರೋಗ್ಯ ಸಮಸ್ಯೆ ಇತ್ತಂತೆ. ಸತೀಶ್ ಮತ್ತು ಅವರ ಹೆಂಡತಿ ಇಬ್ಬರು  ಅವರ ಆರೈಕೆ ಮಾಡುತ್ತಿದ್ದರು.

ಪಾಥೀರ್ವ ಶರೀರವನ್ನು ಇಂದೇ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎನ್ನಲಾಗಿದೆ. ಚಿಕ್ಕತಾಯಮ್ಮ ಅವರಿಗೆ ಒಟ್ಟು ಎಂಟು ಮಂದಿ ಮಕ್ಕಳು. ಅವರಲ್ಲಿ ನಾಲ್ಕು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳು.

Advertisement

Udayavani is now on Telegram. Click here to join our channel and stay updated with the latest news.

Next